ಇಬ್ಬರನ್ನು ಪ್ರೀತಿಸಿ ಮದುವೆಯಾದ ಯುವಕ, ಮೊದಲ‌ ರಾತ್ರಿಯಲ್ಲಿ ನಿಲ್ಲದ‌ ಕಿತ್ತಾಟಕ್ಕೆ ಬೇಸತ್ತ ಪತಿರಾಯ

 | 
X
ಅಯ್ಯೋ ಮದುವೆ ಆಗೋಕೆ ಹೆಣ್ಣಿಲ್ಲ ಅನ್ನೋ ಗೋಳು ಹಲವು ಕಡೆ.ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತ ಕೇಳಿದ್ದೇವೆ. ಆದರೆ, ಈಗಂತೂ ಅದೆಷ್ಟೋ ಗಂಡು ಮಕ್ಕಳು ಹುಡುಗಿ ಸಿಗದೆ ಪರದಾಡುತ್ತಿದ್ದಾರೆ. ದೇವರಿಗೆ ಪಾದಯಾತ್ರೆ ಮಾಡಿ ಮದುವೆ ಆಗ್ಲಿ ಅಂತ ಪೂಜೆ ಮಾಡೋದು ನೋಡಿದ್ದೇವೆ.
ಆದ್ರೆ, ತೆಲಂಗಾಣದ ಈ ಸೂರ್ಯದೇವನ ಕಥೆನೇ ಬೇರೆ, ಲಡ್ಡು ಬಂದು ಬಾಯಿಗೆ ಬಿತ್ತು ಅಂತ ಕೇಳಿದ್ದೇವೆ. ಅದು ಇಲ್ಲಿ ನಿಜವಾಗಿದೆ. ಒಬ್ಬ ಯುವಕ ಒಂದೇ ಮಂಟಪದಲ್ಲಿ ಇಬ್ಬರು ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಹೌದು ಒಂದೇ ಛತ್ರದಲ್ಲಿ ಎರಡೆರಡು ಮದುವೆ ಆಗಿರುವ ಭೂಪ ಈ ಸೂರ್ಯದೇವ ಇವ್ನ ಕಥೆಯಲ್ಲಿ 2 ಲಡ್ಡು ಬಂದು ಬಾಯಿಗೆ ಬಿದ್ದಂಗೆ.
ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಅಪರೂಪದ ಮದುವೆ ನಡೆದಿದೆ. ಈ ಸೂರ್ಯದೇವ ಒಂದೇ ಮಂಟಪದಲ್ಲಿ ತನ್ನ ಇಬ್ಬರು ಪ್ರೇಯಸಿಯರಾದ ಲಾಲ್ ದೇವಿ & ಝಲ್ಕರಿ ದೇವಿ ಕೈ ಹಿಡಿದಿದ್ದಾನೆ.ಸೂರ್ಯದೇವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಬಹಳ ಶ್ರೀಮಂತ ರೈತ. ಈತ ಒಂದೇ ಸಮಯದಲ್ಲಿ ಇಬ್ಬರು ಯುವತಿಯರನ್ನು ಪ್ರೀತಿಸಿದ್ದಾನೆ. ಪ್ರೀತಿಯ ವಿಷಯವನ್ನು ಇಬ್ಬರು ಯುವತಿಯರಿಗೆ ತಿಳಿಸಿದ್ದಾನೆ. ಇಬ್ಬರು ಯುವತಿಯರು ಅವನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ.
ಇಬ್ಬರನ್ನು ಪ್ರೀತಿಸಿದ ಸೂರ್ಯದೇವ್‌ ಒಂದೇ ಸಮಯದಲ್ಲಿ ಒಟ್ಟಿಗೆ ಇಬ್ಬರನ್ನು ಮದುವೆಗೆ ಒಪ್ಪಿಸಿದ್ದಾನೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಬಾಂಡ್ ಕೂಡ ಬರೆದು ಕೊಟ್ಟಿದ್ದಾನೆ.ಸೂರ್ಯದೇವ್ ಲಾಲ್ ದೇವಿ ಹಾಗೂ ಝಲ್ಕರಿ ದೇವಿ ಇಬ್ಬರನ್ನೂ ಪ್ರೀತಿಸಿದ್ದ, ಆದ್ರೆ ಗ್ರಾಮದ ಹಿರಿಯರಿಗೆ ಈ ಮದುವೆ ಇಷ್ಟ ಇರಲಿಲ್ಲ. 
ಆದರೆ ಇಬ್ಬರು ಯುವತಿಯರು ಸೂರ್ಯದೇವ್​​ನನ್ನೇ ಮದುವೆಯಾಗಿ ಒಟ್ಟಿಗೆ ಬಾಳುವುದಾಗಿ ಮಾತು ನೀಡಿದಾಗ ಗ್ರಾಮಸ್ಥರು ಮದುವೆಗೆ ಒಪ್ಪಿದ್ದಾರೆ. ಇನ್ವಿಟೇಷನ್ ಕಾರ್ಡ್​​ನಲ್ಲೂ ಇಬ್ಬರು ವಧುಗಳ ಹೆಸರು ಹಾಕಿಸಿ ಆಮಂತ್ರಣ ನೀಡಿದ್ದು ವಿಶೇಷವಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.