ಅಭಿಮಾನ್ಯು ಕೋಪಕ್ಕೆ ಕಾಡನೆ ನೆಲಕ್ಕೆ ಉರುಳಿದೆ, ಕಾಡಿನಲ್ಲಿ ರೊ ಚ್ಚಿಗೆದ್ದ ಅ.ಭಿಮನ್ಯು

 | 
Gn

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಸೋಮವಾರ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಕಾಡಾನೆಯ ದಾಳಿಗೆ ತುತ್ತಾಗಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿಯನ್ನು ಹೊತ್ತಿದ್ದ, ಅರ್ಜುನ ಆನೆ ಮೃತಪಟ್ಟಿದೆ. ಕಾರ್ಯಾಚರಣೆಯ ವೇಳೆ ಮದವೇರಿದ ಕಾಡಾನೆ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಅಲ್ಲಿಂದ ಓಡಿ ಹೋಗಿವೆ. ಆದರೆ ಅರ್ಜುನ ಆನೆ ಈ ಕಾಡಾನೆಯೊಂದಿಗೆ ಒಬ್ಬಂಟಿಯಾಗಿ ಹೋರಾಡಿದೆ. 

ಈ ವೇಳೆಯಲ್ಲಿ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾಗುತ್ತಿದ್ದಾಗ, ಈ ಮದವೇರಿದ ಕಾಡಾನೆ ತನ್ನ ದಂತದಿಂದ ಅರ್ಜುನನ ಹೊಟ್ಟೆಗೆ ತಿವಿದಿದೆ. ಇದರ ಪರಿಣಾಮವಾಗಿ ಅರ್ಜುನ ಆನೆ ಮೃತಪಟ್ಟಿದೆ. ಅರ್ಜುನನ ಸಾವಿಗೆ ಇಡೀ ರಾಜ್ಯವೇ ಕಂಬನಿ ಮಿಡಿದಿದ್ದು, ಅರ್ಜುನನ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಲ್ಲದೆ ಅರ್ಜುನ ಆನೆಗೆ ಅನ್ಯಾಯವಾಗಿದೆ, ಅವನ ಸಾವಿಗೆ ನ್ಯಾಯ ಕೊಡಿಸಿ, ಎಂಬ ಕೂಗೂ ಕೇಳಿ ಬರುತ್ತಿದೆ. ಈ ಮಧ್ಯೆ ಇದೀಗ ಅರ್ಜುನನ ಸಾವಿಗೆ ಕಾರಣವಾದ ಒಂಟಿ ಸಲಗದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು,  ವಿಡಿಯೋವನ್ನು ಕಂಡು ನಿನ್ನ ಸೊಕ್ಕಡಗಿಸಲು ಅರ್ಜುನನ ಗೆಳೆಯ ಅಭಿಮನ್ಯು ಆನೆ ಬಂದೇ ಬರುತ್ತಾನೆ ಎಂದು ಕಾಡಾನೆಯ ವಿರುದ್ಧ ನೆಟ್ಟಿಗರು ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ಬೈರಾನನ್ನು ಅಭಿಮನ್ಯು ಅಟ್ಟಾಡಿಸಿಕೊಂಡು ಹೋಗಿತ್ತು ಅಭಿಮನ್ಯು ತಾಕತ್ತಿನ ಮುಂದೆ ಮೂಡಿಗೆರೆಯ ಬೈರ ಸೋತು ಶರಣಾಗಿ ಹೋಗಿತ್ತು ಹಾಗಾಗಿ ಮತ್ತೊಮ್ಮೆ ಅದೇ ಅಭಿಮನ್ಯು ಬರುತ್ತಾನೆ . ಕಾಡಾನೆ ಬೈರ ನ ಉಪಟಳಕ್ಕೆ ಇತಿಶ್ರೀ ಹಾಡಿ ತೀರುತ್ತೇನೆ ಎಂದು ಮಾವತರು ಹೇಳುತ್ತಿದ್ದಾರೆ. ಈ ಹಿನ್ನೆಲೆ ಯಲ್ಲಿ ಅಭಿಮನ್ಯು ಮತ್ತು ಬೈರನ ಕಾಳಗದ ವೀಡಿಯೊ ಒಂದು ಎಲ್ಲೆಡೆ ವೈರಲ್ ಆಗಿ ಟ್ರೆಂಡ್ ಆಗ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.