ಮತ್ತೆ ಯು.ದ್ದಕ್ಕೆ ನಿಂತ ಅಭಿಮಾನ್ಯು, ಈ ಬಾರಿ ಕಾಡನೇ ಅಧಿಕಾರಿಗಳ ಬಲೆಗೆ

 | 
Hbv

ಈ ಹಿಂದೆ ಜಂಬೂಸವಾರಿಯಲ್ಲಿ ಸಂಗೀತಗಾರರ ಸಂಗೀತ ಗಾಡಿ ಎಳೆಯುವ ಜವಬ್ದಾರಿ ಹೊತ್ತಿದ್ದ ಅಭಿಮನ್ಯು ಕಳೆದ ಎರಡು ವರ್ಷಗಳಿಂದ ಗಜಪಡೆಯ ನೇತೃತ್ವ ವಹಿಸಿಕೊಂಡಿದ್ದು ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಾನೆ. ಬಾರಿ ಆತನಿಗೆ ಅಂಬಾರಿ ಹೊರುವುದು ಸವಾಲ್ ಆದರೂ ಅದನ್ನು ಯಶಸ್ವಿಯಾಗಿ ಪೂರೈಸಿದ್ದಾನೆಸಿದ್ದಾನೆ.

ಎರಡು ಆನೆಗಳಿನ್ನು ಹಿಮ್ಮೆಟ್ಟಿಸಿದ್ದ ದೈರ್ಯಶಾಲಿ
ಈ ಹಿಂದೆ ಈತನ ಮೇಲೆ ಮಾಗಡಿಯ ಸಾವನದುರ್ಗ ಅರಣ್ಯದಲ್ಲಿ ಎರಡು ಕಾಡಾನೆಗಳು ದಾಳಿ ಮಾಡಿದರೂ ಧೃತಿಗೆಡದೆ ಅವುಗಳನ್ನು ಹಿಮ್ಮೆಟ್ಟಿಸಿದ್ದ ಅಭಿಮನ್ಯು ತಾನೂ ಕೇವಲ ಬಲಶಾಲಿ ಮಾತ್ರವಲ್ಲ ಧೈರ್ಯಶಾಲಿಯೂ ಹೌದು ಎಂಬುದನ್ನು ಸಾಬೀತು ಮಾಡಿದ್ದರು. ಇನ್ನು ಅಭಿಮನ್ಯು ಮೈಸೂರು ದಸರಾ ಮಾತ್ರವಲ್ಲದೆ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದಲ್ಲೂ ಮೂರು ಬಾರಿ ಅಂಬಾರಿ ಹೊತ್ತಿದ್ದಾನೆ.

ಬೈರ ಎಂಬ ಒಂಟಿ ಸಲಗ ಅರ್ಜುನ ಆನೆಯನ್ನು ಬಲಿ ಪಡದಿದ್ದು ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಅರ್ಜುನ ಆನೆಯನ್ನು ಬಲಿ ಪಡೆದ ಕಾಡಾನೆ ಕಾಡಿನಲ್ಲಿ ತಿರುಗಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಒಬ್ಬ ಬಳಕೆದಾರರು ಇದೇ ಆನೆಯನ್ನು ಹಿಡಿದು ಪಳಗಿಸಿ ಅರ್ಜುನನ ಜಾಗಕ್ಕೆ ತರಬೇಕು ಎಂದು ಹೇಳಿದ್ದಾರೆ. 

ಇನ್ನೊಬ್ಬ ಬಳಕೆದಾರರು ತನ್ನ ಗೆಳೆಯನ ಸಾವಿಗೆ ನ್ಯಾಯ ನೀಡಲು ನಿನ್ನ ಸೊಕ್ಕಡಗಿಸಲು ವೀರಾಧಿವೀರ ಅಭಿಮನ್ಯು ಆನೆ ಬಂದೇ ಬರುತ್ತಾನೆ ಎಂದು ಹೇಳಿದ್ದಾರೆ.  ಇನ್ನೂ ಅನೇಕರು ಈ ಕಾಡನೆಯನ್ನು ಸದೆಬಡಿಯಲು ನಮ್ಮ ವೀರ ಅಭಿಮನ್ಯವನ್ನು ಕರೆಸಿ ಎಂದು ಕೇಳಿಕೊಂಡಿದ್ದಾರೆ.
ದೇಶದಲ್ಲೇ ಅತ್ಯಂತ ಧೈರ್ಯವಂತ ಆನೆಗಳ ಮೇಲೆ ಒಂದಾಗಿರುವ ಅಭಿಮನ್ಯು ಎಂದರೆ ಅರಣ್ಯ ಇಲಾಖೆಗೆ ಹೆಮ್ಮೆ. ಇಲಾಖೆ ಈತನನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದೆ. ಈತ ಒಂದು ಕಾಲದಲ್ಲಿ ಇಲಾಖೆ ಹಾಗೂ ಜನರಿಗೆ ತೊಂದರೆ ಕೊಟ್ಟವನು. ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಈತನನ್ನು ಆನೆಚೌಕೂರು ಬಳಿಯಲ್ಲಿ ಖೆಡ್ಡಕ್ಕೆ ಬೀಳಿಸಿ ಸೆರೆ ಹಿಡಿಯಲಾಯಿತು. ಅರಣ್ಯ ಇಲಾಖೆಯಲ್ಲಿ ಪಳಗಿದ. ಮಾವುತ ಸಣ್ಣಪ್ಪ ಈತನನ್ನು ಸರಿ ದಾರಿಗೆ ತಂದ.

 ಸಣ್ಣಪ್ಪನ ಪುತ್ರ ವಸಂತ ಹಾಗೂ ಅಭಿಮನ್ಯು ಒಟ್ಟಿಗೆ ಆಡಿ ಬೆಳೆದವರು. ಸಣ್ಣಪ್ಪನ ನಂತರ ಅಭಿಮನ್ಯುವಿಗೆ ವಸಂತನೇ ಮಾವುತ. ಅಭಿಮನ್ಯು ಹಾಗೂ ವಸಂತನನ್ನು ಆನೆ ಹಾಗೂ ಮಾವುತ ಎನ್ನಲಾದ ಗೆಳೆಯರು ಎನ್ನಬಹುದು. ತನ್ನ ಮೇಲೆ ಬೆನ್ನ ವಸಂತ ಇದ್ದರೆ ಅಭಿಮನ್ಯು ಎಂತಹ ಕಾರ್ಯಾಚರಣೆಗೂ ಸೈ. ಯಾವುದೇ ಅಂಜಿಕೆ ಇಲ್ಲದೆ ಹುಲಿ, ಚಿರತೆ, ಪುಂಡಾನೆಗಳ ಸೆರೆಗೆ ಮುನ್ನುಗುತ್ತಾನೆ. ಅರ್ಜುನನನ್ನು ಕೊಂದ ಬೈರನನ್ನು ಅಭಿಮನ್ಯು ಇನ್ನಿಲ್ಲವಾಗಿಸಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.