ಕೋಟಿ ಬೆಲೆಯ ಕಾರು ಖರೀದಿ ಮಾಡಿದ ಅಭಿಷೇಕ್ ಅಂಬರೀಶ್; ಈ ಕಾರು ತುಂಬಾ ಅಪರೂಪ

 | 
Hji

ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳದ ಅಂಬರೀಶ್ ಪುತ್ರ ಇದೀಗ ಮತ್ತೂಮ್ಮೆ ಸುದ್ಧಿಯಲ್ಲಿದ್ದಾರೆ. ಹೌದು ಇದೀಗ ರೆಬಲ್ ಸ್ಟಾರ್ ಅಂಬರೀಶ್, ಸಂಸದೆ‌ ಸುಮಲತಾರ ಪುತ್ರ ಅಭಿಷೇಕ್ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಸ್ಯಾಂಡಲ್​ವುಡ್​ ನಟ ಅಭಿಷೇಕ್ ಅಂಬರೀಶ್ ಹೊಸ ದುಬಾರಿ ಕಾರನ್ನು ಖರೀದಿಸಿದ್ದಾರೆ.

ಹೌದು, ನಟ ಅಭಿಷೇಕ್ ಅಂಬರೀಶ್ ಅವರು ಕೋಟಿ ಬೆಲೆಯ BMW ಕಾರನ್ನು ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯೂ x7 ಎಂಬ ಹೆಸರಿನ ಕಾರನ್ನು ಖರೀದಿಸಿದ ಅಭಿಷೇಕ್ ಅಂಬರೀಶ್ ಅವರು ನಿವಾಸದ ಸುತ್ತಮತ್ತ ಡ್ರೈವ್ ಮಾಡಿ ಖುಷಿ ಪಟ್ಟಿದ್ದಾರೆ. ಇನ್ನು ಈ ಬಿಎಂಡಬ್ಲ್ಯೂ ಕಾರು 1 ಕೋಟಿ 30 ಲಕ್ಷಬೆಲೆಯುಳ್ಳದಾಗಿದೆ.

ಸದ್ಯ ನಟ ಅಭಿಷೇಕ್ ಅಂಬರೀಶ್ ಹೊಸ BMW ಕಾರಿನಲ್ಲಿ ಜಾಲಿ ರೈಡ್​ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನೆಚ್ಚಿನ ನಟ ಈ ಜಾಲಿ ರೈಡ್​ ವಿಡಿಯೋ ನೋಡಿದ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಜತೆಗೆ ಹೊಸ BMW ಕಾರನ್ನು ಖರೀದಿಸಿದ ನಟನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಇವರ ಬಳಿ ಈಗಾಗಲೇ ಹಲವು ಕಾರ್ ಗಳಿದ್ದು ಅದರ ಜೊತೆ ಈ ಕಾರ್ ಕೂಡ ಸೇರಿದ್ದು ಈ ಹಿಂದೆ ಪತ್ನಿ ಅವಿವಾ ಉಡುಗೊರೆಯಾಗಿ  BMW X7 ಕಾರು ನೀಡಿದ್ದರು. ಆ BMW X7 ಕಾರಿನ ಮಾರುಕಟ್ಟೆ ಮೌಲ್ಯ ಬರೋಬ್ಬರಿ ಒಂದೂವರೆ ಕೋಟಿ ಇದೆ. ಕೋಟಿ ಕೋಟಿ ಒಡತಿ ಅವಿವಾ ಗಂಡನಿಗೆ ಭರ್ಜರಿ ಗಿಫ್ಟ್ ನೀಡಿದ್ದರು. ಹಾಗಾಗಿ ಹೊಸ ಕಾರ್ ಅವಿವಾ ಗೆ ಎಂಬ ಮಾತು ಕೇಳಿಬರುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.