ಡಿವೋರ್ಸ್ಗೆ ಕಾರಣ ನನ್ನ ತಂದೆ ಎಂದು ಗಂ.ಭೀರ ಆ‌ ರೋಪ ಮಾಡಿದ ಅಭಿಷೇಕ್ ಬಚ್ಚನ್

 | 
ರ

ಸೆಲೆಬ್ರಿಟಿಗಳ ಬದುಕೇ ಹಾಗೆ ಎನು ಹೇಳಿದರೂ ಸುದ್ದಿ ಎನು ಮಾಡಿದರು ಸುದ್ದಿ ಹೌದು ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಸುದ್ದಿಯಲ್ಲಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಇವರಿಬ್ಬರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸುದ್ದಿ ಹರಡುತ್ತಿದೆ. ಆದರೆ ಇಲ್ಲಿಯವರೆಗೆ ಅಭಿಷೇಕ್ ಆಗಲಿ ಐಶ್ವರ್ಯ ಆಗಲಿ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. 

ಅಲ್ಲದೆ, ಕುಟುಂಬ ಸದಸ್ಯರು ಕೂಡಾ ಇದರ ಬಗ್ಗೆ ತುಟಿ ಬಿಚ್ಚಿಲ್ಲ. ಇದೀಗ ಅಭಿಷೇಕ್ ತನ್ನ ಜೀವನದ ಬಗ್ಗೆ ನೀಡಿರುವ ಹೇಳಿಕೆ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಈ ಸುದ್ದಿ ಅವರ ವಿಚ್ಛೇದನಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ಅವರ ತಂದೆ ಅಮಿತಾಬ್ ಬಚ್ಚನ್‌ ಗೆ ಸಂಬಂಧಿಸಿದ್ದು. ನಟ ಅಮಿತಾಬ್ ಬಚ್ಚನ್ ಮತ್ತು ತಮ್ಮ ವೃತ್ತಿಜೀವನದ ಬಗ್ಗೆ ಅನೇಕ ವಿಚಾರಗಳನ್ನು ಅಭಿಷೇಕ್ ಬಹಿರಂಗಪಡಿಸಿದ್ದಾರೆ. ಅಭಿಷೇಕ್ ಬಚ್ಚನ್ ವಂಶದ ಕುಡಿ ಎನ್ನುವ ಕಾರಣಕ್ಕೆ ಅವರ ಜೊತೆ ಏನೆನೆಲ್ಲಾ ನಡೆದಿತ್ತು ಎನುವುದನ್ನು ಬಿಚ್ಚಿಟ್ಟಿದ್ದಾರೆ.   

ಇತ್ತೀಚೆಗೆ,  ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ತಮ್ಮ ವೃತ್ತಿ ಜೀವನ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಯಾವ ನಿರ್ದೇಶಕರು ಕೂಡಾ ತಮ್ಮ ಚಿತ್ರಗಳಲ್ಲಿ ನಟಿಸಲು ಅವಕಾಶ ನೀಡಲಿಲ್ಲ. ಇದಕ್ಕೆ ಕಾರಣ ತಾನು ಅಮಿತಾಬ್ ಪುತ್ರ ಎನ್ನುವುದು ಎಂದು ಅಭಿಷೇಕ್ ಹೇಳಿದ್ದಾರೆ.  ಹಾಗಾಗಿ ಚೊಚ್ಚಲ ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಡಬೇಕಾಯಿತು ಎಂದು ಹೇಳಿದ್ದಾರೆ. ಒಂದು ಸ್ಕ್ರಿಪ್ಟ್ ಅನ್ನು ಸ್ವತಃ ಅಮಿತಾಭ್ ತಿರಸ್ಕರಿಸಿದ್ದರು. 

ಮೊದಲಿನಿಂದಲೂ ಅಭಿಷೇಕ್ ಅವರನ್ನು ಅಮಿತಾಬ್ ಜೊತೆ ಹೋಲಿಸಲಾಗುತ್ತಿತ್ತು. ಇದು ಕೂಡಾ ಅಭಿಷೇಕ್ ಮೇಲೆ ಸಾಕಷ್ಟು ಒತ್ತಡ ಹಾಕಿತ್ತಂತೆ. ನಾನು ಅಮಿತಾಬ್ ಬಚ್ಚನ್ ಮಗ ಎನ್ನುವ ಕಾರಣಕ್ಕೆ ಯಾರು ಕೂಡಾ ಲಾಂಚ್ ಮಾಡಲು ಸಿದ್ದರಿರಲಿಲ್ಲ. ಎಷ್ಟು ನಿರ್ದೇಶಕರನ್ನು ಭೇಟಿಯಾದರೂ ನಿಮ್ಮನ್ನು ನೋಡಿಕೊಳ್ಳುವುದು ನಮ್ಮಿಂದ ಸಾಧ್ಯವಿಲ್ಲ ಎಂದು ನಯವಾಗಿ ತಿರಸ್ಕರಿಸಿ ಬಿಡುತ್ತಿದ್ದರಂತೆ. 

ಬಹಳ ಪಾಡು ಪಟ್ಟ ಮೇಲೆ JP ದತ್ತಾ ಅವರ Refugee ಚಿತ್ರದ ಮೂಲಕ ಅಭಿಷೇಕ್ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ವ್ರತ್ತಿ ಜೀವನ ಆರಂಭಿಸುವುದಕ್ಕೆ ಇಷ್ಟೆಲ್ಲಾ ಕಷ್ಟ ಪಟ್ಟಿರುವುದು ಅಮಿತಾಬ್ ಪುತ್ರ ಎನ್ನುವ ಕಾರಣದಿಂದಲೇ ಎನ್ನುತ್ತಾರೆ ಅಭಿಷೇಕ್ ಬಚ್ಚನ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.