ಐಶ್ವರ್ಯ ರೈಗೆ ಟಕ್ಕರ್ ಕೊಟ್ಟ ಅಭಿಷೇಕ್ ಬಚ್ಚನ್, ಹಳೆ ಗೆಳತಿ ಜೊತೆ ಒಡನಾಟ
ಸೆಲೆಬ್ರಿಟಿ ಜೀವನವೇ ಹಾಗೆ ನಿಂತರೂ ಸುದ್ದಿ, ನಡೆದರೂ ಸುದ್ದಿ ಹೌದು ಸದ್ಯ ಬಿ-ಟೌನ್ನಲ್ಲಿ ಹಾಟ್ ಟಾಪಿಕ್ ಎಂದರೆ ನಟರಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ವಿಚ್ಛೇದನ ವಿಷಯ. ಈ ಸಂದರ್ಭದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ನಟಿ ಕರಿಷ್ಮಾ ಕಪೂರ್. ಇದಕ್ಕೆ ಕಾರಣವೂ ಇದೆ. ಐಶ್ವರ್ಯರೈ ಜೊತೆ ಲವ್ಗೆ ಬೀಳುವ ಮುನ್ನ ಅಭಿಷೇಕ್ ಅವರು ಕರಿಷ್ಮಾ ಕಪೂರ್ ಜೊತೆ ಸಂಬಂಧದಲ್ಲಿದ್ದರು.
ಇವರಿಬ್ಬರೂ ಮದುವೆಯಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದೇನಾಯಿತೋ, ಸಂಬಂಧ ಮುರಿದು ಬಿತ್ತು. ಐಶ್ವರ್ಯ ರೈ ಜೊತೆ ಮದುವೆಯಾಯಿತು. ಐಶ್ವರ್ಯ ಜೊತೆಗಿನ ಮದುವೆ ಅಮಿತಾಭ್ ಅವರ ಪುತ್ರಿ ಶ್ವೇತಾ ಅವರಿಗೆ ಇಷ್ಟವಿರಲಿಲ್ಲ. ಅವರಿಗೆ ಅಭಿಷೇಕ್ ಅವರ ಮಾಜಿ ಲವರ್ ಕರಿಷ್ಮಾ ಕಪೂರ್ ಅವರನ್ನು ಅಣ್ಣನಿಗೆ ಕೊಟ್ಟು ಮದ್ವೆ ಮಾಡಿಸಬೇಕು ಎಂದುಕೊಂಡಿದ್ದರು. ಹೀಗೆ ಬಚ್ಚನ್ ಕುಟುಂಬದ ಕೆಲವರ ವಿರೋಧದ ನಡುವೆ ಐಶ್-ಅಭಿ ಮದುವೆ ನಡೆದಿತ್ತು.
ಇದು ಒಂದೆಡೆಯಾದರೆ, ನಟಿ ಕರೀನಾ ಕಪೂರ್ ಅವರ ಸಹೋದರಿ ಕರಿಷ್ಮಾ ಕಪೂರ್ ಅವರ ದಾಂಪತ್ಯ ಜೀವನ ಕರಾಳವಾದದ್ದು. ಈ ಬಗ್ಗೆ ಇದಾಗಲೇ ಹಲವಾರು ಬಾರಿ ಅವರು ಮಾತನಾಡಿದ್ದಾರೆ. ಸಿನಿ ಕೆರಿಯರ್‌ನ ಉತ್ತುಂಗದಲ್ಲಿ ಇದ್ದಾಗಲೇ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಜೊತೆಗೆ ಕರಿಷ್ಮಾ ಮದುವೆಯಾದರು. ಆದರೆ ಮದುವೆ ಜೀವನ ತಾನು ಅಂದುಕೊಂಡ ಹಾಗೆ ಇರಲಿಲ್ಲ.
ನಂತರ 2016ರಲ್ಲಿ ಕರಿಷ್ಮಾ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಈಗ ತಮ್ಮ ಮದುವೆ ಜೀವನದ ಕರಾಳ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕರಿಷ್ಮಾ ಕಪೂರ್ ಪತಿ ಆಕೆಯನ್ನು ಹರಾಜು ಹಾಕಲು ಮುಂದಾಗಿದ್ದರಂತೆ. ಹನಿಮೂನ್ ನಲ್ಲಿ ಇದ್ದಾಗಲೆ ಕರಿಷ್ಮಾ ಅವರನ್ನು ಆಕೆಯ ಪತಿ ಸಂಜಯ್ ಕಪೂರ್ ಹರಾಜು ಮಾಡಲು ಯತ್ನಿಸಿದ್ದ ವಿಷಯವನ್ನೂ ನಟಿ ತಿಳಿಸಿದ್ದರು.
ಪ್ರೇಮ್ ಖೈದಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕರಿಷ್ಮಾ ನಾಯಕಿ ಆಗಿ ಎಂಟ್ರಿ ಕೊಟ್ಟರು. ಕೂಲಿ ನಂ1, ದಿಲ್ ತೋ ಪಾಗಲ್ ಹೈ, ರಾಜಾ ಹಿಂದೂಸ್ಥಾನಿ, ಬೀವಿ ನಂ.1, ಹೀರೋ ನಂ1 ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಖ್ಯಾತಿ ಕರಿಷ್ಮಾ ಅವರಿಗೆ ಇದೆ. ಆದರೆ ಮದುವೆ ಜೀವನ ಮಾತ್ರ ಕರಾಳಮಯವಾಗಿತ್ತು.
13 ವರ್ಷದ ಕಹಿ ದಾಂಪತ್ಯಕ್ಕೆ ಕರಿಷ್ಮಾ ಎಳ್ಳು ನೀರು ಬಿಟ್ಟರು. 2016ರಲ್ಲಿ ಪತಿ ಇಂದ ವಿಚ್ಛೇದನ ಪಡೆದು ದೂರಾಗಿದ್ದಾರೆ. ವಿಚ್ಛೇದನದ ನಂತರ, ಸಂಜಯ್ ಮಕ್ಕಳಿಗೆ 10 ಕೋಟಿ ರೂಪಾಯಿ ಪರಿಹಾರ ನೀಡಿದ್ದರೆ, ಕರಿಷ್ಮಾಗೆ ಡ್ಯೂಪ್ಲೆಕ್ಸ್ ಮನೆ ನೀಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಇತರ ಖರ್ಚುಗಳನ್ನು ಸಂಜಯ್ ನೋಡಿಕೊಳ್ಳುತ್ತಿದ್ದಾರೆ. ಸದ್ಯ ಇಬ್ಬರು ಮಕ್ಕಳೊಂದಿಗೆ ಕರಿಷ್ಮಾ ಜೀವನ ನಡೆಸುತ್ತಿದ್ದಾರೆ. ಸಮೈರಾ ಕಪೂರ್ ಮತ್ತು ಕಿಯಾಣ್ ರಾಜ್ ಕಪೂರ್ ಇಬ್ಬರು ಮಕ್ಕಳು ಕರಿಷ್ಮಾ ಜೊತೆಗೆ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.