ಅಪ್ಪನ ಹುಟ್ಟುಹಬ್ಬಕ್ಕೆ ಕೇಕ್ ತಿನ್ನು ಅಪ್ಪಾಜಿ ಎಂದು ಅಂಬಿ ಮುಂದೆ ಅಭಿಷೇಕ್ ಕಣ್ಣೀ ರು

 | 
Ha

ಇತ್ತೀಚಿಗಷ್ಟೇ ರೆಬಲ್ ಸ್ಟಾರ್ ಅಂಬರೀಶ್ 72ನೇ ಜನ್ಮ ದಿನೋತ್ಸವ ನಡೆಯಿತು‌. ಅದನ್ನು ಅಭಿಮಾನಿಗಳು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜಲೀಲನನ್ನು ನೆನೆಯುತ್ತಿದ್ದಾರೆ. ಇನ್ನು ಅಭಿಮಾನಿಗಳು ಸ್ಪೆಷಲ್ ಡಿಪಿ ಪೋಸ್ಟ್ ಮಾಡಿ ಅಂಬಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಅಂಬರೀಶ್ ಬರ್ತ್‌ಡೇ ಕಾಮನ್ ಡಿಪಿಯನ್ನು ನಟ ದರ್ಶನ್ ರಿವೀಲ್ ಮಾಡಿ ಶುಭ ಕೋರಿದ್ದರು. ಆ ಫೋಟೊ ವೈರಲ್ ಆಗುತ್ತಿದೆ. ಇನ್ನು ಸಿನಿಮಾ ತಾರೆಯರು, ರಾಜಕೀಯ ಮುಖಂಡರು, ಅಭಿಮಾನಿಗಳು ವಿಶೇಷ ದಿನದಂದು ಅಂಬಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂಬಿ ಪತ್ನಿ ಸುಮಲತಾ ಅಂಬರೀಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳು.. ಈ ದಿನ ನಿಮ್ಮೊಟ್ಟಿಗೆ ಹಲವು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿದ ಸಂತೋಷ, ಕಣ್ಣೀರಿನ ನೆನಪುಗಳಿಂದ ತುಂಬಿದೆ. ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ನೀವು ತಂದ ಅಂತ್ಯವಿಲ್ಲದ ಸಂತೋಷವು ನನ್ನ ಹೃದಯವನ್ನು ಕೃತಜ್ಞತೆಯಿಂದ ಬೆಚ್ಚಗಾಗಿಸುತ್ತದೆ ಮತ್ತು ನನ್ನ ಪ್ರತಿಯೊಂದು ಆಲೋಚನೆಯನ್ನು ಪೂರೈಸುತ್ತದೆ. 

ನೀವು ಎಲ್ಲಿ ವಿಶ್ರಾಂತಿ ಪಡೆಯುತ್ತೀರೋ ಅಲ್ಲಿ ನಿಮ್ಮ ಸ್ಮರಣೆಯು ನನಗೆ ಎಷ್ಟು ಅಮೂಲ್ಯ ಮತ್ತು ಉತ್ತಮ ಎಂಬುದನ್ನು ನೀವು ನೋಡಬಹುದು ಎಂದು ನಾನು ಭಾವಿಸುತ್ತೇನೆ. ಎಂದು ಸುಮಲತಾ ಅಂಬರೀಶ್ ಅವರನ್ನು ನೆನಪಿಸಿಕೊಂಡಿದ್ದಾರೆ.ಅಂಬಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕ್ಕೆ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ಮಗ  ಅಭಿಷೇಕ್ ಅಂಬರೀಶ್ ಸಮಾಧಿಗೆ ಪೂಜೆ ನೆರವೇರಿಸಿ ಕೇಕ್ ಕಟ್ ಮಾಡಿ ತಾಯಿಗೆ ತಿನ್ನಿಸಿ ಸಮಾಧಾನ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು‌ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.