ಕೊನೆಗೂ ಐ.ಶ್ವರ್ಯ‍ ರೈ ಬಂಡವಾಳ ಹೊರಹಾಕಿದ ಅಭಿಷೇಕ್, ಡಿವೋರ್ಸ್ಗೆ ಇದೇ ಕಾರಣ

 | 
Hh

 ಐಶ್ವರ್ಯ - ಅಭಿಷೇಕ್ ಬಚ್ಚನ್ ಜೋಡಿಯ ವಿಚ್ಛೇದನೆ ಸುದ್ದಿ ವೈರಲ್ ಆಗುತ್ತಿದ್ದಂತೆ ಜಯಾ ಬಚ್ಚನ್-ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಲೇ ಇದೆ. ಗಂಡ-ಹೆಂಡತಿ ಜಗಳಕ್ಕಿಂತ ಇಲ್ಲಿ ಅತ್ತೆ-ಸೊಸೆ ಜಗಳ ಜೋರಿದೆ ಎನ್ನಲಾಗುತ್ತಿದೆ.


ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯ ಡಿವೋರ್ಸ್ ಹಂತಕ್ಕೆ ತಲುಪಿದೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಇವರ ಡಿವೋರ್ಸ ಸುದ್ದಿ ಈಗ ದೊಡ್ಡಮಟ್ಟದಲ್ಲಿ ಹೈಲೈಟ್ ಆಗಿದೆ. ಈ ಒಂದು ಡಿವೋರ್ಸ್ ವಿಚಾರ ಸುದ್ದಿಯಾಗುತ್ತಿರುವಾಗ ಅತ್ತೆ ನಾದಿನಿ ಜೊತೆ ಐಶ್ವರ್ಯಾ ಸಂಬಂಧ ಮೊದಲಿನಿಂದಲೂ ಸರಿ ಇರಲಿಲ್ಲ ಎನ್ನಲಾಗುತ್ತಿದೆ. 


ಶ್ವೇತಾ ನಂದಾ ಅಂತೂ ಐಶ್ವರ್ಯಾ ಅವರಿಂದ ದೂರವೇ ಇರುತ್ತಿದ್ದರಂತೆ. ಆದರೆ ಜಯಾ ಬಚ್ಚನ್ ಅವರು ಕೂಡಾ ಸೊಸೆಯನ್ನು ಇಷ್ಟಪಡುತ್ತಿರಲಿಲ್ವಾ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಮದುವೆ ಸಮಯದಲ್ಲಿ ಸೀರೆ ಜಗಳದಿಂದ ಹಿಡಿದು ಅವರ ಮಧ್ಯೆ ಯಾವ ವಿಷಯದಲ್ಲಿಯೂ ಹೊಂದಾಣಿಕೆ ಇರಲಿಲ್ಲ ಎನ್ನಲಾಗುತ್ತಿದೆ. ಅಸಲಿಗೆ ಜಯಾ ಬಚ್ಚನ್ ಐಶ್ವರ್ಯಾ ಅವರನ್ನು ತಮ್ಮ ಏಕೈಕ ಪುತ್ರನಿಗೆ ಪತ್ನಿಯಾಗಿ ತರಲು ಇಷ್ಟಪಡಲೇ ಇಲ್ಲ. 


ಅವರ ಆಯ್ಕೆಯಲ್ಲಿ ಐಶ್ವಯಾ್ ಇರಲೇ ಇಲ್ಲ. ಸಲ್ಮಾನ್ ಖಾನ್-ಐಶ್ವರ್ಯಾ ರೈ ಸಂಬಂಧ ಆಗ ಫೇಮಸ್ ಆಗಿತ್ತು.ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ಈ ಬಾಲಿವುಡ್​ನ ಜೋಡಿ ಆನ್​ಸ್ಕ್ರೀನ್ ಮಾತ್ರವಲ್ಲ ಆಫ್​ಸ್ಕ್ರೀನ್ ಜೋಡಿಯಾಗಿಯೂ ಫೇಮಸ್ ಆಗಿದ್ದರು. ಇವರ ಲವ್ ಕಹಾನಿ ಬಾಲಿವುಡ್ ಪ್ರಸಿದ್ಧ ಪ್ರೇಮಕಥೆಗಳಲ್ಲಿ ಒಂದು.ಸಲ್ಮಾನ್ ಜೊತೆ ಬ್ರೇಕಪ್ ಆಯಿತು. 

ಅದಾದ ನಂತರ ವಿವೇಕ್ ಒಬೆರಾಯ್ ಜೊತೆಗೂ ಲಿಂಕ್ ಇತ್ತು. ಅಂತೂ ಮಾಜಿ ವಿಶ್ವಸುಂದರಿಯ ಪ್ರೇಮ ಪ್ರಕರಣ ಬಾಲಿವುಡ್​ನಲ್ಲಿ ಫೇಮಸ್ ಆಗಿತ್ತು. ಹಾಗಾಗಿ ಐಶ್​ನನ್ನು ಮನೆತುಂಬಿಸಿಕೊಳ್ಳೋ ಬಗ್ಗೆ ಜಯಾ ಬಚ್ಚನ್​ಗೆ ಮನಸಿರಲಿಲ್ಲ. ಜಯಾ ಬಚ್ಚನ್ ಅವರು ಕಪೂರ್ ಕುಡಿ ಕರಿಷ್ಮಾ ಕಪೂರ್ ಅವರನ್ನು ತಮ್ಮ ಸೊಸೆಯಾಗಿ ಮಾಡಲು ಬಯಸಿದ್ದರು. 

ಇದನ್ನು ಬಹಿರಂಗವಾಗಿ ಒಂದು ವೇದಿಕೆಯಲ್ಲಿ ಅನೌನ್ಸ್ ಕೂಡಾ ಮಾಡಿದ್ದರು.ಆದರೆ ಆಮೇಲೇನಾಯ್ತೋ ಈ ಮದುವೆ ನಡೆಯಲಿಲ್ಲ. ಐಶ್ ಹಾಗೂ ಅಭಿಷೇಕ್ ಲಿಂಕ್ ಆದರು. ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.