ಅಭಿಷೇಕ್ ಪತ್ನಿ ಅವಿವಾ ಅಣ್ಣನ ಅವಸ್ಥೆ ನೋಡಿ ರೊಚ್ಚಿಗೆದ್ದ ಅಧಿಕಾರಿಗಳು, ಕಂಠಪೂರ್ತಿ ಕುಡಿದು ಜಗಳ

 | 
ರ್ಾರ

ಕಂಠಮಟ್ಟ ಕುಡಿದು ನಡುರಸ್ತೆಯಲ್ಲಿ ಕರ್ತವ್ಯನಿರತ ಪೊಲೀಸ್ ಜೊತೆ ದುರ್ವರ್ತನೆ ಪ್ರದಶಿಸಿದರೆ ಹೆತ್ತವರ ಹೆಸರಿಗೆ ಕಳಂಕ. ಅಂದಹಾಗೆ ಪೊಲೀಸ್ ಹೆದರಿಸಲ ಪ್ರಯತ್ನಿಸುತ್ತಿರುವ ಇವನು ಸೆಲಿಬ್ರಿಟಿ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮಗ ಆ್ಯಡಂ ಬಿದ್ದಪ್ಪ. ಅಭಿಷೇಕ್ ಅಂಬರೀಷ್ ಅವರ ಪತ್ನಿ ಅವಿವಾ ಬಿದ್ದಪ್ಪ ಅಣ್ಣ.

ಹಿಂದೊಮ್ಮೆ ಕಿರಿಕ್ ಮಾಡ್ಕೊಂಡು ಸುದ್ದಿಯಾಗಿದ್ದ.. ಈಗ ಮತ್ತೊಮ್ಮೆ ತನ್ನ ಪುಂಡಾಟ ಮೆರೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ವಿಪರ್ಯಾಸವೆಂದರೆ ಎಣ್ಣೆ ನಶೆಯಲ್ಲಿ ಪೊಲೀಸರಿಗೆ ಅವಾಜ್ ಹಾಕಿ ದುರಹಂಕಾರದ ದರ್ಪ ಮೆರೆದಿದ್ದಾನೆ. ಆ ಕಹಾನಿ ಇಲ್ಲಿದೆ ನೋಡಿ. ಈ ಹಿಂದೆಯೂ ಒಂದೆರಡು ಕಿರಿಕ್ ಮಾಡ್ಕೊಂಡು ಸುದ್ದಿಯಾಗಿದ್ದ ಆ್ಯಡಂ, ಈಗ ಬೆಂಗಳೂರಿನ ಪೊಲೀಸರ ಜೊತೆಗೇ ತನ್ನ ಪುಂಡಾಟ ಮೆರೆದಿದ್ದಾನೆ. 

ಯಲಹಂಕದ ರೈಲ್ವೇ ವೀಲ್ ಫ್ಯಾಕ್ಟರಿ ಬಳಿ ಮೊನ್ನೆ ರಾತ್ರಿ ಕಂಠಪೂರ್ತಿ ಕುಡಿದು ಜಗಳವಾಡಿದ್ದು, ಪೊಲೀಸರಿಗೇ ಬಾಯಿಗೆ ಬಂದಂತೆ ಅವಾಜ್ ಹಾಕಿದ್ದಾನೆ. ಅಷ್ಟಕ್ಕೂ ಆಗಿದ್ದೇನೆಂದ್ರೆ ಮೊನ್ನೆ ರಾತ್ರಿ ಕಂಠಪೂರ್ತಿ ಕುಡಿದಿದ್ದ ಆ್ಯಡಂ ಬಿದ್ದಪ್ಪ, ತನ್ನ ನೆಕ್ಸಾನ್ ಕಾರ್ನಲ್ಲಿ ಯಲಹಂಕ ನ್ಯೂ ಟೌನ್ ರೋಡ್ ನಲ್ಲಿ ಕುಡಿದು ಕಾರ್ ಡ್ತೈವ್ ಮಾಡ್ಕೊಂಡು ಹೋಗ್ತಿದ್ದ. ಬೇರೆ ಕಾರ್ ಗಳಿಗೂ ಜಾಗ ಕೊಡೆದೇ ಅಡ್ಡದಿಡ್ಡಿ ಓಡಿಸಿದ್ದ. 

ಈ ವೇಳೆ ಜಾಗ ಬಿಡುವಂತೆ ರಾಹುಲ್ ಎಂಬಾತ ಹಾರ್ನ್ ಮಾಡಿದ್ದಾರೆ. ಕೂಡಲೇ ಹಾರ್ನ್ ಯಾಕ್ ಮಾಡ್ತೀಯಾ ಅಂತ ರಾಹುಲ್ ಮೇಲೆ ಗಲಾಟೆ ಮಾಡಿ ಹಲ್ಲೆಗೆ ಮುಂದಾಗಿದ್ದ. ತಕ್ಷಣವೇ ರಾಹುಲ್ 112 ಗೆ ಕಾಲ್ ಮಾಡಿದಾಗ ಯಲಹಂಕ ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದ್ರೆ ಪೊಲೀಸರ ಜೊತೆಯೇ ಆ್ಯಡಂ ಕಿರಿಕ್ ಮಾಡಿ ಗಲಾಟೆ ಮಾಡಿದ್ದ. 

ರಾಹುಲ್ ಮಾಹಿತಿಯಂತೆ ಸ್ಥಳಕ್ಕೆ ಬಂದ ಪೊಲೀಸರ ಜೊತೆ ಆಡ್ಯಂ ಬಿದ್ದಪ್ಪ ಜಗಳವಾಡಿದ್ದಾನೆ. ಅಷ್ಟಲ್ಲದೇ ಪೊಲೀಸರಿಗೆ ನಾನ್ಯಾರು ಗೊತ್ತಾ ಅಂತ ಅವಾಜ್ ಹಾಕಿದ್ದಾನೆ. ಪೊಲೀಸ್ ಅಧಿಕಾರಿಯೊಬ್ಬರಿಗೆ ಥೂ ಎಂದು ದರ್ಪ ತೋರಿದ್ದಾನೆ. ಬಳಿಕ ತನಗೆ ಇನ್ಫ್ಲುಯೆನ್ಸ್ ಇದೆ ಅಂತ ದೊಡ್ಡದೊಡ್ಡವರಿಗೆ ಫೋನ್ ಮಾಡಿದ್ದ. ಆದ್ರೆ ಇದಕ್ಕೆಲ್ಲ ಬಗ್ಗದ ಪೊಲೀಸರು ಆ್ಯಡಂ ಬಿದ್ದಪ್ಪ ವಿರುದ್ಧ ಕೇಸ್ ಹಾಕಿ ಕಾರ್ ಸೀಜ್ ಮಾಡಿದ್ದಾರೆ.

ಆ್ಯಡಂ ಬಿದ್ದಪ್ಪ ಕುಡಿದೇ ಇಷ್ಟೆಲ್ಲ ರಂಪ ಮಾಡಿದ್ದಾನೆ ಅನ್ನೋದು ಮೆಡಿಕಲ್ ಟೆಸ್ಟ್ನಲ್ಲೂ ಗೊತ್ತಾಗಿದೆ. ಹೀಗಾಗಿ ಈತನ ವಿರುದ್ಧ ಯಲಹಂಕ ನ್ಯೂಟೌನ್ ಮತ್ತು ಯಲಹಂಕ ಟ್ರಾಫಿಕ್ ಸ್ಟೇಷನ್ನಲ್ಲಿ FIR ಆಗಿದೆ. ಸದ್ಯ ಸ್ಟೇಷನ್ ಬೇಲ್ ಆ್ಯಡಂ ಬಿದ್ದಪ್ಪನನ್ನ ಬಿಟ್ಟುಕಳುಹಿಸಿದ್ದು, ತನಿಖೆ ಮುಂದುವರಿದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.