ಹಿಂದೂ ಶಾಸ್ತ್ರದ ಪ್ರಕಾರ ಸೋನಲ್ ಹಾಗೂ ತರುಣ್ ಸುಧೀರ್ ಅರಿಶಿನ ಶಾಸ್ತ್ರ; ಸನಾತನ ಧರ್ಮಕ್ಕೆ ಸೋ ನಲ್ ಎಂಟ್ರಿ
Aug 10, 2024, 16:28 IST
|
ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅನೇಕರು ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನ ಆರಂಭಿಸಿರೋದನ್ನು ನಾವು ನೋಡಿದ್ದೇವೆ. ಇಂಥ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಆ ಪೈಕಿ ಕೆಲ ಜೋಡಿ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಸ್ಯಾಂಡಲ್ವುಡ್ ಸೆಲೆಬ್ರಿಟಿ ಕಪಲ್ ಲಿಸ್ಟ್ಗೆ ತರುಣ್ ಸೋನಾಲ್ ಹೊಸ ಸೇರ್ಪಡೆ.
ಇಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ನಾಳೆ ಮಾಂಗಲ್ಯ ಧಾರಣೆ ಜರುಗಲಿದೆ. ಮದುವೆಗೆ ಸರ್ವ ಸಿದ್ಧತೆ ನಡೆದಿದ್ದು, ಕಳೆದ ದಿನ ಹಳ್ದಿ ಪ್ರೋಗ್ರಾಮ್ ನೆರವೇರಿದೆ. ಅರಿಶಿಣ ಶಾಸ್ತ್ರದಲ್ಲಿ ಈ ಪ್ರೇಮಪಕ್ಷಿಗಳು ಮಿಂದೆದ್ದಿದ್ದು, ಮೊಗದಲ್ಲಿ ವಧು ವರರ ಕಳೆ ಎದ್ದು ಕಂಡಿದೆ. ಜೋಡಿಯ ಸಂತಸದ ಕ್ಷಣಗಳು ಅಭಿಮಾನಿಗಳನ್ನು ಸೆಳೆದಿದೆ.
ಫೋಟೋಗಳು ವೈರಲ್ ಆಗುತ್ತಿದ್ದು, ಫ್ಯಾನ್ಸ್ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.ಚೌಕ, ರಾಬರ್ಟ್, ಕಾಟೇರ ಅಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂಡಿರುವ ನಿರ್ದೇಶಕ ತರುಣ್ ಸುಧೀರ್ ಅವರು ಪಂಚತಂತ್ರ ಖ್ಯಾತಿಯ ಸೋನಾಲ್ ಮೊಂತೆರೋ ಕೈ ಹಿಡಿಯಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತಮ್ಮ ಮ್ಯಾರೆಜ್ ಡೇಟ್ ಅನ್ನು ಸಖತ್ ಕಲರ್ ಫುಲ್ ಆಗಿ ಸ್ಪೆಷಲ್ ವಿಡಿಯೋ ಮಾಡಿಸುವ ಮೂಲಕ ಶೇರ್ ಮಾಡಿದ್ದರು.
ಮದುವೆ ಆಮಂತ್ರಣ ಪತ್ರಿಕೆಯೂ ಬಹಳ ಅರ್ಥಪೂರ್ಣವಾಗಿತ್ತು. ನಂತರ ಪ್ರೆಸ್ ಮೀಟ್ ಮೂಲಕ ತಮ್ಮ ಮದುವೆ ವಿಚಾರವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ರು.ಇಂದು ಮತ್ತು ನಾಳೆ ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್ನಲ್ಲಿ ಆರತಕ್ಷತೆ, ಮದುವೆ ಶಾಸ್ತ್ರಗಳು ನೆರವೇರಲಿವೆ. ಚಿತ್ರರಂಗದವರಿಗೆ ಈಗಾಗಲೇ ಆಮಂತ್ರಣ ಪತ್ರಿಕೆ ತಲುಪಿದೆ.
ಈ ಹಿಂದೆ ಸ್ಪೆಷಲ್ ವಿಡಿಯೋದಲ್ಲಿ ಥಿಯೇಟರ್ ಬ್ಯಾಕ್ ಗ್ರೌಂಡ್ ಹಾಗೂ ಸಿನಿಮಾ ಶೂಟಿಂಗ್ ಬ್ಯಾಕ್ ಟ್ರಾಪ್ನಲ್ಲಿ ಕಾಣಿಸಿಕೊಂಡಿದ್ದರು. ಶುಕ್ರವಾರದಂದು ಅರಿಶಿಣ ಶಾಸ್ತ್ರ ನೆರವೇರಿದೆ. ಸಮಾರಂಭದ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.