ಕೋಟಿ ಇದ್ದರೂ ಕೂಡ ನೂರು ವರ್ಷದ ಹಳೆ ಮನೆಯಲ್ಲಿ ವಾಸ ಮಾಡುತ್ತಿರುವ ಅಚ್ಚುತ್ ಕುಮಾರ್

 | 
Jd

ಕನ್ನಡದ ಅತ್ಯುತ್ತಮ ಪೋಷಕ ನಟರಲ್ಲಿ ಒಬ್ಬರಾದ ನಟ ಅಚ್ಯುತ್ ಕುಮಾರ್ ಅವರೆಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಅಪ್ಪಟ ಕನ್ನಡದ ನಟ ಅಚ್ಯುತ್ ಕುಮಾರ್ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಸದ್ಯ ಸಾಕಷ್ಟು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

ಅವರ ಮೂಲ ಮನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿದ್ದು ಅವರು ಹುಟ್ಟಿ ಬೆಳೆದಿದ್ದು , ಕಾಲೇಜು ಕಲಿತಿದ್ದು ಎಲ್ಲವೂ ಅದೇ ಮನೆಯಿಂದ. ಆದರೆ ಈಗ ಆ ಮನೆಯಲ್ಲಿ ಯಾರೂ ಕೂಡ ಉಳಿದುಕೊಳ್ಳುತ್ತಿಲ್ಲ.ನಟ ಅಚ್ಯುತ್‌ ಕುಮಾರ್‌ ನಟಿಸಿದ ಬಹತೇಕ ಸಿನಿಮಾಗಳು ದೊಡ್ಡ ಯಶಸ್ಸನ್ನು ಪಡೆದುಕೊಂಡಿವೆ. ಇತ್ತೀಚೆಗೆ ಬಿಡುಗಡೆಯಾದ ಯುವ ಸಿನಿಮಾದಲ್ಲಿಯೂ ನಟ ತಂದೆಯ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದರು.

ಅಚ್ಯುತ್‌ ಕುಮಾರ್‌ ಬರೀ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿಯೂ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಹೀಗಾಗಿಯೇ ಇವರು ಪ್ರತಿಯೊಬ್ಬರಿಗೂ ಚಿರಪರಿಚಿತ ಅದ್ಭುತ ನಟ ಕೂಡ.ನಟ ಅಚ್ಯುತ್‌ ಕುಮಾರ್‌ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆಹಂಚಿಕೊಂಡಿದ್ದಲ್ಲದೇ ಯುವ ನಾಯಕರೊಂದಿಗೂ ತೆರೆಹಂಚಿಕೊಂಡು ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.

ತಮ್ಮ ಕಲಾತ್ಮಕ ನಟನೆಯಿಂದ ಹತ್ತು ಹಲವು ಪಾತ್ರಗಳಿಗೆ ಜೀವ ತುಂಬಿರುವ ಇವರು ಕನ್ನಡ ಬಹುಬೇಡಿಕೆಯ ಕಲಾವಿದರು. ಮೊದಲೆಲ್ಲ ಧಾರವಾಹಿ ಅಭಿನಯಿಸುತ್ತಿದ್ದ ಅವರು ಮುಂದೆ ಚಿತ್ರರಂಗದಲ್ಲಿ ಕೂಡಾ ಚೆನ್ನಾಗಿ ಶೈನ್ ಅದರು.ತಮ್ಮ ಅಭೂತಪೂರ್ವ ನಟನೆಗಾಗಿ ಎರಡು ಬಾರಿ ರಾಜ್ಯ ಪ್ರಶಸ್ತಿ ಮತ್ತು ಮೂರು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದಾರೆ.ಕನ್ನಡವಲ್ಲದೇ ಇತ್ತೀಚಿಗೆ ತಮಿಳು ಚಿತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.