ಚಿತ್ರರಂಗಕ್ಕೆ ಬಹುದೊಡ್ಡ ಆಘಾ ತ, ಖ್ಯಾತ ನಟ ಅಶೋಕ್ ಇಹ ಲೋಕ

 | 
ಲ್

ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಹೆಸರು ಮಾಡಿದ್ದ ರೂಪಕಲಾ ನಾಟಕ ತಂಡದ ಮೂರು ಮುತ್ತು ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ವಿಧಿವಶರಾಗಿದ್ದಾರೆ. ಕೆಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಶುಕ್ರವಾರ ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸುಮಾರು ಇಪ್ಪತ್ತಾರು ವರ್ಷಗಳಿಂದ ಸಾವಿರಾರು ಬಾರಿ ಪ್ರದರ್ಶನ ಕಂಡ ರೂಪಕಲಾ ನಾಟಕ ತಂಡದ ಮೂರು ಮುತ್ತು ನಾಟಕದಲ್ಲಿ ಅಶೋಕ್ ಶಾನಭಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಶೋಕ್ ಶಾನಭಾಗ್ ಅವರ ಮಾತು ಹಾಗೂ ನಟನೆ ಕಂಡು ನೋಡಗರು ಹೊಟ್ಟೆ ಹುಣ್ಣಾಗೊಸುವಷ್ಟು ನಗುತ್ತಿದ್ದರು.

ಮೂರು ಮುತ್ತು ನಾಟಕ ಮಾತ್ರವಲ್ಲದೇ ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಇನ್ನು ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರದಲ್ಲಿ ಅಶೋಕ್ ಶಾನಭಾಗ್ ನಟಿಸಿದ್ದರು. ಇನ್ನು ಕಿರುತೆರೆಯ ಜನಪ್ರಿಯ ಶೋ ಆಗಿದ್ದ ಸೃಜನ್‌ ಲೋಕೇಶ್‌ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್‌ನಲ್ಲೂ ಅಶೋಕ್ ಶಾನಭಾಗ್ ಭಾಗವಹಿಸಿದ್ದರು.


ಕುಂದಾಪುರದ ಕಾಮಿಡಿ ಕಿಂಗ್‌ ಎಂದೇ ಪ್ರಸಿದ್ಧಿ ಪಡೆದ ಅಶೋಕ್ ಶಾನಭಾಗ್ ಅವರ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಹಾಸ್ಯ ನಟ ಅಶೋಕ್ ಶಾನಭಾಗ್ ಅವರ ಅಂತ್ಯಕ್ರಿಯೆ  ಶನಿವಾರ ಕುಂದಾಪುರದಲ್ಲಿ ನಡೆಯಲಿದ್ದು, ಅಪಾರ ಅಭಿಮಾನಿಗಳು ಭಾಗಿಯಾಗುವ ಸಾಧ್ಯತೆ ಇದೆ.


ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ನಾಟಕ ಮೂರು ಮತ್ತು. ಮೂರು ಮುತ್ತು ನಾಟಕ ಕಳೆದ 26 ವರ್ಷಗಳಿಂದ ಸುಮಾರು 1900 ಪ್ರದರ್ಶನ ಕಂಡಿದ್ದು, ಪ್ರತಿವರ್ಷ 50-60 ಪ್ರದರ್ಶನ ಕಾಣುತ್ತಿತ್ತು. ಕುಳ್ಳಪ್ಪು ಬಾಲಕೃಷ್ಣ ರೈ ಅವರ ಆಶಯದಂತೆ ಹುಟ್ಟಿಕೊಂಡ ರೂಪಕಲಾ ನಾಟಕ ತಂಡ ದ ಮೂರು ಮುತ್ತು ನಾಟಕದ ಕಲಾವಿದರು ಯಾವುದೇ ಅಶ್ಲೀಲತೆ ಇಲ್ಲದೇ, ಯಾರನ್ನೂ ನಿಂದಿಸದೇ ಜನರನ್ನು ರಂಜಿಸುತ್ತಿದ್ದರು. ಬಹುಬೇಡಿಕೆಯ ನಾಟಕವಾಗಿದ್ದ ಮೂರು ಮುತ್ತು ನಾಟಕದಲ್ಲಿ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಮಾಡಿದ್ದರೂ ಸಹ ಹಾಸ್ಯದಲ್ಲಿ ಎಳ್ಳಷ್ಟು ಕಡಿಮೆಯಾಗದೇ ಜನರನ್ನು ರಂಜಿಸಿತ್ತು.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.