ಕಾಟೇರ ನನ್ನ ಕಥೆ ಎಂದ ಉಮಾಪತಿ ಗೆ ಸರಿಯಾಗಿ ಚಳಿ ಬಿಡಿಸಿದ ನಟ ದಶ೯ನ್, ಇಡೀ ಚಿತ್ರರಂಗವೇ ಶಾ ಕ್

 | 
ರಿ

ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್  ನಟನೆಯ ಕಾಟೇರ ಸಿನಿಮಾ ದೊಡ್ಡ ಹಿಟ್ ಆಗಿದೆ. ದರ್ಶನ್​ರ ಸ್ಟಾರ್​ಡಮ್​ ಮಾತ್ರವೇ ಅಲ್ಲದೆ ಸಿನಿಮಾದಲ್ಲಿರುವ ಕಂಟೆಂಟ್​ನಿಂದಾಗಿ ಈ ಸಿನಿಮಾ ಗೆದ್ದಿದೆ ಎನ್ನಲಾಗುತ್ತಿದೆ. ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಕಲೆಕ್ಷನ್ 200 ಕೋಟಿಗೂ ಹೆಚ್ಚಾಗಿದೆ ಎನ್ನಲಾಗುತ್ತಿದೆ.

 ಇದರ ನಡುವೆ ಚಿತ್ರರಂಗದ ಮತ್ತೊಬ್ಬ ಯಶಸ್ವಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಕಾಟೇರ ಸಿನಿಮಾದ ಕತೆ ತಮ್ಮ ನಿರ್ಮಾಣ ಸಂಸ್ಥೆಗಾಗಿ ತಾವು ಮಾಡಿಸಿದ್ದಾಗಿ ಹೇಳಿದ್ದಾರೆ.ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಉಪಾಧ್ಯಕ್ಷ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾ ಕುರಿತಾಗಿ ನೀಡಿದ ಸಂದರ್ಶನದಲ್ಲಿ ಕಾಟೇರ ಸಿನಿಮಾದ ಯಶಸ್ಸಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಇಂದು ಸಿನಿಮಾ ಮಾಡುವುದು ಸುಲಭವಿಲ್ಲ.

 ಸಿನಿಮಾದ ಹಲವು ವಿಭಾಗಗಳಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ಕಾಟೇರ ಸಿನಿಮಾ ಈ ಮಟ್ಟದ ಯಶಸ್ಸಾಗಿದೆ ಅವರೆಲ್ಲರ ಶ್ರಮ ಕಾರಣ. ನಿರ್ದೇಶಕರು ಚೆನ್ನಾಗಿ ಕೆಲಸ ಮಾಡಿದ್ದಾರೆ, ಜಡೇಶ್ ಒಳ್ಳೆ ಕತೆ ಮಾಡಿದ್ದಾರೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ದರ್ಶನ್ ಬಹಳ ಚೆನ್ನಾಗಿ ನಟಿಸಿದ್ದಾರೆಂದು ಎಲ್ಲರೂ ಹೇಳುತ್ತಿದ್ದಾರೆ ಎಂದಿದ್ದಾರೆ.ಕಾಟೇರ ಸಿನಿಮಾದ ಕತೆಯೊಟ್ಟಿಗೆ ನನಗೆ ಬಂಧವಿದೆ.

 ಆ ಕತೆ ನಮ್ಮ ಬ್ಯಾನರ್​ಗಾಗಿ ನಾನು ಮಾಡಿಸಿದ್ದೆ. ಕಾರಣಾಂತರಗಳಿಂದ ಆಗಲಿಲ್ಲ, ಇರಲಿ ತೊಂದರೆ ಇಲ್ಲ, ಸರಸ್ವತಿ ಯಾರೊಬ್ಬರ ಆಸ್ತಿಯಲ್ಲ, ಯಾರಿಗೆ ಏನು ಧಕ್ಕಬೇಕು ಎನ್ನುವುದು ಪೂರ್ವ ನಿರ್ಧರಿತ, ಅದೇ ಅವರಿಗೆ ಧಕ್ಕುತ್ತದೆ. ಬಹಳ ದಿನಗಳ ನಂತರ ಎಲ್ಲರೂ ಚಿತ್ರಮಂದಿರಕ್ಕೆ ಬಂದು ಕಾಟೇರ ಸಿನಿಮಾ ನೋಡಿದರು. ಬರೀ ಅಭಿಮಾನಿಗಳು ಮಾತ್ರವೇ ಅಲ್ಲ, ಬೇರೆ ನಟರ ಅಭಿಮಾನಿಗಳು ಸಹ ಬಂದು ಕಾಟೇರ ಸಿನಿಮಾ ನೋಡಿದರು. ನನಗೆ ಖುಷಿ ಏನೆಂದರೆ ನನ್ನ ಅಭಿರುಚಿ ಯಶಸ್ವಿ ಆಯಿತೆಂಬ ಖುಷಿ ಇದೆ. ನನ್ನ ಜಡ್ಜ್​ಮೆಂಟ್ ರಾಂಗ್ ಆಗಿಲ್ಲ ಎಂಬ ಖುಷಿ ಇದೆ ಎಂದಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ