ಬಿಗ್ಬಾಸ್ ವೇದಿಕೆಯಲ್ಲಿ ದಶ೯ನ್ ಬಗ್ಗೆ ಹಾಡಿ ಹೊಗಳಿದ ನಟ ಧ್ರುವ, ಸುದೀಪ್ ಕೆಂ ಡಾಮಂಡಲ
| Oct 1, 2024, 08:30 IST
ಹಲವು ಸಿನಿಮಾಗಳಲ್ಲಿ ನಟಿಸಿರುವ ಧರ್ಮ ಕೀರ್ತಿರಾಜ್ ಅವರು ಈಗ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. ಕಿಚ್ಚ ಸುದೀಪ್ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಮೊದಲ ಸಂಚಿಕೆಯಲ್ಲಿ ಸುದೀಪ್ ಎದುರಲ್ಲಿ ಧರ್ಮ ಅವರು ದರ್ಶನ್ ಬಗ್ಗೆ ಮಾತನಾಡಿದರು. ದರ್ಶನ್ ನೀಡಿದ ಅವಕಾಶವನ್ನು ಧರ್ಮ ಮೆಲುಕು ಹಾಕಿದ್ದಾರೆ.
ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ದರ್ಶನ್ ಮತ್ತು ಸುದೀಪ್ ಅವರು ಕಾರಣಾಂತರಗಳಿಂದ ದೂರಾದರು. ಅವರಿಬ್ಬರ ಸ್ನೇಹಕ್ಕೆ ಪೂರ್ಣವಿರಾಮ ಬಿದ್ದು ಹಲವು ವರ್ಷಗಳು ಕಳೆದಿವೆ. ಮೊದಮೊದಲು ದರ್ಶನ್ ಬಗೆಗಿನ ಪ್ರಶ್ನೆಗಳಿಗೆ ಸುದೀಪ್ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಪ್ರತಿಕ್ರಿಯಿಸುವುದು ಕಡಿಮೆ ಮಾಡಿದರು. ಈಗ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ನಡೆಸಿಕೊಡುತ್ತಿದ್ದಾರೆ.
ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ದರ್ಶನ್ ಮತ್ತು ಸುದೀಪ್ ಅವರು ಕಾರಣಾಂತರಗಳಿಂದ ದೂರಾದರು. ಅವರಿಬ್ಬರ ಸ್ನೇಹಕ್ಕೆ ಪೂರ್ಣವಿರಾಮ ಬಿದ್ದು ಹಲವು ವರ್ಷಗಳು ಕಳೆದಿವೆ. ಮೊದಮೊದಲು ದರ್ಶನ್ ಬಗೆಗಿನ ಪ್ರಶ್ನೆಗಳಿಗೆ ಸುದೀಪ್ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಪ್ರತಿಕ್ರಿಯಿಸುವುದು ಕಡಿಮೆ ಮಾಡಿದರು. ಈಗ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ನಡೆಸಿಕೊಡುತ್ತಿದ್ದಾರೆ. ಆ ವೇದಿಕೆಯಲ್ಲಿ ಅವರ ಎದುರು ನಿಂತು ಧರ್ಮ ಕೀರ್ತಿರಾಜ್ ಅವರು ದರ್ಶನ್ ಬಗ್ಗೆ ಮಾತನಾಡಿದ್ದು ವಿಶೇಷ.
ಧರ್ಮ ಕೀರ್ತಿರಾಜ್ ಅವರು 6ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ದೊಡ್ಮನೆಯೊಳಗೆ ಹೋಗುವುದಕ್ಕೂ ಮುನ್ನ ಅವರನ್ನು ಸುದೀಪ್ ಮಾತನಾಡಿಸಿದರು. ಆಗ ದರ್ಶನ್ ಬಗ್ಗೆ ಪ್ರಸ್ತಾಪ ಆಯಿತು. ಧರ್ಮ ಕೀರ್ತಿರಾಜ್ ಮೊದಲು ನಟಿಸಿದ್ದು ‘ನವಗ್ರಹ’ ಸಿನಿಮಾದಲ್ಲಿ. ದರ್ಶನ್ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಸಿನಿಮಾವನ್ನು ಮೀನಾ ತೂಗುದೀಪ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. ಅಂದು ಅವಕಾಶ ನೀಡಿದ್ದನ್ನು ಧರ್ಮ ಕೀರ್ತಿರಾಜ್ ನೆನಪಿಸಿಕೊಂಡರು.
ನಮ್ಮ ತಂದೆ 40 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಆಶೀರ್ವಾದ ಮತ್ತು ಜನರ ಆಶೀರ್ವಾದ ಇದೆ. ನನ್ನ ಮೊದಲ ಸಿನಿಮಾ ‘ನವಗ್ರಹ’. ತೂಗುದೀಪ ಸಂಸ್ಥೆಯಿಂದ ನಾನು ಬಂದಿದ್ದು. ದರ್ಶನ್ ಸರ್ ಮತ್ತು ದಿನಕರ್ ಸರ್ ನನಗೆ ಅವಕಾಶ ನೀಡಿದ್ದು. ಕಣ್ ಕಣ್ಣ ಸಲಿಗೆ.. ಹಾಡು ನನ್ನನ್ನು ಈವರೆಗೂ ಕಾಪಾಡಿಕೊಂಡು ಬಂದಿದೆ’ ಎಂದು ಧರ್ಮ ಕೀರ್ತಿರಾಜ್ ಹೇಳಿದರು. ಈ ಮಾತಿಗೆ ಕಿಚ್ಚ ಸುದೀಪ್ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.