ನಟಿ ಆರತಿ ಕುಟುಂಬದ ಛಿದ್ರ, 3 ಮದುವೆ‌ ಹಾಗೂ ಅವರ ಮಕ್ಕಳು ಹೇ ಗಿದ್ದಾರೆ

 | 
 Bjj
70-80ರ ದಶಕದ ಪ್ರಖ್ಯಾತ ಬಹುಬೇಡಿಕೆಯ ನಟಿ ಆರತಿ ತಮ್ಮ ಸರಳ, ಸುಂದರ ಅಭಿನಯದಿಂದ ಹಲವಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು. ಅವರ ಕಣ್ಣೋಟದ ಅಭಿನಯಕ್ಕೆ ಮಾರುಹೋಗದವರೇ ಇಲ್ಲ ಎನ್ನಬಹುದು. ಆದರೆ 1986ರ ನಂತರ 'ಟೈಗರ್' ಸಿನಿಮಾದಲ್ಲಿ ನಟಿಸಿದರು, 2005ರಲ್ಲಿ 'ಮಿಠಾಯಿ ಮನೆ' ಚಿತ್ರದ ನಿರ್ದೇಶನ ಮಾಡಿದರು. ಆ ನಂತರ ಆರತಿ ಚಿತ್ರರಂಗದಿಂದ ಹಿಂದೆ ಸರಿದರು. ವೈಯಕ್ತಿಕ ಜೀವನದ ಬಗ್ಗೆ ಬೇಸರವೋ ಅಥವಾ ಸಿನಿಮಾದಲ್ಲಿ ಅವರ ಇಚ್ಛೆಯಂತೆ ಪಾತ್ರಗಳು ಸಿಕ್ಕಿರಲಿಲ್ಲವೋ ಏನೋ ತೆರೆ ಮೇಲೆ ಆರತಿ ಬೆಳಗಲಿಲ್ಲ. 
ಇನ್ನು 1954ರಲ್ಲಿ ಜನಿಸಿದ ಆರತಿ ಒಟ್ಟಾರೆಯಾಗಿ 125 ಸಿನಿಮಾಗಳಲ್ಲಿ ನಟಿಸಿದ್ದಾರೆ. 1969ರಲ್ಲಿ 'ಗೆಜ್ಜೆಪೂಜೆ'ಯಲ್ಲಿ ನಟಿಸಿದ ನಂತರ 'ನಾಗರಹಾವು, ಎಡಕಲ್ಲು ಗುಡ್ಡದಮೇಲೆ, ಬಿಳಿ ಹೆಂಡ್ತಿ, ಧರ್ಮಸೆರೆ, ಪಡುವಾರಳ್ಳಿ ಪಾಂಡವರು, ರಂಗನಾಯಕಿ, ಹೊಂಬಿಸಿಲು, ಉಪಾಸನೆ, ಶುಭಮಂಗಳ, ಕಲಿಯುಗ' ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ 12 ಸಿನಿಮಾಗಳಲ್ಲಿ ಆರತಿ ಕಾಣಿಸಿಕೊಂಡಿದ್ದಾರೆ. 1986ರಲ್ಲಿ 'ನಮ್ಮ ನಮ್ಮಲ್ಲಿ' ಎಂಬ ಟಿವಿ ಸಿರೀಸ್‌ಗಳನ್ನು ಆರತಿ ನಿರ್ದೇಶನ ಮಾಡಿದ್ದಾರೆ. 'ಮಿಠಾಯಿ ಮನೆ' ಚಿತ್ರಕ್ಕೆ ಉತ್ತಮ ಮಕ್ಕಳ ಚಿತ್ರ ಎಂಬ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಸಂದಿದೆ.
ಡಾ.ರಾಜ್‌ಕುಮಾರ್, ಶ್ರೀನಾಥ್, ಡಾ.ವಿಷ್ಣುವರ್ಧನ್, ಕಮಲ್‌ಹಾಸನ್, ಲೋಕೇಶ್, ಅನಂತ್‌ನಾಗ್‌, ಜೈಜಗದೀಶ್, ಶಂಕರ್‌ನಾಗ್‌, ಅಂಬರೀಶ್, ರಾಜೇಶ್, ಪ್ರಭಾಕರ್, ಶರತ್ ಬಾಬು, ಕಲ್ಯಾಣ್‌ಕುಮಾರ್ ಮುಂತಾದ ಮೇರುನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ ಇವರು. ಆರತಿ ಅಂದಿನ ಕಾಲದ ಯುವಕರ ಕನಸಿನ ಕನ್ಯೆ ಆಗಿದ್ದರು. ವಿಧಾನಪರಿಷತ್‌ ಸದಸ್ಯೆ ಕೂಡ ಆಗಿದ್ದರು ಆರತಿ. ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಆ ಹಳ್ಳಿಗಳಿಗೆ ಶೌಚಾಲಯ, ಆಸ್ಪತ್ರೆ, ಆ ಶಾಲೆಯ ಹೆಣ್ಣು ಮಕ್ಕಳಿಗೆ ಸ್ವಉದ್ಯೋಗ ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಬೆಂಗಳೂರಿನ ಜೆಪಿ ನಗರದಲ್ಲಿ ಸರ್ಕಾರ ಅವರಿಗೆ ನಿವಾಸ ನೀಡಿತ್ತು. ಆ ನಿವಾಸನ್ನು ಕಾರ್ಪೋರೇಟ್‌ ಕಂಪನಿಯೊಂದಕ್ಕೆ ನೀಡಿದ್ದಾರೆ ಎನ್ನಲಾಗಿತ್ತು. ದೇವನಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ಆರತಿ ಇದ್ದಾರೆ ಎಂಬ ಊಹಾಪೋಹವಿದೆ. ಬೆಂಗಳೂರಿನ ಪ್ಯಾಲೇಸ್ ರೋಡ್‌ನ ಬಳಿಯಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆರತಿ ನೆಲೆಸಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಆರತಿ ಗಂಡನ ಜೊತೆ ಅಮೆರಿಕಾದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿಯೂ ಇದೆ. ಅವರಿಗೆ ಯಶಸ್ವಿನಿ, ಪ್ರೀತಿ ಎಂಬ ಮಗಳಿದ್ದಾರೆ ಎನ್ನಲಾಗಿತ್ತು. ಒಟ್ಟಾರೆಯಾಗಿ ಆರತಿ ಸಾರ್ವಜನಿಕ ಬದುಕಿನಿಂದ ದೂರವಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.