ಹಲವು ವಷ೯ಗಳ ನಂತರ ಮುದ್ದಿನ ಮಗನ ಜೊತೆ ಸಂಭ್ರಮದಲ್ಲಿ ನಟಿ ಮೇಘನಾ ರಾಜ್, ವಿಡಿಯೋ ವೈರಲ್

 | 
ರರಪ

 ನಟಿ ಮೇಘನಾ ರಾಜ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿರು ಸರ್ಜಾ ನಿಧನ ದ ನಂತರ ಕೊಂಚ ಬೇಸರದಲ್ಲಿದ್ದ ಮೇಘನಾ ಈಗ ಮತ್ತೆ ಮೊದಲಿನ ಹಾಗೆ ಆಗಿದ್ದಾರೆ. ಇತ್ತೀಚಿಗೆ ಮೇಘನಾ ರಾಜ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ತಮ್ಮದೇ ಚಿತ್ರದ ಹಾಡಿಗೆ ಅನ್ನೋದು ವಿಶೇಷ. 

ಮೊನ್ನೆ ತಾನೆ ಈ ಗೀತೆ ರಿಲೀಸ್ ಆಗಿದೆ. ಈ ಒಂದು ಹಾಡು ತುಂಬಾನೆ ವಿಶೇಷವಾಗಿದೆ. ಇದನ್ನ ಕೇಳಿದಾಗ ನಿಮಗೆ ನಿಮ್ಮ ಅಮ್ಮ ನೆನಪಿಗೆ ಬರೋದು ಗ್ಯಾರಂಟಿ. ಅಮ್ಮನ ಲಾಲಿ ಹಾಡಿನ ಭಾವನ ಎಂತಹ ಕಲ್ಲು ಮನಸ್ಸನ್ನು ಮಗು ಆಗಿಸುತ್ತದೆ. ತತ್ಸಮ ತದ್ಬವ ಚಿತ್ರದ ಈ ಗೀತೆಯಿಂದ ಇನ್ನೂ ಒಂದು ಚಾನ್ಸ್ ಕೂಡ ಅಮ್ಮಂದಿರಿಗೆ ಸಿಗಲಿದೆ. ಆ ವಿಷಯವನ್ನ ಸ್ವತಃ ಮೇಘನಾ ರಾಜ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ವಿಷಯ ಏನಪ್ಪ ಅಂದರೆ ದೂರಿ ಲಾಲಿ ದೂರಿ ಲಾಲಿ ಅನ್ನು ಈ ಹಾಡಿನ ಲಿರಿಕಲ್ ವಿಡಿಯೋ ಮೊನ್ನೆ ರಿಲೀಸ್ ಆಗಿದೆ. ಈ ಹಾಡಿನ ರಿಲೀಸ್ ಕೂಡ ವೈರಲ್ ಆಗುತ್ತಿವೆ. 

ಅದಕ್ಕೂ ಮೊದಲೇ ಸ್ವತಃ ಮೇಘನಾ ರಾಜ್ ಒಂದು ರಿಲೀಸ್ ಮಾಡಿದ್ದಾರೆ. ಇದು ತುಂಬಾನೆ ಸ್ಪೆಷಲ್ ಆಗಿದೆ. ಪುತ್ರ ರಾಯನ್‌ ಈ ವಿಡಿಯೋದಲ್ಲಿರೋದು ಕೂಡ ವಿಶೇಷವೇ ಅಗಿದೆ.ತತ್ಸಮ ತದ್ಬವ ಚಿತ್ರದಲ್ಲಿ ಅಮ್ಮ-ಮಗಳ ಲಾಲಿ ಹಾಡು ಇದಾಗಿದೆ. ಮಗಳನ್ನ ತೊಡೆ ಮೇಲೆ ಮಲಗಿಸಿಕೊಂಡು ಮೇಘನಾ ರಾಜ್ ಇಲ್ಲಿ ಹಾಡು ಹಾಡ್ತಾರೆ. ಇವರ ಈ ಹಾಡಿನಲ್ಲಿ ಒಂದು ಮಮತೆಯ ಭಾವನೆ ಇದೆ. ಅಮ್ಮ-ಮಗಳ ಪ್ರೀತಿಯ ಆಪ್ತತೆನೂ ಕಂಡು ಬರುತ್ತದೆ.

ಚಿತ್ರದ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಈ ಹಾಡನ್ನ ಬರೆದು ಸಂಗೀತ ಮಾಡಿದ್ದಾರೆ. ಸುನಿಧಿ ಗಣೇಶ್ ಈ ಗೀತೆ ಜೀವ ತುಂಬಿದ್ದಾರೆ. ಇದನ್ನ ಕೇಳಿದ್ರೆ ಗ್ಯಾರಂಟಿ ಖುಷಿ ಆಗುತ್ತದೆ. ಅಮ್ಮ ನೆನಪಾಗೋದು ಕೂಡ ಅಷ್ಟೆ ಸತ್ಯ ನೋಡಿ. ಅಂತಹ ಈ ಹಾಡಿಗೆ ಒಂದು ರೀಲ್ಸ್ ಮಾಡೋದು ಈಗೀನ ಒಂದು ಚಾಲೆಂಜ್ ಆಗಿದೆ.

ಪುತ್ರ ರಾಯನ್ ಜೊತೆಗೆ ಇದೇ ಹಾಡಿಗೆ ನಟಿ ಮೇಘನಾ ರಾಜ್ ರಿಲೀಸ್‌ ಮಾಡಿದ್ದಾರೆ. ಈ ಮೂಲಕ ದೂರಿ ಲಾಲಿ ಚಾಲೆಂಜ್ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ತತ್ಸಮ ತದ್ಬವ ಚಿತ್ರದ ಈ ಹಾಡಿಗೆ ತಮ್ಮ ಮಕ್ಕಳೊಟ್ಟಿಗೆ ರೀಲ್ಸ್ ಮಾಡಬೇಕು. ಹಾಗೆ ಆಯ್ಕೆ ಆದ ಮೂರು ಅಮ್ಮಂದಿರ ಜೊತೆಗೆ ಮೇಘನಾ ರಾಜ್ ಮಾತಿಗೆ ಸಿಕ್ತಾರೆ.ಅವರ ಮನೆಗೆ ಕೂಡ ಕರೆದುಕೊಂಡು ಹೋಗ್ತಾರೆ. ಒಟ್ಟಿನಲ್ಲಿ ಈ ಹಾಡಿನ ರೀಲ್ಸ್ ಮಾಡಿ ವಿಜೇತರಾದ 3 ಜನ ತಾಯಂದಿರು ಮೇಘನಾ ರಾಜ್ ಮನೆಯನ್ನು ನೋಡಬಹುದಾಗಿದೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.