ಡಾಲಿ ಧನಂಜಯ್ ಮದ್ವೆ ಯಲ್ಲಿ ನಟಿ ಮೇಘನಾ ರಾಜ್ ಸಕ್ಕತ್ ಡ್ಯಾನ್ಸ್, ಫಿದಾ ಆದ ಕನ್ನಡಿಗರು
Feb 18, 2025, 17:11 IST
|

ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಅವರು ಧನ್ಯತಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಡಾಲಿ ಅವರು ಇತ್ತೀಚೆಗೆ ಧನ್ಯತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.ಧನಂಜಯ್ ಅವರ ಮದುವೆಗೆ ಕ್ವೀನ್ ರಮ್ಯಾ ಅವರು ಆಗಮಿಸಿದ್ದರು.
ಆಕರ್ಷಕವಾದ ಗೋಲ್ಡನ್ ಸೀರೆ ಉಟ್ಟುಕೊಂಡು ಬಂದಿದ್ದ ರಮ್ಯಾ ಅವರು ಡಾಲಿ ಹಾಗೂ ಧನ್ಯತಾ ಅವರಿಗೆ ಶುಭಾಶಯ ತಿಳಿಸಿ ಫೋಟೋಗೆ ಪೋಸ್ ಕೊಟ್ಟರು.ಡಾಲಿ ಅವರು ವಿಶ್ ಮಾಡೋಕೆ ರಮ್ಯಾ ಅವರೊಂದಿಗೆ ಪ್ರೀತಿಯಿಂದ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಧನ್ಯತಾ ಅವರು ಕೂಡಾ ಫುಲ್ ಸ್ಮೈಲ್ನಲ್ಲಿ ವಧುವಾಗಿ ಮಿಂಚಿದ್ದಾರೆ.
ಇನ್ನು ಪುಟ್ಟ ಮಗನೊಂದಿಗೆ ಮೇಘನಾ ರಾಜ್ ಕೂಡಾ ಬಂದಿದ್ದು ಚಂದದ ಸೀರೆ ಉಟ್ಟು ಸಕತ್ತಾಗಿ ಡ್ಯಾನ್ಸ್ ಮಾಡುವ ಮೂಲಕ ಮದುವೆಯನ್ನು ಎಂಜಾಯ್ ಮಾಡಿದ್ದಾರೆ . ವಿಶ್ರಾಂತಿ ಅಲ್ಲಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕೂಡಾ ಡಾಲಿ ಹಾಗೂ ಧನ್ಯತಾ ಅವರ ಮದುವೆಗೆ ಆಗಮಿಸಿದ್ದಾರೆ. ವೈಟ್ ಶರ್ಟ್ ಹಾಗೂ ಬ್ಲ್ಯಾಕ್ ಪ್ಯಾಂಟ್ ಧರಿಸಿ ಇನ್ಶರ್ಟ್ ಮಾಡಿಕೊಂಡಿದ್ದ ಶಿವರಾಜ್ಕುಮಾರ್ ಅವರು ಸಖತ್ ಆಗಿ ಕಾಣಿಸಿದ್ದಾರೆ.
ಸೆಲೆಬ್ರಿಟಿಗಳು ಡಾಲಿ ಧನಂಜಯ್ ಅವರ ಮದುವೆಗೆ ಆಗಮಿಸುತ್ತಿದ್ದಂತೆ ಅಲ್ಲಿ ನೂಕು ನುಗ್ಗಲು ಕೂಡಾ ಸ್ವಲ್ಪ ಹೆಚ್ಚೇ ಇತ್ತು. ಸ್ಯಾಂಡಲ್ವುಡ್ನಿಂದ ಹೆಚ್ಚಿನ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ್ದರು. ಪತಿ ಚಿರಂಜೀವಿ ಸರ್ಜಾ ಇಲ್ಲದ ನೋವನ್ನು ಮರೆತು ಎಲ್ಲರೊಂದಿಗೆ ನಗುನಗುತ್ತಲೇ ಬೆರೆವ ಮೇಘನಾ ರಾಜ್ ಅವರನ್ನು ನೋಡಿ ಹಿರಿಯ ತಾರಾ ಮಣಿಯರು ಕರೆದು ಮಾತನಾಡಿಸಿ ನಗೆಯ ಬೀರಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.