ನಟಿ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಕೊನೆಗೂ ಮನಬಿಚ್ಚಿ ಮಾತನಾಡಿದ ತಾಯಿ

 | 
Gui

 ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಮತ್ತು ನಟಿ ಚಿರಂಜೀವಿ ಸರ್ಜಾ ಬಹುಕಾಲ ಪ್ರೀತಿ ಮಾಡಿ, ಎರಡೂ ಮನೆಯವರನ್ನು ಕಷ್ಟಪಟ್ಟು ಮದುವೆಗೆ ಒಪ್ಪಿಸಿ ಸಪ್ತಪದಿ ತುಳಿದಿದ್ದರು. ಆದರೆ, ಈ ಮುದ್ದಾದ ಜೋಡಿ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಏನೋ, ಚಿರಂಜೀವಿ ಸರ್ಜಾ ಅಕಾಲಿಕ ಸಾವನ್ನಪ್ಪಿ ದೊಡ್ಡ ನೋವನ್ನೇ ಬಿಟ್ಟು ಹೋದರು. 2020ರ ಜೂನ್‌ 7ರಂದು ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದರು. ಅಂದಿನಿಂದ ಈ ವರೆಗೂ ಎಲ್ಲ ನೋವನ್ನು ನುಂಗಿ ಮಗ ರಾಯನ್‌ ಜತೆಯಲ್ಲಿ ತಮ್ಮ ಖುಷಿಯನ್ನು ಕಾಣುತ್ತ ಜೀವನ ದೂಡುತ್ತಿದ್ದಾರೆ ಮೇಘನಾ.

ಇದೀಗ ಇನ್ನೇನು ಜೂನ್‌ ಬಂದೇ ಬಿಡ್ತು. ಚಿರು ಸರ್ಜಾ ಇಲ್ಲವಾಗಿ ಭರ್ತಿ ನಾಲ್ಕು ವರ್ಷ ಕಳೆಯಲಿದೆ. ಈ ನಾಲ್ಕು ವರ್ಷದಲ್ಲಿ ಸಾಕಷ್ಟು ಏಳು ಬೀಳು ಅನುಭವಿಸಿರುವ ಮೇಘನಾ, ಪತಿಯ ನೆನಪಿನಲ್ಲಿಯೇ ದಿನ ಕಳೆಯುತ್ತಿದ್ದಾರೆ. ಈ ನಡುವೆ ಮೇಘನಾ ಎರಡನೇ ಮದುವೆ ಬಗ್ಗೆಯೂ ಒಂದಷ್ಟು ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆಯಾದರೂ, ಆ ಸುಳ್ಳು ಸುದ್ದಿಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೀಗ ಇದೇ ವಿಚಾರದ ಬಗ್ಗೆ ಮೇಘನಾ ಅವರ ತಾಯಿ ಪ್ರಮೀಳಾ ಜೋಷಾಯ್‌ ತಮ್ಮ ಮನದ ಇಂಗಿತವನ್ನು ಹೇಳಿಕೊಂಡಿದ್ದಾರೆ.

ಇವತ್ತಿನವರೆಗೂ ಎರಡನೇ ಮದುವೆ ಬಗ್ಗೆ ಅವಳಿಂದ ಯಾವುದೇ ಉತ್ತರ ಬಂದಿಲ್ಲ. ಅವಳು ಆ ರೀತಿಯ ಆಸೆಯನ್ನು ತೋರಿಸಿಲ್ಲ. ನನ್ನ ಸಂಬಂಧಿಕರು ಈ ಬಗ್ಗೆ ಕೇಳುತ್ತಾರಾದರೂ, ಅವಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಅವಳು ತುಂಬ ಸಹಜವಾಗಿದ್ದಾಳೆ. ಮೇಘನಾ ವಿಷ್ಯದಲ್ಲಿ, ಅವಳು ಯಾವುದನ್ನೂ ಹೇಳಿಕೊಳ್ಳುವುದಿಲ್ಲ. ನೋವಾಗಿರಬಹುದು, ಸಂತೋಷ ಇರಬಹುದು ಎಲ್ಲವನ್ನೂ ಒಳಗೆ ಇರಿಸಿಕೊಂಡಿರುತ್ತಾಳೆ. ಇಲ್ಲಿಯವರೆಗೂ ನನ್ನ ಬಳಿ ಬಂದು ಏನನ್ನೂ ಹೇಳಿಕೊಂಡಿಲ್ಲ. ನಮಗೆ ಚೂರು ಏನಾದರೂ ಆದ್ರೆ, ಅದನ್ನು ಹೇಳಿಕೊಂಡ್ರೆ ಸಾಕಪ್ಪ ಅಂತಿರ್ತಿವಿ. ಆದರೆ, ಅವಳು ಏನನ್ನೂ ಹೇಳಲ್ಲ. ಕಂಟ್ರೋಲ್‌ ಕೆಪಾಸಿಟಿ ಜಾಸ್ತಿನೇ ಇದೆ ಅವಳಿಗೆ.

ತಾಯಿಯಾಗಿ ನನಗೂ ಆಸೆ ಇದೆ. ಅವಳೂ ಇನ್ನೊಂದು ಮದುವೆ ಆಗಬೇಕು. ಮಗಳು ಸೆಟಲ್‌ ಆಗಬೇಕು, ಅವಳಿಗೂ ಒಂದು ನೆಲೆಬೇಕು ಎಂದು ನನಗೂ ಅನಿಸಿದೆ. ಯಾವುದೇ ತಾಯಿಯೂ ಇದನ್ನು ಬಯಸುತ್ತಾಳೆ. ಮುಂದೊಂದು ದಿನ ಇದು ಆಕೆಗೂ ಅನಿಸಬಹುದು ಎಂದುಕೊಂಡಿದ್ದೇನೆ. ಹೆತ್ತವರು ನಮಗೆ ಅನಿಸಿದ್ದು ಅವಳಿಗೂ ಅನಿಸಬೇಕು ಎಂದೇನಿಲ್ಲ. ಇಲ್ಲದಿದ್ದರೆ ಬಲವಂತ ಆಗಿ ಬಿಡುತ್ತದೆ. ಮದುವೆ ವಿಚಾರದಲ್ಲಿ ನಾವು ಅವಳಿಗೆ ಒತ್ತಡ ಹೇರುತ್ತಿಲ್ಲ. ಅವಳಿಗೆ ಯಾರು ಆಪ್ತರಿದ್ದಾರೋ, ತುಂಬ ಕ್ಲೋಸ್‌ ಫ್ರೆಂಡ್ಸ್‌ ಇರುತ್ತಾರೋ ಅವರ ಮುಖಾಂತರವಾದ್ರೂ ಹೇಳಿಸೋಣ ಅಂತ ವಿಚಾರ ಮಾಡಿದ್ದೆ. ಆದರೆ ಅವಳಿಗೆ ನೋವು ನೀಡುವ ಮನಸ್ಸಿಲ್ಲ ಎಂದಿದ್ದಾರೆ.

ನನಗೆ ನೇರವಾಗಿ ಆಕೆ ಬಳಿ ಹೇಳಲು ಕಷ್ಟವಾಗುತ್ತೆ. ತಾಯಿಯಾಗಿ ಈ ವಿಚಾರವನ್ನು ಆಕೆ ಬಳಿ ಕೇಳುವುದು ನನಗೆ ಕಷ್ಟ. ಹೇಗಾದ್ರೂ ಮಾಡಿ ಈ ವಿಚಾರವನ್ನು ಆಕೆಯ ಕಿವಿಗೆ ಹಾಕೋಣ ಎಂದು ಅನಿಸಿದ್ದುಂಟು. ಕೆಲವು ಸ್ನೇಹಿತರು ಈ ವಿಚಾರ ಅವಳ ಮುಂದೆ ಮಾತನಾಡಲ್ಲ ಎಂದು ಸುಮ್ಮನಿದ್ದಾರೆ. ಏಕೆಂದರೆ ಕಷ್ಟಕರವಾದ ವಿಷಯ ಇದು. ಡೈರೆಕ್ಟ್‌ ಆಗಿ ಅವಳ ಬಳಿ ಏನ್ನನ್ನೂ ಕೇಳಲು ಆಗ್ತಿಲ್ಲ. ದೇವರು ಅದಕ್ಕೆ ಅಂತ ಸಮಯ ಇಟ್ಟಿರುತ್ತಾನೆ. ಅವಳ ಋಣ ಹೇಗಿದ್ಯೋ ನೋಡಬೇಕು. ಅವಳಿಗೆ ಎಲ್ಲರ ಆಶೀರ್ವಾದವಿದೆ. ಯಾವುದೋ ಒಂದು ಒಳ್ಳೆಯ ದಿನ ಬರುತ್ತೆ. ಅದಕ್ಕಾಗಿ ನಾವೂ ಕಾಯುತ್ತಿದ್ದೇವೆ ಎಂದಿದ್ದಾರೆ ಪ್ರಮಿಳಾ ಜೋಷಾಯ್.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.