ಕಿಚ್ಚನ ಚಪ್ಪಾಳೆಗೂ ಮಂಗಳಾರತಿ ಮಾಡಿದ ನಟಿ ನಮ್ರತಾ ಗೌಡ, ಕಿಚ್ಚನ ಅಭಿಮಾನಿಗಳಿಂದ ತೀವ್ರ ಆಕ್ರೋಶ

 | 
Hh

ಬಿಗ್‌ ಬಾಸ್‌ ಸೀಸನ್‌ 10 ಅಂತೂ ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಸ್ನೇಹಿತ್‌ ಗೌಡ ಅವರು ಈಗಾಗಲೇ ಎಲಿಮಿನೇಟ್‌ ಆಗಿದ್ದಾರೆ. ಇದೀಗ ನಮ್ರತಾ ಹಾಗೂ ವಿನಯ್‌ ಅವರು ಕಿಚ್ಚನ ಚಪ್ಪಾಳೆ ಕುರಿತು ನೆಗೆಟಿವ್‌ ಆಗಿ ಮಾತನಾಡಿದ್ದಾರೆ. ಕಿಚ್ಚನ ಚಪ್ಪಾಳೆ ಸುಮ್ಮನೆ ಯಾರಿಗೂ ಸಿಗುವುದಿಲ್ಲ. ಒಂದು ವಾರದ ಪರ್ಫಾರ್ಮೆನ್ಸ್​ನ ಗಮನದಲ್ಲಿ ಇಟ್ಟುಕೊಂಡು ಈ ಚಪ್ಪಾಳೆ ಕೊಡಲಾಗುತ್ತದೆ. 

ಹೀಗಿರುವಾಗ ಈ ಬಗ್ಗೆ ನಮ್ರತಾ ಅವರು ನೆಗೆಟಿವ್‌ ಮಾತನಾಡಿರುವುದು ತಪ್ಪು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಈ ವಾರ ರಾಕ್ಷಸರು ಹಾಗೂ ಗಂಧರ್ವರು ಎಂಬ ಟಾಸ್ಕ್‌ವನ್ನು ಬಿಗ್‌ ಬಾಸ್‌ ನೀಡಿದ್ದರು. ಎಲ್ಲ ಸ್ಪರ್ಧಿಗಳು ಬಹಳ ಅಗ್ರೆಸಿವ್‌ ಆಗಿ ಆಡಿದ ಕಾರಣ ಈ ವಾರ ಕಿಚ್ಚನ ಚಪ್ಪಾಳೆ ಸಿಗೋದು ಡೌಟ್‌ ಎಂದು ಸ್ಪರ್ಧಿಗಳೇ ಊಹಿಸಿದ್ದರು. ಕಳೆದವಾರ ಕಾರ್ತಿಕ್ ಅವರಿಂದ ಕೆಲವು ತಪ್ಪುಗಳು ಆಗಿದ್ದವು. 

ಉಳಿದ ಎಲ್ಲರಿಗೆ ಹೋಲಿಸಿದರೆ ಅವರ ಪರ್ಫಾರ್ಮೆನ್ಸ್ ಉತ್ತಮವಾಗಿತ್ತು. ಈ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಗುವುದಿಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ, ಸುದೀಪ್ ಅವರು ಕಾರ್ತಿಕ್ ಅವರಿಗೆ ಕಿಚ್ಚನ ಚಪ್ಪಾಳೆ ನೀಡಿದರು. ನಮ್ರತಾ, ವಿನಯ್ ಹಾಗೂ ಮೈಕಲ್ ಕುಳಿತಿದ್ದರು. ಈ ವೇಳೆ ಕಿಚ್ಚನ ಚಪ್ಪಾಳೆ ಬಗ್ಗೆ ಚರ್ಚೆ ಆಗಿದೆ. ಕಿಚ್ಚನ ಚಪ್ಪಾಳೆಯನ್ನು ಯಾರೂ ಇಲ್ಲ ಎಂದು ಅವರಿಗೆ ನೀಡಿದ್ರಾ ಅಥವಾ ನಿಜವಗಾಲೂ ಅವರ ಸಾಮರ್ಥ್ಯ ನೋಡಿ ಕೊಟ್ರ ಎಂದು ನಮ್ರತಾ ಪ್ರಶ್ನೆ ಮಾಡಿದ್ದಾರೆ. 

ಆಗ ವಿನಯ್, ನಾನು ಕೆಟ್ಟದಾಗಿ ಆಡಿದೆ, ಅದಕ್ಕೆ ಕಾರ್ತಿಕ್​ಗೆ ಸಿಕ್ತು ಎಂದಿದ್ದಾರೆ. ಇದೀಗ ನಮ್ರತಾ ಅವರು ಕಿಚ್ಚನ ಬಗ್ಗೆ ಹೀಗೆ ಡೌಟ್‌ ಆಗಿ ಮಾತನಾಡಿದ್ದು ಸಂಜಸವಲ್ಲ ಎಂದು ನೆಟ್ಟಿಗರು ಕಮೆಂಟ್‌ ಮಾಡಲು ಶುರು ಮಾಡಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 10ರ  9ನೇ ವಾರ ಕಾರ್ತಿಕ್‌ ಅವರಿಗೆ ಕಳಪೆ ಪಟ್ಟ ದೊರಕಿ ಜೈಲು ಸೇರಿದ್ದರು. ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಹಾಗೂ ಅವಿನಾಶ್‌ ಶೆಟ್ಟಿ ಉತ್ತಮ ಆಟಗಾರರಾಗಿ ಹೊರಹೊಮ್ಮಿದ್ದರು. 

ಬಹುತೇಕರು ಕಾರ್ತಿಕ್‌ ಅವರಿಗೆ ಕಳಪೆ ನೀಡಿದರೆ, ಅದೇ ಕಾರ್ತಿಕ್‌ಗೆ ಕಿಚ್ಚ ಸುದೀಪ್ ತಮ್ಮ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದರು. ಚೇರ್ ಆಫ್ ಥಾರ್ನ್ಸ್ ಆಟದಲ್ಲಿ ಹೆಚ್ಚು ಟಾರ್ಗೆಟ್‌ಗೆ ಒಳಗಾಗಿ ಕಡೆಯವರೆಗೂ ಕೂತ ಕಾರಣಕ್ಕೆ ಪವಿ ಪೂವಪ್ಪ ಅವರಿಗೆ ನಮ್ರತಾ, ಸ್ನೇಹಿತ್, ತುಕಾಲಿ ಸಂತು, ವರ್ತೂರು ಸಂತೋಷ್‌ ಅವರು ಉತ್ತಮ ನೀಡಿದರು. ಅವಿನಾಶ್ ಶೆಟ್ಟಿ ಅವರು ಎರಡು ಪಾತ್ರಗಳಲ್ಲಿ ಮನೆಯನ್ನು ರಂಜಿಸಿದ ಕಾರಣಕ್ಕೆ ಸಿರಿ, ಕಾರ್ತಿಕ್, ಮೈಕಲ್, ವಿನಯ್‌ ಉತ್ತಮ ಕೊಟ್ಟರು. 

ಸಂಗೀತಾ ಗಾಯಗೊಂಡು ಹೊರಗೆ ಹೋಗಿದ್ದ ಕಾರಣ ಎಲ್ಲರ ಗುರಿ ಕಾರ್ತಿಕ್ ಆದರು ಎಂಬುದಂತೂ ಸತ್ಯ. ಕಾರ್ತಿಕ್ ಟಾಯ್ಲೆಟ್‌ ವಿಚಾರವಾಗಿ ಪವಿ ಪೂವಪ್ಪ, ವಿನಯ್‌, ಸ್ನೇಹಿತ್ ಹಾಗೂ ನಮ್ರತಾ ದೊಡ್ಡ ಗಲಾಟೆಯನ್ನು ಮಾಡಿದ್ದರು. ಇದು ಹಾಗೂ ಚಪ್ಪಲಿ ವಿಚಾರವನ್ನು ಇಟ್ಟುಕೊಂಡು ಕಾರ್ತಿಕ್‌ ಅವರನ್ನು ಟಾರ್ಗೆಟ್‌ ಮಾಡಿ ಕಳಪೆಯನ್ನು ನೀಡಿದ್ದರು. ಈ ಬಗ್ಗೆ ಕಿಚ್ಚ ಸುದೀಪ್‌ ಪಂಚಾಯತಿ ನಡೆಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.