ಇಡೀ ಕರುನಾಡಿಗೆ ಸಿಹಿಸುದ್ದಿ, ಮುದ್ದಾದ ಮಗುವಿಗೆ ಜನ್ಮ ಕೊಟ್ಟ ನಟಿ ನೇಹಾ ಗೌಡ
Oct 9, 2024, 17:46 IST
|
ಲಕ್ಷ್ಮಿ ಬಾರಮ್ಮ ಸೀರಿಯಲ್ ನಟಿ ಗೊಂಬೆ ಇತ್ತೀಚೆಗೆ ಶಾಕುಂತಲೆಯಾಗಿ ಕೆರೆ ಬಳಿ ಕುಳಿತು ಫೋಟೊ ಶೂಟ್ ಮಾಡಿಸಿದ್ದು ವೈರಲ್ ಆಗಿದ್ದು, ಆದಾದ ಬಳಿಕ ನೇರಳೆ ಬಣ್ಣದ ಟ್ರಾನ್ಸ್ಪರೆಂಟ್ ಸೀರೆಯಲ್ಲೂ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದರು. ಇದೀಗ ಪತಿ ಚಂದನ್ ಗೌಡ ಜೊತೆ ನೇಹಾ ಗೌಡ ಕ್ಯೂಟ್ ಆಗಿರೋ ಫೋಟೊ ಶೂಟ್ ಮಾಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೊಸ ಫೋಟೊ ಶೂಟ್ ನ ವಿಡಿಯೋ ಹಾಗೂ ಒಂದಷ್ಟು ಫೋಟೊಗಳನ್ನು ನಟಿ ನೇಹಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ರೆಟ್ರೋ ಸ್ಟೈಲಲ್ಲಿ ಈ ಜೋಡಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ನೇಹಾ ಕಪ್ಪು ಬಣ್ಣದ ಫ್ಲೋರಲ್ ಸೀರೆ ಧರಿಸಿದ್ದು, ಕೈಯಲ್ಲಿ ಕಪ್ಪು ಗ್ಲೌಸ್, ಕಣ್ಣಲ್ಲಿ ಕಪ್ಪು ಕನ್ನಡಕ, ಎಣ್ಣೆ ಹಾಕಿ ಬಾಚಿದ ಬನ್ ಹೇರ್ ಸ್ಟೈಲ್ ಹಾಗೂ ಕುತ್ತಿಗೆಯಲ್ಲಿ ಮುತ್ತಿನ ಹಾರ ಧರಿಸಿದ್ರೆ, ಚಂದನ್ ಗೌಡ ಕಪ್ಪು ಬಣ್ಣದ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದು, ತಲೆಗೆ ಕಪ್ಪು ಬಣ್ಣದ ಕ್ಯಾಪ್ ಹಾಕಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆಯಾಗಿ ಜನಪ್ರಿಯತೆ ಗಳಿಸಿದ ನೇಹಾ ಗೌಡ, ನಂತರ ಬಿಗ್ ಬಾಸ್, ನಮ್ಮ ಲಚ್ಚಿ ಸೀರಿಯಲ್ ಜೊತೆ ತೆಲುಗು, ತಮಿಳು ಧಾರಾವಾಹಿಯಲ್ಲೂ ನಟಿಸಿದ್ದಾರೆ. ರಾಜಾ ರಾಣಿ ಶೋ ವಿನ್ನರ್ ಕೂಡ ಹೌದು. ಆಸ್ಟ್ರೇಲಿಯಾದಲ್ಲಿ ಕೆಲಸದಲ್ಲಿದ್ದ ಚಂದನ್ ರಾಜಾ ರಾಣಿಗಾಗಿ ಆಸ್ಟ್ರೇಲಿಯಾದ ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಬೆಂಗಳೂರು ಸೇರಿದ್ದರು, ನಂತರ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದರು. ಜೊತೆಗೆ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಸಹ ಗುರುತಿಸಿಕೊಂಡಿದ್ದರು ಚಂದನ್.
ಕೆಲ ಮೂಲಗಳ ಪ್ರಕಾರ ನೇಹಾ ಗೌಡ ಅವರಿಗೆ ಗಂಡು ಮಗು ಜನಿಸಿದ್ದು ಈ ಕುರಿತಾಗಿ ಅವರ ಗಂಡ ಚಂದನ್ ಅವರು ಪೊಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.ಆದರೆ ಇನ್ನು ಕೆಲವು ಕಡೆಗಳಲ್ಲಿ ಕಿರುತೆರೆ ನಟಿ ನೇಹಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂತ ಹೇಳಲಾಗುತ್ತಿದೆ.ಕೆಲವರು ನೇಹಾ ಗೌಡ ಅವರು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ ಎಂದು ಹೇಳಿದರೆ, ಇನ್ನು ಕೆಲವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ ಎಂದು ಸೀರಿಯಲ್ ಪ್ರೇಮಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡಿಕೊಳ್ಳುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.