ಬಿಗ್ ಬಾಸ್ ನಿಂದ ಹೊರಬಂದ ಕೂಡಲೇ ಲೈವ್ ಬಂದ ನಟಿ ಸಿರಿ, ಇವರ ಅಂದಕ್ಕೆ ಮನಸೋತ ಕನ್ನಡಿಗರು

 | 
ಕ್

 ಈ ಸಲದ ವೀಕೆಂಡ್ ಎಪಿಸೋಡ್​ನಲ್ಲಿ ನಟಿ ಸಿರಿ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ನಾಮಿನೇಟ್ ಆದವರ ಪೈಕಿ ಕೊನೆಯಲ್ಲಿ ಮೈಕಲ್ ಹಾಗೂ ಸಿರಿ  ಉಳಿದುಕೊಂಡಿದ್ದರು. ಸುದೀಪ್ ಅವರು ಸಿರಿ ಹೆಸರು ತೆಗೆದುಕೊಂಡರು. 

ಸಿರಿಗಿಂತ ಮನೆ ಮಂದಿ ಹೆಚ್ಚು ಬೇಸರಗೊಂಡಿದ್ದರು. ಸಂಗೀತಾ ಅವರು ಬಿಕ್ಕಿ ಬಿಕ್ಕಿ ಅತ್ತರು. ಮಾರ್ಗದರ್ಶಕರಂತಿದ್ದ ಸಿರಿಯನ್ನು ಬಿಗ್ ಬಾಸ್ ಮನೆ ಕಳೆದುಕೊಂಡಿದೆ. ಈ ಮೂಲಕ ಬಿಗ್ ಬಾಸ್​ ಸದಸ್ಯರ ಸಂಖ್ಯೆ 9ಕ್ಕೆ ಇಳಿಕೆ ಆಗಿದೆ. ಇದರ ಜೊತೆ ಸ್ಪರ್ಧೆಯೂ ಜೋರಾಗಿದೆ.


ಇನ್ನು ಈ ಕುರಿತಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿರುವ ಇವರು ನಾನು ಸ್ವಲ್ಪ ಜಾಸ್ತಿನೇ ಪಾಸಿಟೀವ್ ಆಗಿ ಯೋಚನೆ ಮಾಡುವವಳು. ಹಾಗಾಗಿ ಖಂಡಿತ ಸ್ವಲ್ಪ ಬೇಜಾರು ಇದ್ದೇ ಇಎ. ಫಿನಾಲೆಗೆ ಇಷ್ಟ ಹತ್ತಿರ ಬಂದ ಮೇಲೆ ಬಿಟ್ಟು ಹೋಗ್ತಿದ್ದೀನಲ್ವಾ ಅಂತ. ಆದರೆ ಇಷ್ಟು ವಾರ ಮನೆಯೊಳಗಿದ್ದೆನಲ್ಲ. ಈ ಪ್ರಯಾಣವನ್ನು ಆ ದಿಕ್ಕಿನಿಂದ ನೋಡಿ ಖುಷಿಪಡೋಣ ಅಂದುಕೊಳ್ಳುತ್ತಿದ್ದೇನೆ. ಬಿಗ್‌ಬಾಸ್ ಅಂದ್ರೆ ಕಿತ್ತಲಾಡಲೇಬೇಕು, ಎಲ್ಲರೂ ಪ್ರವೋಕ್‌ ಮಾಡ್ತಾರೆ ಎಂದೆಲ್ಲ ನಂಬಿಕೆ ಇದ್ದೇ ಇದೆ. ಆದರೆ ಹಾಗೇನಿಲ್ಲ. ಎಲ್ಲೋ ಒಂದ್ಕಡೆ ನಾನು ನನ್ನ ಕಂಫರ್ಟ್‌ ಝೋನ್‌ನಿಂದ ಹೊರಗೆ ಬರಲು ಸ್ವಲ್ಪ ಟೈಮ್ ತಗೊಂಡೆ. ಆದರೆ ನಾನು ಇರೋದೇ ಹಾಗೆ ಅಂದಿದ್ದಾರೆ.


ಕ್ಯಾಪ್ಟನ್ಸಿ ಟಾಸ್ಕ್‌ಗೆ ನಾನು ಬಹಳ ಹತ್ತಿರ ಹೋಗಿದ್ದೆ. ಎರಡು ಸಲ ಹೋಗಿದ್ದೆ. ಆದರೆ ಕ್ಯಾಪ್ಟನ್ ಆಗಲು ಆಗಲಿಲ್ಲ. ಕ್ಯಾಪ್ಟನ್ ಬೆಡ್ ಮೇಲೆ ಮಲಗುವ ಅವಕಾಶ ಸಿಗಲಿಲ್ಲ. ಆದರೆ ಕ್ಯಾಪ್ಟನ್‌ಗೆ ಸಿಗುವ ಸೌಲಭ್ಯಗಳನ್ನೆಲ್ಲ ಕಳೆದ ವಾರಗಳಲ್ಲಿ ನಾನು ತೆಗೆದುಕೊಂಡಿದೀನಿ. 

ಹಾಗಾಗಿ ಸುದೀಪ್ ಅವರೇ ನನಗೆ ಮನೆಯನ್ನು ನಿಭಾಯಿಸುವ ಜವಾಬ್ದಾರಿ ಕೊಟ್ರು. ಇಮ್ಯೂನಿಟಿ ಸಿಗುತ್ತದೆ ಕ್ಯಾಪ್ಟನ್ ಆದವರಿಗೆ. ವೈಲ್ಡ್ ಕಾರ್ಡ್‌ ಎಂಟ್ರಿ ಆದವರು ಆ ವಾರ ನನ್ನನ್ನು ಸೇವ್ ಮಾಡಿ ಆ ಸೌಲಭ್ಯವೂ ಸಿಗುವಂತೆ ಮಾಡಿದರು. ಮನೆಯವರು ಫೋಟೊ ಬರುತ್ತದೆ ಕ್ಯಾಪ್ಟನ್ ಆದವರಿಗೆ. ನನಗೆ ಮನೆಯಿಂದ ಪತ್ರ ಬಂದಾಗಲೇ ನನ್ನದು ನನ್ನ ತಂದೆಯವರದ್ದು ಫೋಟೊ ಬಂದಿತ್ತು. ಹಾಗಾಗಿ, ಕ್ಯಾಪ್ಟನ್ ಆಗಿ ಸಿಗುವ ಸೌಲಭ್ಯಗಳಲ್ಲಿ ಬಹುತೇಕ ನನಗೆ ಸಿಕ್ಕಿದೆ. ಆದರೆ ಕ್ಯಾಪ್ಟನ್ ಕೋಣೆ ಎಂಟರ್ ಆಗಿಲ್ಲ ನಾನು ಎಂದಿದ್ದಾರೆ.


ಈ ಸೀಸನ್‌ನಲ್ಲಿ ಅತ್ಯಂತ ಜೆನ್ಯೂನ್‌ ಅನಿಸುವುದು ಕಾರ್ತಿಕ್‌. ತುಂಬ ಕಷ್ಟಪಟ್ಟು, ತುಂಬ ಇಷ್ಟಪಟ್ಟು ಆಟ ಆಡ್ತಾ ಇದ್ದಾರೆ. ಫೇಕ್‌ ಅಂತ ನಾನು ಹೇಳೋದಿಲ್ಲ. ಆದರೆ ಆಟಕ್ಕೆ ಏನು ಬೇಕೋ, ಹೇಗೆ ಬೇಕೋ ಹಾಗೆ ತಿರುಗೋದು ಅಂದ್ರೆ ಅದು ತುಕಾಲಿ ಸಂತೋಷ್‌. ಟಾಪ್‌ 5ನಲ್ಲಿ ಕಾರ್ತೀಕ್, ವಿನಯ್‌, ವಿನಯ್, ತುಕಾಲಿ ಸಂತೋಷ್ ಮತ್ತು ತನಿಷಾ ಇರಬೇಕು. 

ಹುಡುಗಿ ವಿನ್ನರ್ ಆದ್ರೆ ನನಗೆ ಖುಷಿಯಾಗುತ್ತದೆ. ಹಾಗೆ ನೋಡಿದ್ರೆ ಸಂಗೀತಾ ಗೆಲ್ಲಬೋದು ಅನಿಸುತ್ತದೆ. ಆದರೆ ಈಗಿನ ಸನ್ನಿವೇಶ ನೋಡಿದ್ರೆ ಕಾರ್ತೀಕ್ ಗೆಲ್ಲಬಹುದು ಅನ್ನಿಸತ್ತೆ. ಮುಂದಿನ ವಾರ ಡೇಂಜರ್‍ ಝೋನ್‌ನಲ್ಲಿ ಮೈಕಲ್ ಇರ್ತಾರೆ ಅಂದ್ಕೊತೀನಿ ಅಂದರು.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.