ನಟಿ ಶೋಭಿತಾ ಶಿವಣ್ಣ ಸಾ ವಿಗೆ ಕಾರಣ ಬಯಲು, ಎಂಥವರಿಗೂ ಕಣ್ಣಲ್ಲಿ ನೀರು ಬರುತ್ತೆ
Dec 3, 2024, 16:06 IST
|
![ಗಾ](https://powerfullkarunadu.tech/static/c1e/client/98456/uploaded/99c3122436f710097ae1b93ce21dc8ac.jpg?width=981&height=515&resizemode=4)
ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯ ಜನಪ್ರಿಯ ನಟಿಯಾಗಿದ್ದ ಶೋಭಿತಾ ಶಿವಣ್ಣ ಸಾವನ್ನಪ್ಪಿ ಇಂದಿಗೆ ಮೂರು ದಿನ ಕಳೆದಿದೆ. ನವೆಂಬರ್ ತಿಂಗಳ ಕೊನೆಯ ದಿನ ಮನೆಯ ಕೋಣೆಯೊಳಗೆ ತೆರಳಿದ್ದ ನಟಿ ಮಾರನೇ ದಿನದ ಬೆಳಗು ನೋಡೇ ಇಲ್ಲ. ಬ್ರಹ್ಮಗಂಟು ನೀನಾದೆ ನಾ ಸೇರಿದಂತೆ ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ಪತಿ ಮನೆಯಲ್ಲಿರುವಾಗಲೇ ಸಾವಿಗೆ ಶರಣಾಗಿದ್ದಾರೆ.
ಮದುವೆ ಬಳಿಕ ಹೈದಾರಬಾದ್‌ಗೆ ತೆರಳಿ ಪತಿಯೊಂದಿಗೆ ವಾಸವಿದ್ದ ಶೋಭಿತಾ ಶಿವಣ್ಣ ಅಲ್ಲಿಯೇ ತಮ್ಮ ಕೊನೆಯ ದಿನಗಳನ್ನು ಕಳೆದು ಕೊನೆಯುಸಿರೆಳೆದಿದ್ದಾರೆ. ಸಂಸಾರದಲ್ಲಿಯೂ ಯಾವುದೇ ತೊಂದರೆ ಇಲ್ಲದೇ ಎಲ್ಲರೊಂದಿಗೆ ನಗು ನಗುತಾ ಇದ್ದ ಶೋಭಿತಾ ಶಿವಣ್ಣ ಯಾಕೆ ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡರು ಎನ್ನುವುದು ಎಲ್ಲರನ್ನೂ ಕಾಡುತ್ತಿದೆ.
ಇದೀಗ ಶೋಭಿತಾ ಶಿವಣ್ಣ ಸಾವಿಗೆ ಕಾರಣವಾದ ಕೆಲವು ಪ್ರಮುಖ ಅಂಶಗಳು ಬಹಿರಂಗಗೊಂಡಿದೆ. ಶೋಭಿತಾ ಶಿವಣ್ಣ ಸಾವಿನ ಮೇಲೆ ಎಷ್ಟೇ ಅನುಮಾನಗಳಿದ್ದರೂ ಸಹ ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಕೆಲವು ವಿಚಾರ ಹೊರಬಿದ್ದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎಂಬುದು ಖಚಿತವಾಗಿದೆ. ಶೋಭಿತಾ ತಾವೇ ಸಾವಿಗೆ ಶರಣಾಗಿರುವ ಬಗ್ಗೆ ಖಚಿತವಾಗಿದ್ದು, ಈ ವರದಿ ಕೊಲೆ ಎನ್ನುವ ಅನುಮಾನವನ್ನು ತೆಗೆದುಹಾಕಿದೆ.
ಇನ್ನು ಈ ಪ್ರಕರಣಕ್ಕೆ ಸಾಕ್ಷಿ ಎಂಬಂತೆ ಶೋಭಿತಾ ಶಿವಣ್ಣ ಡೆತ್ ನೋಟ್ ಕೂಡ ಪತ್ತೆಯಾಗಿದೆ ಎನ್ನುವ ವಿಚಾರ ಈಗಾಗಲೇ ಹೊರಬಿದ್ದಿದೆ. ಈ ಪತ್ರದಲ್ಲಿಯೂ ಕೂಡ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದರೆ, ಇನ್ನೂ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೀವನದಲ್ಲಿ ಎಲ್ಲವೂ ಸರಿಯಾಗಿದೆ. ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು ಎಂದು ಬರೆಯಲಾ ಗಿದೆ ಎನ್ನಲಾಗಿದೆ. ಇದರಿಂದ ಶೋಭಿತಾ ಶಿವಣ್ಣ ಜೀವನದಲ್ಲಿ ಸಮಸ್ಯೆ ಇಲ್ಲ ಎನ್ನುವುದು ಖಚಿತವಾಗಿದೆ.ಎಲ್ಲವೂ ಸರಿ ಇದ್ದ ಮೇಲೆ ಶೋಭಿತಾ ಶಿವಣ್ಣ ಯಾಕೆ ಸಾವಿಗೆ ಶರಣಾದರು ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಇನ್ನೇನಿದ್ದರೂ ಆಪ್ತರಿಂದ ಕೆಲವು ವಿಚಾರಗಳು ಹೊರಬರಬೇಕಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.