50ನೇ ವಯಸ್ಸಿಗೆ ನಟಿ ಸುಧಾರಾಣಿ ಗಭಿ೯ಣಿ? ಇದು ನಿಜಾನಾ ಸುಳ್ಳಾ
Sep 16, 2024, 12:23 IST
|

ಪ್ರಸಿದ್ಧ ಕಲಾವಿದರ ಒಳಗೊಂಡ ಧಾರವಾಹಿ ಶ್ರೀರಸ್ತು ಶುಭಮಸ್ತು ಎಲ್ಲರಿಗೂ ಅಚ್ಚುಮೆಚ್ಚು ಕೆಲ ದಿನದಿಂದ ದಿನಕ್ಕೆ ಶ್ರೀರಸ್ತು ಶುಭಮಸ್ತು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಒಂದು ಕಡೆ ಸಮರ್ಥ್ಗೆ ಅಭಿ ಹಾಗೂ ಅವಿನಾಶ್ ಮನೆಯಲ್ಲಿ ತನ್ನ ಅಮ್ಮನನ್ನು ಬಿಡಲು ಇಷ್ಟವಿಲ್ಲ. ಮತ್ತೊಂದು ಕಡೆ ತುಳಸಿ ಮಾಧವ ಅವರ ಕುಟುಂಬಸ್ಥರನ್ನು ಬಿಟ್ಟು ಎಲ್ಲಿಗೂ ಬರೋದಲ್ಲೂ ಆಗುತ್ತಿಲ್ಲ. ಆದರೆ ಇದರ ಮಧ್ಯೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಒಂದು ರೋಚಕ ಟ್ವಿಸ್ಟ್ ಪಡೆದುಕೊಂಡಿದೆ.
ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು. ಈ ಸೀರಿಯಲ್ ಹಿರಿಯ ಕಲಾವಿದರ ಬಳಗವೇ ಇದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಸೀರಿಯಲ್ ಎಂದರೇ ತಪ್ಪಾಗುವುದಿಲ್ಲ. ಸೀರಿಯಲ್ ಶುರುವಾದ ದಿನದಿಂದ ಇಂದಿನವರೆಗೂ ವೀಕ್ಷಕರು ನೋಡಿಕೊಂಡು ಬಂದಿದ್ದಾರೆ.
ತುಳಸಿ ಹಾಗೂ ಮಾಧವನ ಒಳ್ಳೆತನಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಜೊತೆಗೆ ತುಳಸಿ-ಮಾಧವ ಜೀವನದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು ಬಳಿಕ ಅವರಿಬ್ಬರು ಮದುವೆಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಆದರೆ ಇದೀಗ ತುಳಸಿ ಗರ್ಭಿಣಿ ಎನ್ನುವಂತೆ ಕತೆ ಮಾಡಲಾಗಿದೆ. ಇದಕ್ಕೆ ವೀಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮನೆಯವರ ಜೊತೆ ಕೂತು ನೋಡಬೇಕೆ ಬೇಡವೇ? ಪ್ರಶ್ನೆ ಮೂಡಿದೆ ಎನ್ನುತ್ತಿದ್ದಾರೆ.
ಸುಧಾರಾಣಿಯಂತಹ ಹಿರಿಯ ನಟಿ ಇಂತಹ ಮುಜುಗರದ ಸನ್ನಿವೇಶದಲ್ಲಿ ಅಭಿನಯಿಸಬಾರದಿತ್ತು. ಈ ವಯಸ್ಸಿನಲ್ಲಿ ಗರ್ಭಿಣಿನಾ? ಇದನ್ನು ನೋಡಲು ಮುಜುಗರವಾಗುತ್ತಿದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಹಿರಿಯ ವಯಸ್ಸಿನಲ್ಲಿ ಅಮ್ಮನಾಗುವ ಮುಜುಗರದ ಸಂದರ್ಭ, ಅದನ್ನು ಮನೆಯವರು ಹೇಗೆ ಸ್ವೀಕರಿಸುತ್ತಾರೆ, ಸೀರಿಯಲ್ ನೋಡೋದನ್ನೇ ಬಿಡುತ್ತೇವೆ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ. ಸದ್ಯ ಮುಂದಿನ ಎಪಿಸೋಡ್ಗಳಲ್ಲಿ ಯಾವ ರೀತಿ ತಿರುವನ್ನು ಪಡೆದುಕೊಳ್ಳಲಿದೆ ಅಂತ ಕಾದು ನೋಡಬೇಕಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.