ಸ್ಟಾರ್ ನಟ ಅ ರೆಸ್ಟ್ ಬೆನ್ನಲ್ಲೇ ನಟಿ ತಾರ ಭರ್ಜರಿ ಗೃಹ ಪ್ರವೇಶ

 | 
Js

ಕನ್ನಡ ನಟಿ, ಕರ್ನಾಟಕ ವಿಧಾನಪರಿಷತ್‌ನ ನಾಮನಿರ್ದೇಶಿತ ಸದಸ್ಯ ತಾರಾ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಸ್ಯಾಂಡಲ್‌ವುಡ್ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ತಾರಾ ಅವರು ಕಿರುತೆರೆಯ ಜೊತೆ ಹೊಸ ನಂಟು ಬೆಳೆಸಿಕೊಂಡಿದ್ದಾರೆ. ಹೀಗಾಗಿ ಕಿರುತೆರೆ ತಾರೆಯರು ಇಲ್ಲಿ ಜಾಸ್ತಿ ಕಾಣಿಸಿಕೊಂಡಿದ್ದರು.

ನಟಿ ನೇಹಾ ಗೌಡ, ಅನುಪಮಾ ಗೌಡ, ಮುರುಗಾನಂದ ಹೀಗೆ ಕನ್ನಡ ಧಾರಾವಾಹಿಯಲ್ಲಿ ನಿರೂಪಣೆ ಮಾಡಿದವರು, ನಟಿಸಿದವರು ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ‘ನನ್ನಮ್ಮ ಸೂಪರ್ ಸ್ಟಾರ್’, ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದವರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.ಈ ಶುಭ ಸಮಾರಂಭಕ್ಕೆ ಬಂದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ತಾರಾ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ತಾರಾ ಅವರು 1984ರಲ್ಲಿ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆ ನಂತರ ಅವರು 1986ರಲ್ಲಿ ಕನ್ನಡದ ತುಳಸಿದಳ ಚಿತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಾರಾ ನಟನೆಗೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿದೆ.ಸದ್ಯ ಕನ್ನಡ ಚಿತ್ರರಂಗದಲ್ಲಿ ನಟಿ ತಾರಾ ಅವರಿಗೆ ತಾಯಿ ಪಾತ್ರ ಮಾಡಲು ಭರ್ಜರಿ ಬೇಡಿಕೆ ಇದೆ. ಸ್ಟಾರ್‌ಗಳಿಗೆ ಸಿನಿಮಾದಲ್ಲಿ ಅವರು ಹೆಚ್ಚಾಗಿ ತಾಯಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಇತ್ತೀಚೆಗೆ ಕೋಟಿ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆ ಹಿರಿಯ ನಟಿ ತಾರಾ  ನಟಿಸಿದ್ದರು. ತಾಯಿ ಮಗನ ಕಾಂಬಿನೇಷನ್ ನೋಡಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇದೀಗ ಸ್ವಂತ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿಸಿದ್ದಾರೆ. ನಟಿಯ ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೇ ತಾರಾ ಅವರು ತಮ್ಮ 32ನೇ ವಯಸ್ಸಿಗೆ ಎಂದರೇ 2005ರಲ್ಲಿ ಖ್ಯಾತ ಛಾಯಾಗ್ರಾಹಕ ಎಚ್ ಡಿ ವೇಣು ಅವರೊಂದಿಗೆ ವಿವಾಹವಾದರು. ಇವರಿಗೆ ಮುದ್ದಾದ ಒಬ್ಬ ಮಗನಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.