ನಾನು ತಾಳಿ ಹಾಕಿ ಕೊಳ್ಳಲ್ಲ, ನನ್ನ ಗಂಡ ಓಕೆ ಅಂದಮೇಲೆ ಬೇರೆ ಅವರ ಮಾತು ಲೆಕ್ಕಕ್ಕೆ ಇಲ್ಲ ಎಂದ ಅದಿತಿ ಪ್ರಭುದೇವ
Jul 1, 2025, 10:23 IST
|

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಯಶಸ್ ಅವರೊಂದಿಗೆ ಮದುವೆಯೂ ಆಗಿ ವೈವಾಹಿಕ ಜೀವನ ಹಾಗೂ ಸಿನಿಜೀವನನ್ನು ಜೊತಯಾಗಿ ತೂಗಿಸಿಕೊಂಡು ಹೋಗುತ್ತಿದ್ದಾರೆ. ಅದಿತಿ ಜೋಡಿಗೆ ಮುದ್ದಾದ ಹೆಣ್ಣು ಮಗು ಇದ್ದು, ಇತ್ತೀಚೆಗೆ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಸಖತ್ ಗ್ರ್ಯಾಂಡ್ ಆಗಿ ಮಾಡಿದ್ದರು. ಇನ್ನು ನಟಿ ಅದಿತಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದು ಗೊತ್ತೇ ಇದೆ. ಸಂಪ್ರದಾಯಗಳ ಮೇಲೆ ಅವರಿಗಿರುವ ಗೌರವವೂ ಎಲ್ಲರ ಕಣ್ಣಮುಂದಿದೆ.
ಆದರೆ, ಅದಿತಿ ಮದುವೆಯಾಗಿದ್ರೂ ತಾಳಿ ಹಾಕಲ್ಲ, ಸೀರೆ ಬದಲು ಪ್ಯಾಂಟ್ ಧರಿಸುತ್ತಾರೆ ಎನ್ನುವ ಕಾಮೆಂಟ್‌ಗಳು ಕೇಳಿಬಂದಿವೆಯಂತೆ. ಈ ಬಗ್ಗೆ ನಟಿ ಅದಿತಿ ಪ್ರಭುದೇವ ಅವರೇ ವೇದಿಕೆಯಲ್ಲಿ ಮಾತನಾಡಿದ್ದಾರೆ.ಹೌದು, ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅದಿತಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಅದಿತಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಈ ವೇಳೆ ಜೀವನದಲ್ಲಿ ಜನ ಹೇಗೆ ಇತರರ ಬಗ್ಗೆ ಸದಾ ಮಾತನಾಡುತ್ತಲೇ ಇರುತ್ತಾರೆ ಎಂಬುದರ ಬಗ್ಗೆ ಅದಿತಿ ವಿವರಿಸಿದ್ದಾರೆ. ಈಗ ಜನ ಬೇರೆಯವರ ಆಕ್ಷನ್‌ಗಳ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಾರೆಯೇ ಹೊರತು, ನಾನೇನು ದಬ್ಬಾಕಿದ್ದೀನಿ, ನಾನು ಏನ್ ಮಾಡ್ತಿದ್ದೀನಿ? ನಾನು ಸರಿ ಇದ್ದೀನಾ? ಅನ್ನೋದು ಮುಖ್ಯ ಆಗುತ್ತೆ ಎಂದಿದ್ದಾರೆ.ʼಇನ್ನು ಕಾಮೆಂಟ್ ಮಾಡೋದು ನಮ್ಮ ಮನೆಯಿಂದಲೇ ಶುರುವಾಗುತ್ತೆ. ನಿನ್ ಕೈಯಲ್ಲಿ ಅದು ಆಗಲ್ಲ, ನಿನ್ ಹಣೆಬರಹ ಇಷ್ಟೇ ಅಂತಾರೆ. ಉದಾಹರಣೆಗೆ ನಾವು ಜೀವನದಲ್ಲಿ ಒಂದು ಕಡೆ ಸುಮ್ಮನೆ ಹೀಗೆ ಕೂತಿರುತ್ತೇವೆ. ಜನ ಅದರ ಬಗ್ಗೆಯೂ ಮಾತನಾಡುತ್ತಾರೆ.
ಅವಳು ಯಾಕೆ ಕೂತಿದ್ದಾಳೆ? ಅಲ್ಲಿ ಕೂರಬಾರ್ದಿತ್ತು, ಹೀಗೆ ಕೂರಬೇಕಿತ್ತು, ನಿಂತುಕೊಳ್ಳಬೇಕಿತ್ತು ಎಂದು ಹಲವು ರೀತಿ ಕಾಮೆಂಟ್ ಮಾಡ್ತಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಅದಿತಿ ಯಾಕೆ ಪ್ಯಾಂಟ್ ಹಾಕ್ಕೊಂಡು ಬಂದಿದ್ದಾರೆ? ಸೀರೆ ಧರಿಸಿ ಬರಬೇಕಿತ್ತು. ಅದಿತಿ ಯಾಕೆ ಮದುವೆಯಾಗಿದ್ರೂ ತಾಳಿ ಹಾಕಿಲ್ಲ? ಅವರು ತಾಳಿ ಹಾಕಬೇಕಿತ್ತು? ಎಂದೂ ಕಾಮೆಂಟ್ ಮಾಡ್ತಾರೆ. ನಮ್ಮ ಸಮಯವನ್ನು ಬೇರೆಯವರ ಉದ್ಧಾರಕ್ಕಾಗಿ ವ್ಯರ್ಥ ಮಾಡಬಾರದು. ನಾನು ನನಗೆ ದೇವರು ಕೊಟ್ಟಿರುವ ಸಮಯವನ್ನ, ಈ ಸುಂದರವಾದ ಬದುಕನ್ನ ಹೇಗೆ ಬಳಸಿಕೊಳ್ಳಬೇಕು? ಎಂದು ಯೋಚನೆ ಮಾಡಬೇಕು. ಎಷ್ಟೋ ಜನ್ಮಗಳು ಆದ ಮೇಲೆ ಮನುಷ್ಯ ಜನ್ಮ ಬರೋದು ಅಂತಾರೆ, ಹಾಗಾಗಿ ನಾವು ತುಂಬಾ ಅದೃಷ್ಟವಂತರು. ಇಂತಹ ಜನ್ಮವನ್ನು ಬೇರೆಯವರ ವಿಷಯಗಳಿಗೆ ಯೋಚನೆ ಮಾಡಿ ಯಾಕೆ ಹಾಳು ಮಾಡಿಕೊಳ್ಳಬೇಕು? ಎಂದು ಅದಿತಿ ಪ್ರಭುದೇವ ಉದಾಹರಣೆಯೊಂದಿಗೆ ಮಕ್ಕಳಿಗೆ ನೀತಿ ಪಾಠ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.