ಹೊಸ ವರ್ಷಕ್ಕೆ ಭರ್ಜರಿ ಸಿಹಿಸುದ್ದಿ ಕೊಟ್ಟ ಅದಿತಿ ಪ್ರಭುವೇವ; ಮನೆಗೆ ಬಂದ ಮಹಾಲಕ್ಷ್ಮಿ

 | 
ಹಹ

ಕನ್ನಡ ನಟಿ ಅದಿತಿ ಪ್ರಭುದೇವ ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ನಟಿ ಅದಿತಿ ಪ್ರಭುದೇವ - ಯಶಸ್ ದಂಪತಿ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಹೆಣ್ಣು ಮಗುವಿಗೆ ನಟಿ ಅದಿತಿ ಪ್ರಭುದೇವ ಜನ್ಮ ನೀಡಿದ್ದಾರೆ. ಏಪ್ರಿಲ್ 4 ರಂದು ಹೆಣ್ಣು ಮಗುವನ್ನ ಅದಿತಿ ಪ್ರಭುದೇವ - ಯಶಸ್ ದಂಪತಿ ಬರಮಾಡಿಕೊಂಡಿದ್ದಾರೆ. 

ಈ ಸಂತದ ಸುದ್ದಿಯನ್ನ ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಅದಿತಿ ಪ್ರಭುದೇವ ಹಂಚಿಕೊಂಡಿದ್ದಾರೆ.04.04.2024 ನಮ್ಮನೆ ಮಹಾಲಕ್ಷ್ಮೀ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ಇನ್ಸ್ಟಾಗ್ರಾಮ್‌ನಲ್ಲಿ ಅದಿತಿ ಪ್ರಭುದೇವ ಬರೆದುಕೊಂಡಿದ್ದಾರೆ. 

ನನ್ನ ಜೀವದ ಗೆಳತಿ ಅದಿತಿ. ನಿನ್ನ ಹಾಗೆಯೇ ನಮ್ಮ ಮಗಳು ಎಂದು ಬರೆದುಕೊಂಡಿದ್ದಾರೆ ಅದಿತಿ ಪತಿ ಯಶಸ್.2022ರ ನವೆಂಬರ್ ತಿಂಗಳಿನಲ್ಲಿ ಅದಿತಿ ಪ್ರಭುದೇವ - ಯಶಸ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದೀಗ ಮೊದಲ ಮಗುವನ್ನ ಬರಮಾಡಿಕೊಂಡಿದ್ದಾರೆ.

ಹೆಣ್ಣು ಮಗುವಿಗೆ ಪೋಷಕರಾದ ಅದಿತಿ ಪ್ರಭುದೇವ - ಯಶಸ್ ದಂಪತಿಗೆ ಮಲೈಕಾ ವಸುಪಾಲ್, ಚಂದನ್ ಗೌಡ ಸೇರಿದಂತೆ ಅನೇಕ ತಾರೆಯರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ಅವರ ಸೀಮಂತ ಗ್ರ್ಯಾಂಡ್ ಆಗಿ ನಡೆದಿತ್ತು. ಇದೀಗ ನಗುವಿನ ಒಡತಿ ಮಗುವಿನ ತಾಯಿ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.