ಗಂಡ ಕೋಟಿಯ ಒಡೆಯ ಆಗಿದ್ದರೂ ಕೂಡ ಪತ್ನಿಗೆ ತುಂಬಾ ಸಿಂಪಲ್ ಸೀಮಂತ ಮಾಡಿದ ಅದಿತಿ ಪತಿ

 | 
D
ಸ್ಯಾಂಡಲ್‌ವುಡ್ ಸುಂದರಿ ನಟಿ ಅದಿತಿ ಪ್ರಭುದೇವ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನಟಿಯ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಸೀಮಂತ ಶಾಸ್ತ್ರದಲ್ಲಿ ನಟಿ ಮಿಂಚಿರುವ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಹಸಿರು ಬಣ್ಣದ ಸೀರೆಯುಟ್ಟು ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅದಿತಿ ಮುಖದಲ್ಲಿ ತಾಯಿಯಾಗಿರುವ ಸಂಭ್ರಮ ಎದ್ದು ಕಾಣುತ್ತಿದೆ. 
ಮನೆಗೆ ಬರಲಿರುವ ಹೊಸ ಅತಿಥಿ ಬಗ್ಗೆ ಅದಿತಿ ದಂಪತಿ ಉತ್ಸುಕರಾಗಿದ್ದಾರೆ. ಬೆಂಗಳೂರಿನ ಅದಿತಿ ಅವರ ನಿವಾಸದಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ನಟ ಶರಣ್ ಸೇರಿದಂತೆ ಸ್ಯಾಂಡಲ್‌ವುಡ್ ಹಲವು ನಟ-ನಟಿಯರು ಅದಿತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಹಾರೈಸಿದ್ದಾರೆ. 2022ರ ನವೆಂಬರ್‌ನಲ್ಲಿ ಉದ್ಯಮಿ ಯಶಸ್ ಜೊತೆ ಅದಿತಿ ಮದುವೆಯಾದರು. 
ಅದಿತಿ ಮದುವೆಗೆ ಯಶ್ ಮತ್ತು ರಾಧಿಕಾ ದಂಪತಿ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಕೋರಿದ್ದರು. ಈ ವರ್ಷದ ಆರಂಭದಲ್ಲಿ ನಟಿ ತಾವು ತಾಯಿಯಾಗುತ್ತಿರುವ ಸಿಹಿಸುದ್ದಿ ಹಂಚಿಕೊಂಡಿದ್ದರು. ಗುಂಡ್ಯಾನ ಹೆಂಡತಿ’ ಎಂಬ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಇವರು, ನಾಗಕನ್ನಿಕೆ ಸಿರೀಯಲ್ ನಲ್ಲಿ ಶಿವಾನಿ ಪಾತ್ರ ಮಾಡಿದ್ದರು. 
ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಬಂದ ನಟಿ ಚೆಂದನವನಕ್ಕೆ ಕಾಲಿಟ್ರು.ಧೈರ್ಯಂ, ಬಜಾರ್, ಸಿಂಗ್, ಬ್ರಹ್ಮಚಾರಿ, ಒಂಬತ್ತನೆ ದಿಕ್ಕು, ತೋತಾಪುರಿ, ತ್ರಿಬಲ್ ರೈಡಿಂಗ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಅದಿತಿ ಸದ್ಯ ಅಲೆಕ್ಸಾ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.