ಚಂದನ್ ನಿವೇದಿತಾ ಬಳಿಕ ರಾಜಾ ರಾಣಿ ಶೋ ಗೆ ಬಂದ ಮತ್ತೊಂದು ಜೋಡಿ ಬ್ರೇಕಪ್

 | 
Ff
 ಕೆಲ ದಿನಗಳ ಹಿಂದಷ್ಟೇ ಕನ್ನಡ ಸಂಗೀತ ನಿರ್ದೇಶಕ, ನಟ ಚಂದನ್‌ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ವಿಚ್ಛೇದನ ನಂತರ ರಾಜಾ-ರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ಜೋಡಿ ರಾಜಾ-ರಾಣಿ ರೀಲೋಡೆಡ್‌ಗೆ ಬಂದಾಗಲೇ ಇವರು ಯಾಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದರು. ಯಾಕೆಂದರೆ ಮದುವೆಯಾಗದೇ ರಾಜಾ-ರಾಣಿ ಶೋಗೆ ಬಂದ ಮೊದಲ ಜೋಡಿ ಇವರಾಗಿದ್ದರು.
ಹೌದು ಈ ಜೋಡಿ ಮತ್ಯಾರು ಅಲ್ಲ ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್‌​. ಉದ್ಯಮಿಯಾಗಿದ್ದ ಜಯಶ್ರೀ ಆರಾಧ್ಯ ಬಿಗ್‌ ಬಾಸ್‌ ಮೂಲಕ ಮುಖ್ಯ ಭೂಮಿಕೆಗೆ ಬಂದಿದ್ದರು. ಬಳಿಕ ಕಿರುತೆರೆಯಲ್ಲಿ ಮಿಂಚುತ್ತಿದ್ದ ಜಯಶ್ರೀ ತಮ್ಮ ಬಾಯ್‌ಫ್ರೆಂಡ್‌ ಸ್ಟೀವನ್‌​ ಅವರನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದರು. ಬಳಿಕ ಇಬ್ಬರು ಒಟ್ಟಾಗಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
ಬಳಿಕ ಈ ಜೋಡಿ ರಾಜಾ-ರಾಣಿ ರೀಲೋಡೆಡ್‌ ಶೋಗೆ ಬಂದಿದ್ದು, ತಾಳಿ ಕಟ್ಟದೇ, ಮದುವೆಯಾಗದೇ ಇಬ್ಬರು ಜೊತೆಯಲ್ಲಿದ್ದೇವೆ. ನಾವಿಬ್ಬರೂ ಗಂಡ ಹೆಂಡತಿ ತರ ಬದುಕುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ರಾಜಾ ರಾಣಿ ಶೋನ ಫ್ಯಾಮಿಲಿ ರೌಂಡ್‌ನಲ್ಲಿ ಎಲ್ಲರ ಸಮ್ಮುಖದಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮಗಳನ್ನು ಮಾಡಲಾಗಿದ್ದು, ಶೋ ಬಳಿಕ ಶೀಘ್ರದಲ್ಲೇ ಮದುವೆಯಾಗುತ್ತೇವೆ ಎಂದು ಸಹ ಈ ಜೋಡಿ ತಿಳಿಸಿದ್ದರು.
ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಆಗಿದ್ದ ಈ ಜೋಡಿ, ಜೊತೆಯಲ್ಲಿ ರೀಲ್ಸ್‌ ಮಾಡುತ್ತಾ ಫೋಟೋ ಶೇರ್‌ ಮಾಡುತ್ತಾ ಕ್ಯೂಟ್‌ ಕಪಲ್‌ ಅಂತಾ ಎನಿಸಿಕೊಂಡಿದ್ದರು. ಆದರೆ ಈ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್‌ ನಡುವೆ ಬ್ರೇಕಪ್ ಆಗಿದ್ದು, ಇಬ್ಬರು ದೂರ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಈ ಇಬ್ಬರು ಸದ್ಯ ಇನ್ಸ್ಟಾಗ್ರಾಮ್‌​ ಖಾತೆಯಲ್ಲಿ ಪರಸ್ಪರ ಅನ್​ ಫಾಲೋ ಮಾಡಿಕೊಂಡಿದ್ದಾರೆ. ಅಲ್ಲದೇ, ಜೊತೆಗಿರುವ ಫೋಟೋಗಳನ್ನು, ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಹಾಗೂ ಇತ್ತೀಚಿಗೆ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರ ಅಭಿಮಾನಿಗಳು ಪ್ರಶ್ನಿಸುತ್ತಿದ್ದು, ಜಯಶ್ರೀ ಅಥವಾ ಸ್ಟೀವನ್‌ ಈ ಬಗ್ಗೆ ಅಧೀಕೃತವಾಗಿ ತಿಳಿಸಿಲ್ಲ. ಸದ್ಯ ಈ ಬಗ್ಗೆ ಈ ಜೋಡಿಯೇ ಸ್ಪಷ್ಟನೆ ನೀಡಬೇಕಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.