ಸ್ಕೂಲ್ ಬಿಟ್ಟ ಬಳಿಕ‌ ರಸ್ತೆ ಬದಿ ಹಣ್ಣುಗಳನ್ನು ‌ಮಾರಿ ತಾಯಿಯನ್ನು ಸಾಕುತ್ತಿರುವ ಬಾಲಕ

 | 
ಪಾ
 ಬದುಕು ತುಂಬಾ ಸರಳ ಅರ್ಥ ಮಾಡಿಕೊಂಡವರಿಗೆ ಬಡತನ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾನಿಲಯವು ಕಲಿಸುವುದಿಲ್ಲ ಎನ್ನುವ ಮಾತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳನ್ನು ನೋಡಿದಾಗ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕನೊಬ್ಬನು ಸಂಜೆ ಶಾಲೆ ಬಿಟ್ಟ ನಂತರ ಬಸ್ ನಿಲ್ದಾಣವೊಂದರಲ್ಲಿ ಹಣ್ಣುಗಳನ್ನು ಮಾರಿ ಬಡತನದಲ್ಲಿಯೆ ತನ್ನ ತಾಯಿಗೆ ಹೆಗಲಾಗಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆಯು ಹರಿದು ಬಂದಿದೆ.
ಹೌದು ಬಡತನ, ಹಸಿವು ಹಾಗೂ ಹೆಗಲ ಮೇಲಿನ ಜವಾಬ್ದಾರಿಗಳು ಸಣ್ಣ ವಯಸ್ಸಿನಲ್ಲಿ ಬದುಕಿನ ಪಾಠ ಹಾಗೂ ಜೀವನವನ್ನು ಹೇಗೆ ನಡೆಸಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ಹೀಗಾಗಿ ಅದೆಷ್ಟೋ ಮಕ್ಕಳು ಕಷ್ಟ ಪಟ್ಟು ಕೆಲಸ ಮಾಡಿ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ತಾವೇ ನೋಡಿಕೊಂಡು ಮನೆಗೂ ಕೂಡ ನೆರವಾಗುತ್ತಿದ್ದಾರೆ. ಇಂತಹ ಅದೆಷ್ಟೋ ಉದಾಹರಣೆಗಳನ್ನು ನಾವು ದಿನನಿತ್ಯ ಬದುಕಿನಲ್ಲಿ ನೋಡುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಬಾಲಕನು ಸಂಜೆ ಶಾಲೆ ಬಿಟ್ಟ ನಂತರ ಬಸ್ ನಿಲ್ದಾಣದಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಾ ತಾಯಿಗೆ ನೆರವಾಗುತ್ತಿದ್ದು, ಈ ವಿಡಿಯೋವೊಂದು ವೈರಲ್ ಆಗುತ್ತಿದೆ.
ಅಷ್ಟಕ್ಕೂ ಈ ವಿಡಿಯೋವನ್ನು Nirupadi k Gomarsi ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ಜೀವನ ಅಂದ್ರೆ ಹಿಂಗೂ ಇರುತ್ತೆ. ಸರ್ಕಾರಿ ಶಾಲೆಯಲ್ಲಿ 4ನೆ ತರಗತಿ ಓದುವ ಆಕಾಶ ದಿನ ನಿತ್ಯ ಶಾಲೆ ಬಿಟ್ಟ ನಂತರ ತನ್ನ ಮನೆಗೆಲಸವನ್ನು ಮುಗಿಸಿ, ಲಿಂಗಸುಗೂರು ತಾಲೂಕಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ಬಂದ ಹಣದಲ್ಲಿ ಬಾಡಿಗೆ ಮನೆಯ ಹಣ ಕಟ್ಟುತ್ತಿದ್ದಾನೆ. ಕೆಲಸ ಮಾಡಿಕೊಂಡು ಇವನ ಅಣ್ಣ, ತಂಗಿ, ಅವ್ವ, ಅಪ್ಪನ ಜೊತೆ ಸುಖವಾಗಿ ಇದ್ದಾನಂತೆ. ಬಡತನದ ಈ ದುಡಿಮೆಗೆ ಎಲ್ಲರೂ ಅಭಿನಂದಿಸಿ ಬರೆದುಕೊಳ್ಳಲಾಗಿದೆ.
ಈ ವಿಡಿಯೋವನ್ನು Nirupadi k Gomarsi ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ಜೀವನ ಅಂದ್ರೆ ಹಿಂಗೂ ಇರುತ್ತೆ. ಸರ್ಕಾರಿ ಶಾಲೆಯಲ್ಲಿ 4ನೆ ತರಗತಿ ಓದುವ ಆಕಾಶ ದಿನ ನಿತ್ಯ ಶಾಲೆ ಬಿಟ್ಟ ನಂತರ ತನ್ನ ಮನೆಗೆಲಸವನ್ನು ಮುಗಿಸಿ, ಲಿಂಗಸುಗೂರು ತಾಲೂಕಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ಬಂದ ಹಣದಲ್ಲಿ ಬಾಡಿಗೆ ಮನೆಯ ಹಣ ಕಟ್ಟುತ್ತಿದ್ದಾನೆ. ಕೆಲಸ ಮಾಡಿಕೊಂಡು ಇವನ ಅಣ್ಣ, ತಂಗಿ, ಅವ್ವ, ಅಪ್ಪನ ಜೊತೆ ಸುಖವಾಗಿ ಇದ್ದಾನಂತೆ. ಬಡತನದ ಈ ದುಡಿಮೆಗೆ ಎಲ್ಲರೂ ಅಭಿನಂದಿಸಿ’ ಬರೆದುಕೊಳ್ಳಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.