ಮೊದಲ ಗಂಡ ಬಿಟ್ಟ ಬಳಿಕ; ಎರಡನೇ ಮದುವೆ ಬಗ್ಗೆ ಬಹು ಹಂಬಲವಿದೆ ಎಂದ ಚೈತ್ರ ವಾಸುದೇವನ್
ನಿರೂಪಕಿಯಾಗಿ, ಇವೆಂಟ್ ಮ್ಯಾನೇಜರ್ ಆಗಿ ಗುರುತಿಸಿಕೊಂಡು, ಬಿಗ್‌ಬಾಸ್ ಸೀಸನ್ 7ರಲ್ಲಿಯೂ ಸ್ಪರ್ಧಿಯಾಗಿದ್ದವರು ಚೈತ್ರಾ ವಾಸುದೇವನ್. ಮೂಲತಃ ಕುಂದಾಪುರದ ಚೈತ್ರಾ, 2017ರಲ್ಲಿಯೇ ಸತ್ಯ ನಾಯ್ಡು ಎಂಬುವವರ ಜತೆಗೆ ಬಾಳ ಬಂಧನಕ್ಕೆ ಅಡಿಯಿಟ್ಟಿದ್ದರು. ಕಷ್ಟಪಟ್ಟುಕೊಂಡೇ ಐದೂವರೆ ವರ್ಷ ಸಂಸಾರ ನಡೆಸಿದರೂ, ಇಬ್ಬರ ನಡುವೆ ಹೊಂದಾಣಿಕೆ ಮೂಡಲಿಲ್ಲ.
ಆದರೆ, 2023ರಲ್ಲಿ ಆ ಮದುವೆ ಡಿವೋರ್ಸ್ ಮೂಲಕ ಇಬ್ಭಾಗವಾಯ್ತು. ಸದ್ಯ ಅಪ್ಪನ ಅಮ್ಮನ ಜತೆಗಿರುವ ಚೈತ್ರಾ, ಆ ಡಿವೋರ್ಸ್ ನೋವು, ಮುಂದಿನ ಪ್ರೀತಿಯ ಹುಡುಕಾಟದ ಬಗ್ಗೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಜತೆಗೆ ಆಡಿದ ಮಾತು ಇಲ್ಲಿದೆ. ಡಿವೋರ್ಸ್ ಅನೌನ್ಸ್ ಮಾಡುವುದಕ್ಕೂ ಮುಂಚೆಯೇ ನಾವು ಬೇರೆ ಬೇರೆಯಾಗಿದ್ದೆವು. ಅಪ್ಪ ಅಮ್ಮನಿಗೂ ಭಯ. ನಾವು ಮಾಡಿರುವುದನ್ನು ಆ ದೇವರು ನೋಡ್ತಿರುತ್ತಾನೆ.
ಕರ್ಮ ಗೊತ್ತಿರುತ್ತದೆ. ಯಾರ್ಯಾರು ಏನೇನು ಕರ್ಮಗಳನ್ನು ಮಾಡಿರುತ್ತಾರೋ, ಅದೆಲ್ಲವೂ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ನೀನು ಒಳ್ಳೆಯವಳೇ ಆಗಿದ್ದರೆ, ನಿನಗೆ ಒಳ್ಳೆಯದೇ ಆಗುತ್ತದೆ. ಯಾರ ಬಗ್ಗೆ ಎಲ್ಲಿಯೂ ಕಂಪ್ಲೇಂಟ್ ಮಾಡಬೇಡ ಎಂದೇ ಅಪ್ಪ ಅಮ್ಮ ಹೇಳಿದ್ದರು. ಅದರಂತೆ, ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರಿಂದ ಡಿವೋರ್ಸ್ ಆಗಿದೆ ಎಂಬ ವಿಚಾರವನ್ನಷ್ಟೇ ಹೇಳಿದೆ.
ಡಿವೋರ್ಸ್ ಬಗ್ಗೆ, ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಎಲ್ಲಿಯೂ ನಾನು ಓಪನ್ ಆಗಿ ಮಾತನಾಡಿಲ್ಲ. ನಮ್ಮ ಜೀವನದಲ್ಲಿ ಯಾರೇ ಬಂದು ಹೋಗ್ತಾರೆ ಅಂದರೂ ಅಲ್ಲೊಂದು ಕಾರಣ ಇದ್ದೇ ಇರುತ್ತದೆ. ಕೆಲವರು ನಿಮಗೆ ಒಳ್ಳೆಯ ಮೆಮೊರಿಯಾಗಿ ಉಳಿತಾರೆ. ಕೆಲವರು ಖುಷಿಕೊಡ್ತಾರೆ, ಇನ್ನು ಕೆಲವರು ಹೀಗೆ ಮಾಡಬಾರ್ದು ಅಂತ ಕೇಳಿಕೊಡ್ತಾರೆ.
ಅದೇ ರೀತಿ ನಮ್ಮ ಬ್ಯಾಚ್‌ನಲ್ಲಿಯೇ ನನ್ನದೇ ಬಹುಬೇಗ ಮದುವೆ ಆಗಿದ್ದು. ಇವಾಗ ಮದುವೆಯಾಗಿ ಎಲ್ಲರಿಗೂ ಮಕ್ಕಳಿದ್ದಾರೆ. ಆದರೆ, ನನ್ನ ಜೀವನದಲ್ಲಿ ಹಾಗಾಗಲಿಲ್ಲ. ಮುಂದಿನ ದಿನಗಳಲ್ಲಿ ಟ್ರೂ ಲವ್ ಹುಡುಕಾಟದಲ್ಲಿದ್ದೇನೆ. ನೋಡೋಣ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.