ಬಹುವರ್ಷಗಳ ಬಳಿಕ ಅಮ್ಮನಿಗೆ ಕೋಟಿ ಬೆಲೆಯ ಗಿಫ್ಟ್ ಕೊಟ್ಟ ಮೇಘನಾ ರಾಜ್;

 | 
Je

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ತಾಯಂದಿರ ದಿನ ಮತ್ತು ಪ್ರಮೀಳಾ ಜೋಶಾಯಿ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿದ್ದಾರೆ. ತಾಯಿಗೆ ಬಿಗ್ ಸರ್ಪ್ರೈಸ್ ಕೊಡಬೇಕು ಎಂದು ಯಾರಿಗೂ ಹೇಳದೆ ಹೋಗಿ ಚಿನ್ನದ ಓಲೆ ಗಿಫ್ಟ್‌ ಕೊಟ್ಟಿದ್ದಾರೆ. ಇದನ್ನು ನೋಡಿ ಪ್ರಮೀಳಾ ಜೋಷಾಯಿ ಕೊಟ್ಟ ರಿಯಾಕ್ಷನ್ ವೈರಲ್ ಆಗಿದೆ. 

ಪ್ರತಿ ದಿನ ಬಳಸುವ ವಸ್ತುವನ್ನು ಗಿಫ್ಟ್‌ ಆಗಿ ನೀಡಬೇಕು ಎಂದು ನಿರ್ಧಾರ ಮಾಡಿದ್ದೀನಿ. ನನ್ನ ತಾಯಿ ಹೆಚ್ಚಿಗೆ ಚಿನ್ನ ಉಂಗುರ ಬಳಸುತ್ತಾರೆ ಅದನ್ನು ಕೊಡಬೇಕು ಇಲ್ಲವಾದರೆ ಚಿನ್ನದ ಓಲೆ ಕೊಡಿಸುವೆ. ಮದರ್ಸ್‌ ಡೇಗೆ ಗಿಫ್ಟ್‌ ಕೊಡುವಾಗ ಹೆಣ್ಣು ಮಕ್ಕಳು ಹೇಗೆ ಲೆಕ್ಕಾ ಮಾಡುತ್ತಾರೆ ಅಂದ್ರೆ ಅಮ್ಮನಿಗೆ ಅದು ಕೊಟ್ಟರೆ ನಾವೂ ಬಳಸಬಹುದು ಅನ್ನೋ ಮಲ್ಟಿಪರ್ಪಸ್‌ ಆಲೋಚನೆಯಲ್ಲಿ ಕೊಡಿಸುತ್ತಿರುವೆ ಎಂದು ವಿಡಿಯೋದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ.

ನಾನು ಏನೇ ತಂದುಕೊಟ್ಟರೂ exchange ಮಾಡಲು ಮೊದಲು ರೆಡಿಯಾಗಿ ಇರುತ್ತಾರೆ. ನಾನು ಗೋಲ್ಡ್‌ ಶಾಪಿಂಗ್ ಮಾಡಲು ಬಂದಿರುವ ಐಡಿಯಾನೇ ಇಲ್ಲ ಎಂದು ಮೇಘನಾ ರಾಜ್‌ ತಮ್ಮ ಬ್ಯಾಗಿನಲ್ಲಿ ಇರುವ ಓಲೆಯನ್ನು ತಾಯಿಗ ನೀಡಿದ್ದಾರೆ. ಬಾಕ್ಸ್‌ ನೋಡಿ ಗೆಸ್‌ ಮಾಡಲು ಶುರು ಮಾಡುವ ಪ್ರಮೀಳಾ ಜೋಷಾಯಿ ಇದು ಲಿಪ್‌ಸ್ಟಿಕ್‌ ಇದು ರಿಂಗ್ ಇದು ಕಾಲಿ ಡಬ್ಬ ಎಂದು ಗೆಸ್‌ ಮಾಡುತ್ತಾರೆ. ಆಮೇಲೆ ಚಿನ್ನದ ಅಂಗಡಿ ಹೆಸರು ಓದಿ ಮೌನಿಯಾಗಿ ಬಿಡುತ್ತಾರೆ.

ನಿಜವಾಗಲೂ ಖುಷಿಯಾಗುತ್ತಿದೆ. ನಿಜಕ್ಕೂ ನಿರೀಕ್ಷೆ ಇರಲಿಲ್ಲ. ನಿಜ ಖುಷಿ ಆಗುತ್ತಿದೆ ನನ್ನ ಮಗಳು ನನಗೆ ಗಿಫ್ಟ್‌ ಕೊಟ್ಟಿರುವುದಕ್ಕೆ. ನಾನೇ ಆಕೆಗೆ ಏನೂ ಗಿಫ್ಟ್‌ ಕೊಟ್ಟಿಲ್ಲ ಈ ವರ್ಷ. ಪ್ರತಿ ದಿನ ಫಿಲ್ಮಂ ಚೇಂಬರ್‌ಗೆ ಧರಿಸಿ ಹೋಗುವೆ. ಓಲೆಯಲ್ಲಿ ವೈಟ್‌ ಸ್ಟೋನ್ ಇರುವ ಕಾರಣ ಇಷ್ಟವಾಗುತ್ತದೆ' ಎಂದು ಭಾವುಕರಾಗಿದ್ದಾರೆ ಪ್ರಮೀಳಾ ಜೋಷಾಯಿ ಮಗಳನ್ನು ಬಿಗಿಯಾಗಿ ತಬ್ಬಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.