ಪ್ರಜ್ವಲ್ ರೇವಣ್ಣ ಬೆನ್ನಲ್ಲೇ ಮತ್ತೊಂದು ರಾಜಕಾರಣಿಯ ದೊನ್ನೆ ಏಟಿನ ಸದ್ದು

 | 
Hj
ರಾಜಕಾರಣಿಗಳ ಸರಸ ಸಲ್ಲಾಪದ ಕರ್ಮಕಾಂಡಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತೆಯೇ ಇದೀಗ ಮತ್ತೊಬ್ಬ ರಾಜಕಾರಣಿಯ ಸೀಕ್ರೆಟ್ ವಿಡಿಯೋ ಲೀಕ್ ಆಗಿದೆ. ಹೌದು ಪ್ರಸಿದ್ಧ ರಾಜಕಾರಣಿಯೊಬ್ಬರ ರಾಸಲೀಲೆಯ ವೀಡಿಯೋ ಒಂದು ಸೋರಿಕೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದನ್ನು ನೋಡಿದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಅಸಲಿಗೆ ವಿಡಿಯೋದಲ್ಲಿರುವ ಆ ರಾಜಕೀಯ ನಾಯಕ ಯಾರು..? ಬನ್ನಿ ನೋಡೋಣ..
ಕಳೆದ ಕೆಲವು ದಿನಗಳ ಹಿಂದೆ ಕಿರಣ್ ರಾಯಲ್ ಬೆದರಿಕೆ ಹಾಕಿ ತಮ್ಮಿಂದ 1 ಕೋಟಿ ರೂ.ಗಿಂತ ಹೆಚ್ಚು ನಗದು ಮತ್ತು 25 ಪವನ್ ಚಿನ್ನವನ್ನು ದೋಚಿ ಆರ್ಥಿಕ ತೊಂದರೆಗೆ ಸಿಲುಕಿಸಿದ್ದಾರೆ.. ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಲಕ್ಷ್ಮಿ ಎಂಬ ಮಹಿಳೆ ವಿಡಿಯೋ ರಿಲೀಸ್‌ ಮಾಡಿದ್ದಳು. ಇದರ ನಡುವೆ ಇದೀಗ ಮತ್ತೊಂದು ವೀಡಿಯೊ ಬೆಳಕಿಗೆ ಬಂದಿದೆ.
ಹೌದು ತಿರುಪತಿ ಜನಸೇನಾ ಪಕ್ಷದ ಉಸ್ತುವಾರಿ ಕಿರಣ್ ರಾಯಲ್ ಅವದ್ದು ಎನ್ನಲಾದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.ಜನಸೇನಾ ಉಸ್ತುವಾರಿ ಕಿರಣ್ ರಾಯಲ್ ಮಹಿಳೆಯ ಜೊತೆ ನಿಕಟವಾಗಿರುವ ವಿಡಿಯೋ ವೈರಲ್‌ ಆಗಿದೆ. ಜೊತೆಗೆ ಮಹಿಳೆಗೆ ಮೋಸ ಮಾಡಿದ ಕಿರಣ್ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯ ಕೂಡ ಕೇಳಿ ಬರುತ್ತಿವೆ. ಅಲ್ಲದೆ, ಈ ಬಗ್ಗೆ ಪವನ್ ಕಲ್ಯಾಣ್ ಏಕೆ ಮಾತನಾಡುತ್ತಿಲ್ಲ ಅಂತ ಮಹಿಳಾ ಸಂಘಟನೆಗಳು ಪ್ರಶ್ನೆ ಮಾಡಿವೆ.