ವಿಜಯ್ ರಾಘವೇಂದ್ರ ಪತ್ನಿ ಸಾ ವಿನ ಬಳಿಕ ಮನೆಗೆ ಅಡುಗೆ ಮಾಡಲು ಯಾರು ಬ ರುತ್ತಾರೆ ಗೊ.ತ್ತಾ

 | 
B

ಅತಿ ಪ್ರೀತಿ ಪಾತ್ರರನ್ನು ಕಳೆದುಕೊಂಡ ಮೇಲೆ ಬದುಕೇ ಬೇಡ ಎನ್ನಿಸುತ್ತದೆ. ಆದರೆ ಸಾಯಲು ಸಾಧ್ಯವಿಲ್ಲ ಹಾಗಾಗಿ ಬದುಕಲೇ ಬೇಕು.ಕೆಲ ದಿನಗಳ ಹಿಂದಷ್ಟೇ ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡ ನಟ ವಿಜಯ್ ರಾಘವೇಂದ್ರ ಅವರು ಪತ್ನಿ ಇಲ್ಲ ಜೀವನವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದೇನೆ, ದುಃಖ ಸಮಯದಲ್ಲಿ ಕನ್ನಡಿಗರು ನನಗೆ ಆಸರೆಯಾಗಿದ್ದಕ್ಕೆ ಧನ್ಯವಾದ ಅಂತ ಹೇಳಿದ್ದಾರೆ.

ಕನ್ನಡ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ವಿಜಯ್ ರಾಘವೇಂದ್ರ ಅವರು, ಆತ್ಮೀಯರನ್ನು ದೂರ ಮಾಡಿಕೊಳ್ಳುವ ಅನುಭವ ಯಾರಿಗೂ ಆಗೋದು ಬೇಡ. ಸಾಕಷ್ಟು ಕನಸು ಕಟ್ಟಿಕೊಂಡಿರುತ್ತೇವೆ, ನಿರೀಕ್ಷೆಯನ್ನು ಮೀರಿ ಆಸೆ ಇಟ್ಟುಕೊಂಡಾಗ ನೋವು ಕಡಿಮೆ ಆಗುತ್ತೆ. ಆಶಯ ಮೀರಿ ನಿರೀಕ್ಷೆ ಇಟ್ಟುಕೊಂಡಾಗ ನೋವು ಜಾಸ್ತಿ ಆಗುತ್ತೆ. ಅದನ್ನ ಬಹಳ ಗಟ್ಟಿಯಾಗಿ ಜೀವನದಲ್ಲಿ ರೂಢಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

ಬೆಳಗ್ಗೆ ಎದ್ದ ಕ್ಷಣದಿಂದ ಹಿಡಿದು ಮಲಗುವವರೆಗೂ ಒಂದು ಸ್ಪರ್ಕ್​ ಇರುತ್ತೆ. ಒಂದು ನಗು, ಆತುರ, ಖುಷಿ ಇರುತ್ತಿತ್ತು. ಮನೆಗೆ ಬಂದಾಗ ನಮ್ಮೊಂದಿಗೆ ಇರುವವರಿಗಾಗಿ ಕಾಯೋದು ಸದಾ ಎಚ್ಚರಿಕೆ ನೀಡ್ತಾ ಇರುತ್ತೆ. ಕೆಲಸ ಬೇಗ ಮುಗಿಸಿ ಮನೆಗೆ ಬರೋ ಆತುರ ಇರುತ್ತೆ. ಈಗ ಅದು ಇಲ್ಲ ಅನ್ನೋದು ಬಹಳ ಕಷ್ಟ ಆಗುತ್ತೆ ಅಂತ ವಿಜಯ್ ರಾಘವೇಂದ್ರ ಹೇಳಿದರು.

16 ವರ್ಷದ ಹಿಂದೆ ನನ್ನ ಬದುಕನ್ನು ನೋಡ್ತಿದ್ದ ರೀತಿ ಬೇರೆ. ಇತ್ತೀಚೆಗೆ ಅಂದರೇ ಒಂದೂವರೆ ವರ್ಷದ ಹಿಂದಿನಿಂದ ನಾನು ನೋಡ್ತಿದ್ದ ರೀತಿ ಸ್ಪಂದನಾ ಅವರಿಂದ ಬದಲಾಯ್ತು. ಇದು ಆ ರೀತಿ ಅಲ್ಲ ಅಂತ ನನ್ನನ್ನು ಬೇರೆ ಏನಕ್ಕೋ ತಯಾರಿ ಮಾಡ್ತಿದ್ರು, ಈಗ ನಾನು ಆ ನೆನಪುಗಳನ್ನು ಮುಂದೇ ತೆಗೆದುಕೊಂಡು ಹೋಗಬೇಕು ಎಂದು ಚಿನ್ನಾರಿ ಮುತ್ತಾ ಹೇಳಿದ್ದಾರೆ.

ನಾನು ಎಲ್ಲರ ಮುಂದೇ ನಗುವಂತೆ ಇರಬಹುದು, ಆದರೆ ಮಗನ ಎದುರು ಆ ರೀತಿ ಇರೋಕೆ ಆಗಲ್ಲ. ಸ್ಪಂದನಾ ತರ ಮಗ ನನ್ನನ್ನು ನೋಡ್ತಾ ಇರ್ತಾನೆ, ಅವನ ಎದುರು ನಾಟಕ ಮಾಡೋಕೆ ನನ್ನಿಂದ ಆಗಲ್ಲ. ಒಬ್ಬನೇ ಇದ್ದಾಗ ಅತ್ತು ಬಿಡುತ್ತೇನೆ. ಆದರೆ ಮಗನಿಗೆ ಅಮ್ಮ ಇಲ್ಲದಿರೋದು ಬಹಳ ಕಷ್ಟ ಆಗ್ತಿದೆ. 

ಸ್ಕೂಲ್ ಇಂದ ಬಂದ ಕೂಡಲೇ ಅವನಿಗಾಗಿ ಕಾಯುತ್ತಿದ್ದವರು ಇಲ್ಲ. ಆ ಎಂಪ್ಟಿನೆಸ್​ನ್ನು ನಾವು ತುಂಬಬೇಕಿದೆ ಎಂದಿದ್ದಾರೆ. ಅಡುಗೆ ಅಮ್ಮ ಇಲ್ಲವೇ ಅತ್ತಿಗೆ ಬಂದು ಮಾಡಿಟ್ಟು ಹೋಗುತ್ತಾರೆ. ಬದುಕು ಹೀಗೆ ಸಾಗುತ್ತಿದೆ. ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.