ಜಗತ್ತಿನಲ್ಲಿ ಯಾರು ಮಾಡದ ಸಾಹಸಕ್ಕೆ ಮುಂದಾದ ಇಸ್ರೋ, ಚಂದ್ರನ ನಂತರ ಭಾರತಕ್ಕೆ ಟಾಗೆ೯ಟ್ ಯಾರು ಗೊತ್ತಾ

 | 
ಸಿ

 ಸೂರ್ಯನಿಗೆ ಕೋಟಿ ಕೋಟಿ ಪ್ರಣಾಮಗಳನ್ನು ಹಾಕಿದ್ದೇವೆ. ರವಿ, ಭಾಸ್ಕರ, ಭಾನು... ಹೀಗೆ ಅದೇ ಸೂರ್ಯನ ಚೆಂದದ ಹೆಸರನ್ನೇ ಮಕ್ಕಳಿಗೂ ಇಟ್ಟು ಖುಷಿಪಟ್ಟಿದ್ದೇವೆ. ಸೂರ್ಯನೆಂದರೆ ಶಕ್ತಿ. ಆ ಕಾರಣಕ್ಕಾಗಿ ಸೌರವಿದ್ಯುತ್‌ ತಯಾರಿಸಿದ್ದೇವೆ. ಫ್ಯಾಕ್ಟರಿಗಳಿಂದ ಹೊರಬರುವ ಕೆಲವು ಉತ್ಪನ್ನಗಳಿಗೂ 'ಸನ್‌' ಹೆಸರನ್ನೇ ಇಟ್ಟು ಬ್ರ್ಯಾಂಡ್‌ ಮಾಡಿಕೊಂಡಿದ್ದೇವೆ.ಸ್ತೋತ್ರ-ಮಂತ್ರಗಳನ್ನು ರಾಗ-ಭಾವಗಳಿಗೆ ಪೋಣಿಸಿದ್ದೇವೆ. 'ರವಿ ವದನವೇ ಶಿವ ಸದನವೋ...' ಎಂಬ ಕವಿಪುಂಗವರ ಪುಳಕವೂ ಇದೇ ಸೂರ್ಯನೊಂದಿಗೆ ನಂಟು ಬೆಸೆದಿದೆ. 

ಆಗೊಮ್ಮೆ ಈಗೊಮ್ಮೆ ಗ್ರಹಣ ಆದಾಗಲೆಲ್ಲ ನಮ್ಮ ನಂಬಿಕೆಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದ್ದೇವೆ. ಜಗವೆಲ್ಲ ತೊಯ್ದ ಅದೇ ಸೂರ್ಯ ಈಗ ನಮ್ಮ ಇಸ್ರೊ ವಿಜ್ಞಾನಿಗಳ ಕಣ್ಣಿಗೆ ಸಂಶೋಧನಾ ವಸ್ತು. ಚಂದಿರನ ಚುಂಬನಕ್ಕೆ ಇಸ್ರೊ ನೌಕೆ ದಿನಗಣನೆ ಎಣಿಸುತ್ತಿರುವ ನಡುವೆಯೇ, ಭಾಸ್ಕರನ ಸನಿಹಕ್ಕೆ ತೆರಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭರದಿಂದ ಸಿದ್ಧತೆ ನಡೆಸಿದೆ.

ಇದೀಗ ಚಂದ್ರನ ಮಡಿಲಲ್ಲಿ ನಮ್ಮ ನೌಕೆ ಯಶಸ್ವಿಯಾಗಿ ಕಾಲಿಟ್ಟಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ಆದಿತ್ಯ ಎಲ್ 1' ಯೋಜನೆಯ ಉಡಾವಣೆಗೆ ಇಸ್ರೊ ಮುಂದಾಗಿದೆ. ಇದು ಭಾರತದ ಪ್ರಪ್ರಥಮ ಸೂರ್ಯ ಅಧ್ಯಯನ ಯೋಜನೆ ಎನ್ನುವುದು ಇನ್ನೊಂದು ಹಿರಿಮೆ.

ಇಸ್ರೊ ಆದಿತ್ಯ ಎಲ್ 1 ಯೋಜನೆಯಲ್ಲಿ'ಕರೊನಾಗ್ರಫಿ ಸ್ಯಾಟಲೈಟ್‌' ಎಂಬ ವಿಶೇಷ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಈ ಉಪಗ್ರಹ ವಿಜ್ಞಾನಿಗಳಿಗೆ ಸೂರ್ಯ ಮತ್ತು 'ಕರೊನಾ' ಎಂದು ಕರೆಯಲಾಗುವ ಭಾಸ್ಕರನ ಹೊರ ವಾತಾವರಣವನ್ನು ಅಧ್ಯಯನ ನಡೆಸಿ, ಸೂರ್ಯನ ವರ್ತನೆ ಮತ್ತು ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಲಿದೆ.

ಈ ಉಡಾವಣೆಗೆ ಇಸ್ರೊ ತನ್ನ ವಿಶ್ವಾಸಾರ್ಹ ರಾಕೆಟ್‌ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (ಪಿಎಸ್‌ಎಲ್‌ವಿ) ಬಳಸಿಕೊಳ್ಳಲಿದೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.