ಮೂರು ನಾಲ್ಕು ತಿಂಗಳ ಬಳಿಕ‌ ಅರ್ಜುನನ ಲಾರಿ‌ ಜೊತೆ ಶ ವ ಪ್ರತ್ಯಕ್ಷ

 | 
Hu

 ಸರಿಯಾಗಿ 71 ದಿನಗಳ ಹಿಂದೆ. ಅಂದರೆ ಜುಲೈ 16ನೇ ತಾರೀಖು ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಆಗಿತ್ತು. ಈ ಗುಡ್ಡ ಕುಸಿತದಿಂದ 11 ಜನರು ಮಣ್ಣಿನಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಮಳೆ ನಡುವೆ ಕಾರ್ಯಾಚರಣೆ ಶುರು ಮಾಡಿದ ಜಿಲ್ಲಾಡಳಿತ, 11 ಜನರಲ್ಲಿ 8 ಮಂದಿಯ ಶವ ಪತ್ತೆ ಮಾಡಿದ್ರು. ಉಳಿದ ಮೂವರ ಮೃತದೇಹಗಳಿಗಾಗಿ ಸಾಕಷ್ಟು ಹರಸಾಹಸ ಪಟ್ಟರೂ ಪತ್ತೆಯಾಗಿರಲಿಲ್ಲ. 

ಸದ್ಯ, ಇದೀಗ ಬರೋಬ್ಬರಿ 71 ದಿನಗಳ ನಂತರ ಮೂವರಲ್ಲಿ ಒಬ್ಬನಾದ ಅರ್ಜುನ್ ನ ಮೃತದೇಹ ಈಗ ಪತ್ತೆಯಾಗಿದೆ. ಜೊತೆಗೆ ನೀರಿನಡಿ ಸಿಲುಕಿದ್ದ ಲಾರಿಯನ್ನ ಹೊರ ತೆಗೆಯಲಾಗಿದೆ.ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಕೇರಳದ ಕೋಝಿಕ್ಕೋಡ್ ಮೂಲದ ಲಾರಿ ಚಾಲಕ ಅರ್ಜುನ್ ನದಿಯ ಆಳದಲ್ಲಿ ಸಿಲುಕಿಕೊಂಡಿದ್ದರು. ಸುಮಾರು 20 ಅಡಿ ಅಳದಲ್ಲಿ ಲಾರಿ ಇದೆ ಅಂತ ಮುಳುಗು ತಜ್ಞ ಈಶ್ವರ್​ ಮಲ್ಪೆ ಮತ್ತು ಅವರ ತಂಡಕ್ಕೆ ಮಾಹಿತಿ ಸಿಕ್ಕಿತ್ತು. 

ಇದೇ ಜಾಡನ್ನ ಹಿಡಿದು ಮಳೆ ನಡುವೆ ನದಿಯೊಳಗೆ ಮುಳುಗಿ ಎಷ್ಟೇ ಪ್ರಯತ್ನ ಪಟ್ಟರೂ ಈಶ್ವರ್ ಮಲ್ಪೆ ಟೀಂಗೆ ಇವರು ಪತ್ತೆಯಾಗಿರಲಿಲ್ಲ. ಮಳೆ ನಿಲ್ಲಲಿ ನಂತರ ಕಾರ್ಯಾಚರಣೆ ಶುರು ಮಾಡೋಣ ಅಂತ ಜಿಲ್ಲಾಡಳಿತಕ್ಕೆ ಈಶ್ವರ್ ಮಲ್ಪೆ ಸಲಹೆ ಕೊಟ್ಟರು.ಇದಾದ್ಮೇಲೆ 15 ದಿನಗಳ ನಂತರ ಅಂದ್ರೇ ಸಪ್ಟೆಂಬರ್ 2ನೇ ತಾರೀಖಿನಿಂದ ಕಾರ್ಯಾಚರಣೆ ಶುರು ಮಾಡಿದಾಗ ಲಾರಿಯ ಅವಶೇಷಗಳು ನದಿಯೊಳಗೆ ಪತ್ತೆಯಾದ್ವು. ಅದೇ ಸ್ಥಳವನ್ನ ಟಾರ್ಗೆಟ್ ಮಾಡಿದ ಮುಳುಗು ತಜ್ಞರು, ಬರೋಬ್ಬರಿ 71 ದಿನಗಳ ಕಾಲ ಅಂದ್ರೇ ಸಪ್ಟೆಂಬರ್ 25ನೇ ತಾರೀಖು ಲಾರಿ ಹಾಗೂ ಲಾರಿ ಒಳಗಿದ್ದ ಅರ್ಜುನ್ ಅವರ ಮೃತದೇಹವನ್ನ ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಷಿನ್ ಮೂಲಕ ಹೊರ ತೆಗೆಯಲಾಗಿದೆ.

 ಕೇರಳದ ಕೋಯಿಕ್ಕೋಡ್ ಮೂಲದ 30 ವರ್ಷದ ಅರ್ಜುನ್ .ಲಾರಿ ಡ್ರೈವ್ ಮಾಡಿಕೊಂಡು ಟಿಂಬರ್ ಶಿಫ್ಟ್ ಮಾಡ್ತಿದ್ದರು ಆದಿನ ಲಾರಿ ಡ್ರೈವ್ ಮಾಡೋವಾಗ ಶಿರೂರು ಬಳಿ ಲಾರಿ ನಿಲ್ಲಿಸಿದ್ದಾರೆ. ಅರ್ಜುನ್​​ಗೆ ಜುಲೈ 15ನೇ ತಾರೀಖು ಮಧ್ಯರಾತ್ರಿ 2.47ಕ್ಕೆ ಮತ್ತೊಬ್ಬ ಲಾರಿ ಡ್ರೈವರ್ ಕಾಲ್ ಮಾಡಿ ಮಾತನಾಡಿದ್ದ. 3.45ರ ಸುಮಾರಿಗೆ ಇಲ್ಲೆ ನಿದ್ದೆ ಮಾಡಿ ಬೆಳಗ್ಗೆ ಹೊರಡೋಣ ಅಂತ ಶಿರೂರಿನಲ್ಲಿ ಲಾರಿ ನಿಲ್ಲಿಸಿ ಅರ್ಜುನ್ ಮಲಗಿದ್ದಾರೆ. ಆದರೆ ಜುಲೈ 16ರಂದು ಬೆಳಿಗ್ಗೆ ಗುಡ್ಡ ಕುಸಿತಕ್ಕೆ ಲಾರಿ ಜೊತೆಗೆ ಅರ್ಜುನ್​ ಕೂಡ ಮಿಸ್ ಆಗಿದ್ದರು. ವಿಧಿಯಾಟ ಬಲ್ಲವರಾರು ಅನ್ನೋ ಹಾಗೇ ಸದ್ಯ ಇದೀಗ ಅರ್ಜುನ್ ಹಾಗೂ ಲಾರಿಯನ್ನ ನದಿಯಿಂದ ಹೊರತೆಗೆದಿದ್ದಾರೆ. 

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.