ಎರಡು ಮಕ್ಕಳ ಬಳಿಕ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ನಟಿ ಅಮೂಲ್ಯ, ಗಂಡ ಶಾ ಕ್
| Jul 30, 2025, 12:31 IST
ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಪೀಕ್‌ನಲ್ಲಿದ್ದಾಗಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಉದ್ಯಮಿ ಹಾಗೂ ರಾಜಕಾರಣಿ ಜಗದೀಶ್ ಆರ್ ಚಂದ್ರ ಅವರನ್ನ 2017ರಲ್ಲಿ ಅಮೂಲ್ಯ ಮದುವೆಯಾಗಿದ್ದರು.
ಈ ದಂಪತಿಗೆ ಅಥರ್ವ್ ಹಾಗೂ ಆಧವ್ ಎಂಬ ಹೆಸರಿನ ಅವಳಿ ಗಂಡು ಮಕ್ಕಳಿದ್ದಾರೆ. ಮದುವೆಯ ನಂತರ ಕಂಪ್ಲೀಟ್ ಆಗಿ ಚಿತ್ರರಂಗದಿಂದ ದೂರವಿದ್ದ ನಟಿ ಅಮೂಲ್ಯ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ʻಜೀ ಕನ್ನಡʼ ವಾಹಿನಿಯು ʻನಾವು ನಮ್ಮವರುʼ ಎಂಬ ಹೊಸ ರಿಯಾಲಿಟಿ ಶೋನ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಸಜ್ಜಾಗಿದೆ. ವಿಶೇಷ ಅಂತಂದ್ರೆ ಈ ಶೋನ ಜಡ್ಜ್ ಆಗಿ ನಟಿ ಅಮೂಲ್ಯ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು.. ʻನಾವು ನಮ್ಮವರುʼ ರಿಯಾಲಿಟಿ ಶೋನ ಪ್ರೋಮೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದೇ ಶೋನ ಜಡ್ಜ್ ಆಗಿ ನಟಿ ಅಮೂಲ್ಯ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ನಟಿ ಅಮೂಲ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ.