ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ಬಳಿಕ ನಡು ಬೀದಿಯಲ್ಲಿ ರೊಚ್ಚಿಗೆದ್ದ ಪ್ರತಾಪ್ ಸಿಂಹ, ಯಾಕೆ ಏನಾಯಿತು ಗೊ.ತ್ತಾ

 | 
ರೂೀ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಪುತ್ರ, ಶಿಕಾರಿಪುರ ಶಾಸಕ ಬಿವೈ ವಿಜಯೇಂದ್ರ ನೇಮಕವಾಗಿದ್ದಾರೆ. ಬುಧವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಮಕ್ಕೆ ಬಿಜೆಪಿ ಹಲವು ಹಿರಿಯ ನಾಯಕರು ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್​ ಬಣದ ಹಲವು ನಾಯಕರು ಗೈರಾಗಿದ್ದಾರೆ.

ವಿಜಯೇಂದ್ರರ ಪದಗ್ರಹಣ, ಬಿಜೆಪಿಗೆ ಹಿಡಿದ ಗ್ರಹಣ. ಬಿಜೆಪಿಯ ಮುಂದಿನ ಸಾಲಿನ ನಾಯಕರೇ ಪದಗ್ರಹಣ ಸಮಾರಂಭಕ್ಕೆ ಗೈರಾಗಿ ನೂತನ ಅಧ್ಯಕ್ಷರ ವಿರುದ್ಧ ಬಂಡಾಯ ಸಾರಿದ್ದಾರೆ.ಸಮಾರಂಭಕ್ಕೆ ರಾಷ್ಟ್ರೀಯ ನಾಯಕರೂ ಪತ್ತೆ ಇಲ್ಲ, ರಾಜ್ಯದ ನಾಯಕರೂ ಪತ್ತೆ ಇಲ್ಲ. ವಿಜಯೇಂದ್ರ ಬಿಜೆಪಿಯೊಳಗಿನ ಕೆಜೆಪಿಯ ಅಧ್ಯಕ್ಷರೇ ಹೊರತು ಬಿಜೆಪಿಯ ಅಧ್ಯಕ್ಷರಲ್ಲ! ಗೈರಾದವರ ಪಟ್ಟಿ ನೋಡುತ್ತಿದ್ದರೆ ಸಂತೋಷ ಕೂಟದ ಸದಸ್ಯರ ಸಂಖ್ಯೆ ಹೆಚ್ಚುವ ಲಕ್ಷಣವಿದೆ ಎಂದು ಕಾಂಗ್ರೆಸ್ ಹೇಳಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಸಂಸದ ಶಿವಕುಮಾರ ಉದಾಸಿ,ಮಂಗಳಾ ಅಂಗಡಿ,ಸಂಸದ ಪ್ರತಾಪ್ ಸಿಂಹ, ಶ್ರೀನಿವಾಸ್ ಪ್ರಸಾದ್,ಅನಂತ್ ಕುಮಾರ್ ಹೆಗ್ಡೆ,ರಾಜಾ ಅಮರೇಶ್ ನಾಯಕ್,ಸಂಗಣ್ಣ ಕರಡಿ,ರಮೇಶ್ ಜಿಗಜಿಣಗಿ,ಸಂಸದ ಬಿ.ಎನ್. ಬಚ್ಚೇಗೌಡ,ಅರವಿಂದ ಬೆಲ್ಲದ್,ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ಶಾಸಕ ಎಸ್ ಟಿ ಸೋಮಶೇಖರ್,

ಮಾಜಿ ಸಚಿವ ರಮೇಶ್ ಜಾರಕಿಹೊಳಿ,ಶಾಸಕ ರವಿ ಸುಬ್ರಹ್ಮಣ್ಯ,ಮಾಜಿ ಸಚಿವ ಡಾ.ಕೆ ಸುಧಾಕರ್, ಶಿವರಾಮ್ ಹೆಬ್ಬಾರ್,ಎಂ ಟಿ ಬಿ ನಾಗರಾಜ್,ಶಂಕರ್ ಪಾಟೀಲ್ ಮುನೇನಕೊಪ್ಪ ಮೊದಲಾದವರು ಉಪಸ್ಥಿತರಿರಲಿಲ್ಲ. ಹೀಗಾಗಿ ಇದುವರೆಗೆ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಅವಕಾಶ ಕೊಟ್ಟಿಲ್ಲ ಬಿಜೆಪಿ ಪಕ್ಷ. ದಲಿತರಿಗೆ ಜಗನ್ನಾಥ ಭವನದ ಗರ್ಭಗುಡಿಗೆ ಪ್ರವೇಶ ನಿಷೇಧಿಸಲಾಗಿದೆಯೇ ಬಿಜಪಿ ಎಂದು ಪ್ರಶ್ನಿಸಿದೆ. 

ಬಿಜೆಪಿಯಲ್ಲಿ ದಲಿತ, ಹಿಂದುಳಿದ ವರ್ಗದ ರಾಜಕಾರಿಣಿಗಳನ್ನು ಬಳಸಿ ಬೀಸಾಡುವುದು ಪಾರಂಪರಿಕವಾಗಿ ನಡೆದುಬಂದ ಪದ್ಧತಿ ಎಂಬುದನ್ನ ಸ್ವತಃ ಬಿಜೆಪಿಯ ಸಂಸದರೇ ಹೇಳಿದ್ದಾರೆ. ಬಿಜೆಪಿ ದಲಿತ ವಿರೋಧಿ ಎಂಬುದಕ್ಕೆ ಸ್ಪಷ್ಟ ನಿದರ್ಶನವಿದು ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.