ಬೇಗ ಬಂದು ತಿಕ್ಕು ರಜತ ಎಂದ ಐಶ್ವರ್ಯ, ಹೊಸ ವೇದಿಕೆಯಲ್ಲಿ ಏನಿದು ಕರ್ಮಕಾಂಡ
Feb 3, 2025, 22:17 IST
|

ಬಿಗ್ ಬಾಸ್ʼ ಮನೆಯಲ್ಲಿ ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ʼಕೇಡಿ ಜೋಡಿʼ ಎಂಬ ಬಿರುದು ಪಡೆದಿದ್ದಾರೆ. ರಜತ್ ಅವರು ಚೈತ್ರಾಗೆ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡಿದ್ದರು. ಚೈತ್ರಾ ಆಲೋಚನೆಗಳು, ನಡೆ ರಜತ್‌ಗೆ ಇಷ್ಟ ಆಗ್ತಿರಲಿಲ್ಲ. ಹೀಗಾಗಿ ಇವರು ಅವಕಾಶ ಸಿಕ್ಕಿದಾಗೆಲ್ಲ ಚೈತ್ರಾ ಕಾಲೆಳೆಯುತ್ತಿದ್ದರು, ಜಗಳ ಆಡುತ್ತಿದ್ದರು. ಬಾಸ್ ಬಾಸ್ ಅಂತ ಕರೆದು ತಮಗಿಂತ ಮೊದಲೇ ಚೈತ್ರಾರನ್ನು ಅವರು ಹೊರಗಡೆ ಕಳಿಸಿದ್ದರು.
ಇವರಿಬ್ಬರ ಜಗಳ ಅನೇಕರಿಗೆ ಭರ್ಜರಿ ಮನರಂಜನೆ ಬಾಡೂಟ ಕೊಟ್ಟಿತ್ತು. ಈಗ ಈ ಜಗಳ ಮತ್ತೆ ಮುಂದುವರೆಯುವ ಹಾಗೆ ಕಾಣ್ತಿದೆ. ಧನರಾಜ್ ಆಚಾರ್, ಐಶ್ವರ್ಯಾ ಸಿಂಧೋಗಿ, ಐಶ್ವರ್ಯಾ ಸಾಲೀಮಠ, ಸ್ಫೂರ್ತಿ ಗೌಡ, ಚಂದನಾ ಗೌಡ, ನಿವೇದಿತಾ ಗೌಡ, ಕೋಳಿ ರಮ್ಯಾ, ಪ್ರಿಯಾ ಸವದಿ, ಸ್ನೇಹಿತ್ ಗೌಡ, ಸೂರಜ್, ಮಂಜು ಪಾವಗಡ ಮುಂತಾದವರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ.
ಅನುಪಮಾ ಗೌಡ ಅವರು ಚೈತ್ರಾ ಕುಂದಾಪುರ ಕೂಡ ಸ್ಪರ್ಧಿ ಅಂತ ಘೋಷಣೆ ಮಾಡಿದಕೂಡಲೇ ರಜತ್ ಅವರು ಅಯ್ಯೋ ಏನ್ ಟ್ವಿಸ್ಟ್ ಗುರು! ಎಂದು ಹೇಳಿದ್ದಾರೆ. ಆಗ ಅನುಪಮಾ ಗೌಡ ಅವರು ಈಗ ಆಟ ಶುರು ಎಂದು ಹೇಳಿದ್ದಾರೆ.ಈ ಶೋನ ಉದ್ದಕ್ಕೂ ಸ್ಪರ್ಧಿಗಳಿಗೆ ರೋಚಕ ಸವಾಲುಗಳಿರುತ್ತವೆ. ಹುಡುಗ ಹುಡುಗಿಯರು ತಮ್ಮ ಚಾಕಚಕ್ಯತೆ, ಸೃಜನಶೀಲತೆ ಮತ್ತು ಒಟ್ಟಾಗಿ ಆಡುವ ಮನೋಭಾವದಿಂದ ಈ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಗೇಮ್‌ಗಳ ಜೊತೆಗೆ ನೃತ್ಯ ಸೇರಿದಂತೆ ಉಳಿದ ಟಾಸ್ಕುಗಳೂ ಇಲ್ಲಿರುತ್ತವೆ.
ಹಳ್ಳಿ ಸೆಟಪ್, ಕಾಲೇಜ್ ಸೆಟಪ್ ನಂಥ ಮೋಜಿನ ಥೀಮುಗಳೂ ನಿಮ್ಮನ್ನು ಈ ಶೋನಲ್ಲಿ ರಂಜಿಸಲಿದೆ. ಚುರುಕು ಬುದ್ಧಿ ಹಾಗೂ ದೈಹಿಕ ಶಕ್ತಿಗಳೆರಡನ್ನೂ ಒಟ್ಟಿಗೆ ಪರೀಕ್ಷೆಗೊಳಪಡಿಸುವ ಕಾರ್ಯಕ್ರಮವೇ ‘ಬಾಯ್ಸ್ ವರ್ಸಸ್ ಗರ್ಲ್ಸ್’. ಈ ಕಾರ್ಯಕ್ರಮವನ್ನ ಅನುಪಮಾ ಗೌಡ ನಿರೂಪಣೆ ಮಾಡುತ್ತಿದ್ದಾರೆ.
ಇದಾದ ಬಳಿಕ ಧನರಾಜ್ ಆಚಾರ್ ಅವರು ಹನುಮಂತನಿಗೆ ಹಾರ ಹಾಕಿ ಹೊಸ ರಿಯಾಲಿಟಿ ಶೋಗೆ ಸ್ವಾಗತಿಸಿದರು. ಸದ್ಯ ಬಿಗ್ಬಾಸ್ ಮುಗಿಯುತ್ತಿದ್ದಂತೆ ಭವ್ಯಾ ಗೌಡ, ರಜತ್ ಹಾಗೂ ಹನುಮಂತ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.