ಅಭಿಷೇಕ್‌ ಬಚ್ಚನ್.ಗೆ ಕೈಕೊಟ್ಟ ಐಶ್ವರ್ಯ ರೈ, ಮಾಜಿ ಗೆಳೆಯ ಸಲ್ಮಾನ್ ಖಾನ್ ಜೊತೆ ಮರು ಮದುವೆ ಆಗ್ತಾರಾ

 | 
ರ್

ಸದ್ಯ ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. 

ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ ಎಂದು ಬರೆದುಕೊಂಡಿದ್ದಾರೆ.

 ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ.ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗುತ್ತಿದೆ.

ಇಬ್ಬರೂ ಒಟ್ಟಿಗೆ ಒಳಗೆ ಹೋದರೂ ಅವರಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಬಗ್ಗೆ ಸಂಶಯ ಶುರುವಾಗಿದೆ. ಐಶ್ವರ್ಯ ಪತಿಯನ್ನು ನೋಡುತ್ತಿದ್ದಂತೆಯೇ ಕೆಟ್ಟ ರೀತಿಯ ಮುಖ ಮಾಡಿದ್ದು, ವಿಚ್ಛೇದನದ ಸುದ್ದಿಗೆ ಮತ್ತಷ್ಟು ಪುಷ್ಟಿ ಕೊಡುತ್ತಿದೆ. ಆದರೂ ಇವರ ಫ್ಯಾನ್ಸ್‌ ಸಿಕ್ಕಾಪಟ್ಟೆ ಕನ್‌ಫ್ಯೂಷನ್‌ನಲ್ಲಿ ಇದ್ದಾರೆ. 

ಆದರೆ ಕೆಲ ಮೂಲಗಳ ಪ್ರಕಾರ ಐಶ್ವರ್ಯ ರೈ 16 ವರ್ಷದ ದಾಂಪತ್ಯಕ್ಕೆ  ಗುಡ್ ಬೈ ಹೇಳಲು ಹೊರಟಿದ್ದಾರೆ ಎನ್ನಲಾಗುತ್ತಿದೆ.ಐಶ್ವರ್ಯಾ ಮತ್ತು ಅವರ ಅತ್ತೆ ಜಯಾ ಬಚ್ಚನ್ ಕಳೆದ ಕೆಲವು ವರ್ಷಗಳಿಂದ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ  ಶ್ವೇತಾ ಬಚ್ಚನ್ ಜೊತೆಗೂ ಐಶ್ವರ್ಯಾ ಮಾತನಾಡುತ್ತಿಲ್ಲ.  ಶ್ವೇತಾ ಬಚ್ಚನ್ ಗಂಡನಿಂದ ದೂರವಾಗಿ ಇದೀಗ ಅಮಿತಾಬ್ ಬಚ್ಚನ್ ಮನೆಗೆ ಬಂದಿದ್ದು, ಈ ಗಲಾಟೆ ಮತ್ತಷ್ಟು ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.