ಆ ಬಾಲಿವುಡ್ ನ ಟಿ ಗರ್ಭಿಣಿಯಾದಾಗ ಸ್ವತಃ ಅಕ್ಷಯ್ ಕುಮಾರ್ ವಿಮಾನ ರೆಡಿ ಮಾಡಿ ಕೊಟ್ಟಿದ್ದರು;

 | 
Ha

ದಕ್ಷಿಣ ಹಾಗೂ ಬಾಲಿವುಡ್‌ನಲ್ಲಿ ಜನಪ್ರಿಯತೆ ಕಂಡಿದ್ದ ಮಾಜಿ ನಟಿ ಆಸಿನ್ 2016ರಲ್ಲಿ ಮೈಕ್ರೋಮ್ಯಾಕ್ಸ್ ಮಾಲೀಕ, ಉದ್ಯಮಿ ರಾಹುಲ್ ಶರ್ಮಾ ಕೈ ಹಿಡಿದರು. ಇವರಿಬ್ಬರು ಕ್ರಿಶ್ಚಿಯನ್ ಮತ್ತು ಹಿಂದೂ ವಿವಾಹವೆರಡನ್ನೂ ಹೊಂದಿದ್ದರು. ಆಸಿನ್ ಮತ್ತು ರಾಹುಲ್ 2017 ರಲ್ಲಿ ತಮ್ಮ ಮಗಳು ಆರಿನ್‌ಳನ್ನು ಸ್ವಾಗತಿಸಿದರು. ಈ ಸಂದರ್ಭಕ್ಕಾಗಿ ಎದುರು ನೋಡುತ್ತಿದ್ದ ನಟ ಅಕ್ಷಯ್ ಕುಮಾರ್, ಆಸಿನ್ ಮಗುವನ್ನು ನೋಡಲು ವಿಮಾನ ರೆಡಿ ಇಟ್ಟುಕೊಂಡು ಕಾಯುತ್ತಿದ್ದರಂತೆ.

ಹಲವರಿಗೆ ಗೊತ್ತಿಲ್ಲದ ವಿಷಯವೇನೆಂದರೆ ರಾಹುಲ್ ಶರ್ಮಾ ಅಕ್ಷಯ್ ಕುಮಾರ್ ಸ್ನೇಹಿತನಾಗಿದ್ದು, ತನ್ನ ಎರಡು ಚಿತ್ರಗಳ ಸಹನಟಿಯಾದ ಆಸಿನ್‌ರನ್ನು ರಾಹುಲ್‌ಗೆ ಪರಿಚಯಿಸಿದ್ದೇ ಅಕ್ಷಯ್.ನನ್ನ ಮಗಳು ಜನಿಸುವ ಹಂತದಲ್ಲಿದ್ದಾಗ ಮಗು ಹುಟ್ಟಿದ ಕೂಡಲೇ ಹೇಳು ಎಂದು ಅಕ್ಷಯ್ ಹೇಳಿದ್ದ. ಖಂಡಿತಾ ಎಂದಿದ್ದ ನಾನು ಮಗು ಜನಿಸುತ್ತಿದ್ದಂತೇ ಮೊದಲು ಕರೆ ಮಾಡಿದ್ದೆ. ಮಗುವನ್ನು ನೋಡಲು ಬರಲು ವಿಮಾನ ಇಟ್ಟುಕೊಂಡು ಸಜ್ಜಾಗಿದ್ದ ಅಕ್ಷಯ್ ಕೂಡಲೇ ಬಂದ ಎಂದಿದ್ದಾರೆ ಆಸಿನ್ ಪತಿ ರಾಹುಲ್. 

ಅಷ್ಟೇ ಅಲ್ಲ, ಮಗುವನ್ನು ಮೊದಲು ನೋಡಿದ ಬೆರಳೆಣಿಕೆಯ ಕೆಲವೇ ಜನರಲ್ಲಿ ಅವರೂ ಒಬ್ಬರು ಎಂದು ರಾಹುಲ್ ಶಿಖರ್ ಧವನ್ ನಡೆಸುವ ಚಾಟ್ ಶೋ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಇದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ನೆನಪು. ಜೀವನದಲ್ಲಿ ಏನಾದರೂ ದೊಡ್ಡ ಕೆಲಸ ಮಾಡಬೇಕು ಎಂದಾಗ ನೀನು ನನ್ನ ಪಕ್ಕದಲ್ಲಿ ಇದ್ದೀಯ ಎಂದುಕೊಂಡು ಮುಂದೆ ಹೋಗುತ್ತೇನೆ. ನಾನು ನಿನ್ನಿಂದ ಈ ಶಕ್ತಿಯನ್ನು ಪಡೆಯುತ್ತೇನೆ ಎಂದು ಅಕ್ಷಯ್‌ಗೆ ವಿಡಿಯೋ ಮೂಲಕ ಹೇಳಿದ್ದಾರೆ ರಾಹುಲ್.

ಇನ್ನು ಅಕ್ಷಯ್ ಕೂಡಾ ರಾಹುಲ್ ಮತ್ತು ಆಸಿನ್ ಬಾಂಧವ್ಯದ ಬಗ್ಗೆ ಮಾತಾಡಿದ್ದು, ಅವನು ತನ್ನ ಹೆಂಡತಿ, ಮಗುವನ್ನು ಹುಚ್ಚನಂತೆ ಪ್ರೀತಿಸುತ್ತಾನೆ. ಅವನು ಅವಳನ್ನು ದೇವತೆಯಂತೆ ನಡೆಸಿಕೊಳ್ಳುತ್ತಿದ್ದಾನೆ. ನಾವು ಆಳವಾದ ಸ್ನೇಹವನ್ನು ಹಂಚಿಕೊಳ್ಳುತ್ತೇವೆ. ಕೆಲವೊಮ್ಮೆ ನಾವು 2-3 ವಾರಗಳವರೆಗೆ ಮಾತನಾಡುವುದಿಲ್ಲ, ಆದರೆ ನಾವು ಮತ್ತೆ ಜಗಳ ಮಾಡದೆ ಮಾತಿಗೆ ಪ್ರಾರಂಭಿಸುತ್ತೇವೆ ಎಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.