ವಿಕ್ಕಿ ಕೌಶಲ್ ಜೊತೆ ತೋಬಾ ತೋಬಾ ಹಾಡಿಗೆ ಸ್ಟೆಪ್ ಹಾಕಿದ ಕನ್ನಡಿಗ ಅಕುಲ್ ಬಾಲಾಜಿ, ಫಿದಾ ಆದ ನಟಿಯರು
ಬಾಲಿವುಡ್‌ನ ಬ್ಯಾಡ್ ನ್ಯೂಸ್ ಸಿನಿಮಾದ ಒಂದು ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಾಲಿವುಡ್ ಅಷ್ಟೇ ಅಲ್ಲ, ಕನ್ನಡದ ನಟರು ಮತ್ತ ನಟಿಯರು ಈ ಹಾಡಿಗೆ ಕುಣಿದು ಕುಪ್ಪಳ್ಳಿಸುತ್ತಿದ್ದಾರೆ. ಇದೀಗ ಐಫಾ ವೇದಿಕೆಯಲ್ಲಿ ವಿಕ್ಕಿ ಕೌಶಲ್ ಜತೆ ಅಕುಲ್ ಬಾಲಾಜಿ ‘ತೋಬಾ ತೋಬಾ’ ಡ್ಯಾನ್ಸ್ ಮಾಡಿ ಎಲ್ಲರ ಮನ ಗೆದ್ದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಒಬ್ಬ ಹಳ್ಳಿಗಾಡಿನ ಮಹಿಳೆ ಸಕತ್ತಾಗಿಯೇ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದಿದ್ದಳು.ಇದರ ಹುಕ್ ಸ್ಟೆಪ್ ಅಂತೂ ಸೂಪರ್ ಆಗಿಯೇ ಇದೆ. ಮೊನ್ನೆ ರಾಮಾಚಾರಿ ಸೀರಿಯಲ್‌ನ ಹೀರೋ ರಿತ್ವಿಕ್ ಕೃಪಾಕರ್ ಕೂಡ ಇದೇ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸಖತ್ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಕೂಡ ಸ್ಪೆಷಲ್ ಆಗಿಯೇ ಕಾಣಿಸುತ್ತಿದ್ದಾರೆ.
https://youtube.com/shorts/LheOZPLDJxs?si=c4XJL4eFa2CfE8jH
ಇನ್ನು ತಮ್ಮ 16ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದ ಅಕುಲ್ ಬಾಲಾಜಿ ಶ್ರೀ. ಉಷಾ ದಾತಾರ್ ಅವರಿಂದ ಭರತನಾಟ್ಯ ತರಬೇತಿ ಪಡೆದರು. ಆಮೇಲೆ ಮಧು ನಟರಾಜ್ ನೇತೃತ್ವದ ನಾಟ್ಯ ಎಸ್ಟಿಮ್ ಡ್ಯಾನ್ಸ್ ಕಂಪೆನಿ ಗೆ ಸೇರಿಕೊಂಡು ಶ್ರೀ. ಮಯಾ ರಾವ್ ಅವರಿಂದ ಕತಕ್ ನೃತ್ಯ ಕಲಿತರು. ಮಹೇಶ್ ದತ್ತಾಣಿ ಅವರಿಂದ ನಟನಾ ತರಬೇತಿ ಪಡೆದರು. ಹಾಗಾಗಿ ಆಗಾಗ ಕಾರ್ಯಕ್ರಮದ ನಡುವೆ ಹೆಜ್ಜೆ ಹಾಕೋದು ಸಾಮಾನ್ಯ.
ಇದೀಗ 2024ನೇ ಐಫಾ ಅವಾರ್ಡ್ಸ್ ವಿತರಣೆ ಕಾರ್ಯಕ್ರಮ ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯುತ್ತಿದೆ. ಮೂರು ದಿನಗಳ ಕಾಲ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದ್ದು ಬಾಲಿವುಡ್, ತೆಲುಗು, ತಮಿಳು, ಮಲಯಾಳಂ, ಕನ್ನಡ ಚಿತ್ರರಂಗದ ಹಲವಾರು ಮಂದಿ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಕೂಡ ಭಾಗವಹಿಸಿದ್ದರು. ಹಾಗಾಗಿಯೇ ವಿಕ್ಕಿ ಕೌಶಲ ಜೊತೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿ ಹಲವರ ಮುಖದಲ್ಲಿ ಮೆಚ್ಚುಗೆ ಮೂಡಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.