ಆಲಿಯಾ ಭಟ್ ಸಂಸಾರದಲ್ಲೂ ಡಿ ವೋರ್ಸ್; ಬಾಲಿವುಡ್ ನಲ್ಲಿ ಬಿರು ಗಾಳಿ
ಇತ್ತೀಚೆಗಷ್ಟೇ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಮತ್ತು ರಾಧಿಕಾ ಅವರ ಮೂರು ದಿನಗಳ ಮದುವೆ ಅದ್ಧೂರಿಯಾಗಿ ನಡೆಯಿತು. ಈ ಮದುವೆಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್, ರಜನಿಕಾಂತ್ ಸೇರಿದಂತೆ ಭಾರತ ಸಿನಿಮಾ ರಂಗದ ದಿಗ್ಗಜರೇ ಭಾಗಿಯಾಗಿದ್ರು. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳೇ ಹೆಚ್ಚು ಇದ್ದರು.
ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆ ಕೇವಲ ದುಡ್ಡಿನ ವಿಚಾರಕ್ಕಷ್ಟೇ ಸದ್ದು ಮಾಡಲಿಲ್ಲ. ಬದಲಿಗೆ ಹಲವು ವಿಚಾರಗಳಿಗೆ ಸುದ್ದಿಯಾಗಿತ್ತು. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮಗ ಅಭಿಷೇಕ್ ಮತ್ತು ನಟಿ ಐಶ್ವರ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಅನ್ನೋ ವಿಚಾರಕ್ಕೆ ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೇ ಮದುವೆಯಲ್ಲಿ ಮತ್ತೊಂದು ಬಾಲಿವುಡ್ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವಿಚಾರ ವರದಿಯಾಗಿದೆ.
ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಮತ್ತು ಆಲಿಯಾ ಭಟ್. ಇವರು 2022ರ ಏಪ್ರಿಲ್ 14ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ಬಳಿಕ ಅದೇ ವರ್ಷ ನ. 06 ರಂದು ನಟಿ ಆಲಿಯಾ ಭಟ್ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಈ ಸ್ಟಾರ್ ಕಪಲ್ಸ್ ಜೀವನದಲ್ಲಿ ಬಿರುಕು ಮೂಡಿದೆ ಎಂಬ ರೂಮರ್ಸ್ ಇದೆ. ಅನಂತ್ ಅಂಬಾನಿ ಮದುವೆಯಲ್ಲಿ ರಣಬೀರ್ ಆಲಿಯಾ ಮೇಲೆ ಕಿರುಚಾಡಿದ್ರು.
ಆದ್ರೆ, ಆಲಿಯಾ ಭಟ್ ರಣಬೀರ್ ಕಪೂರ್ ಅವರನ್ನು ಸಮಾಧಾನ ಮಾಡಿ ಕೊನೆಗೆ ಕೈ ಹಿಡಿದು ಹೋಗಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಈ ನಡುವೆ ಮದುವೆ ಸಮಾರಂಭದ ಮೊದಲ ದಿನವೇ ಶಾರುಖ್ ಮತ್ತು ಗೌರಿ ನಡುವೆ ಸ್ವಲ್ಪ ಮನಸ್ತಾಪ ಉಂಟಾಗಿತ್ತು.
ಅದಾದ ಬಳಿಕ ರಣಬೀರ್ ಕಪೂರ್ ತನ್ನ ಪತ್ನಿ ಆಲಿಯಾ ಭಟ್ʼಗೆ 'ಸರಿಯಾಗಿ ವರ್ತಿಸುವಂತೆ' ಗದರಿಸಿದ್ದರಂತೆ, ಅದಾದ ಬಳಿಕ ಆಲಿಯಾ ಸಮಾಧಾನ ಮಾಡಿ ಕೈ ಹಿಡಿದು ಕರೆದುಕೊಂಡು ಬಂದಿದ್ದರು ಎಂದು ವರದಿಯಾಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.