ರಿಷಭ್ ಶೆಟ್ಟಿ ನಟನೆ ಮುಂದೆ ಭಾರತದ ಎಲ್ಲಾ ನಟರು ವ್ಯರ್ಥ ಎಂದ ರಾಜಮೌಳಿ, ಕಾಂತಾರ ಅಬ್ಬರಕ್ಕೆ ಸಿನಿ ರಂಗ ತತ್ತರ
ರಿಷಬ್ ಶೆಟ್ಟಿ ಅಭಿನಯದ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ. ವಿಶೇಷವಾಗಿ ತೆಲುಗು ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಈ ಚಿತ್ರಕ್ಕೆ ಅತಿಯಾದ ಪ್ರೀತಿ ವ್ಯಕ್ತವಾಗುತ್ತಿದೆ.
2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರವು ಬ್ಲಾಕ್‌ಬಸ್ಟರ್ ಹಿಟ್ ಆಗಿ ದಾಖಲೆ ಬರೆದಿತ್ತು. ಅದೇ ಶ್ರದ್ಧೆ ಮತ್ತು ಉತ್ಸಾಹದೊಂದಿಗೆ ನಿರ್ಮಿಸಲಾದ ‘ಚಾಪ್ಟರ್ 1’ ಈಗ ತೆಲುಗು ಜನರನ್ನು ಮತ್ತೆ ಮಂತ್ರಮುಗ್ಧರನ್ನಾಗಿಸಿದೆ. ಸಿನಿಮಾ ಬಿಡುಗಡೆಗೆ ಮೊದಲು ಭಾಷಾ ವಿಚಾರದಲ್ಲಿ ಕೆಲವು ವಿವಾದಗಳು ಕೇಳಿಬಂದಿದ್ದರೂ, ಸಿನಿಮಾ ಬಿಡುಗಡೆಯಾದ ಬಳಿಕ ತೆಲುಗು ಪ್ರೇಕ್ಷಕರು ರಿಷಬ್ ಶೆಟ್ಟಿಯ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ.
ಹೈದರಾಬಾದ್‌ನಲ್ಲೇ ಈ ಚಿತ್ರದ ಶೋಗಳು ಹೌಸ್‌ಫುಲ್ ಆಗಿ ಸಾಗುತ್ತಿವೆ. ಶನಿವಾರ ಮತ್ತು ಭಾನುವಾರದ ಶೋಗಳಿಗೂ ಮುಂಗಡ ಬುಕ್ಕಿಂಗ್ ಸದ್ದು ಕೇಳಿಬಂದಿದೆ. ಟಿಕೆಟ್ ದರಗಳು 390 ಮತ್ತು 290 ರೂಪಾಯಿಗಳಷ್ಟಿದ್ದರೂ ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರ 100–175 ರೂಪಾಯಿಗಳ ಟಿಕೆಟ್ ದೊರೆಯುತ್ತಿದ್ದು, ಎಲ್ಲೆಡೆ ಪ್ರೇಕ್ಷಕರ ಹಾರೈಕೆ ಅದೇ ತರಹದಾಗಿದೆ.
ಚೆನ್ನೈಯಲ್ಲಿಯೂ ತಮಿಳು ಆವೃತ್ತಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಬುಕ್‌ಮೈಶೋ ಮಾಹಿತಿಯ ಪ್ರಕಾರ ಎರಡನೇ ದಿನವೂ ಹಲವಾರು ಶೋಗಳು ಮುಂಗಡವಾಗಿ ಬುಕ್ ಆಗಿವೆ. ಕೊಚ್ಚಿಯಲ್ಲೂ ಜನರು ಉತ್ಸಾಹದಿಂದ ಚಿತ್ರ ವೀಕ್ಷಿಸುತ್ತಿದ್ದಾರೆ. ರಿಷಬ್ ಶೆಟ್ಟಿ ಮತ್ತು ಅವರ ತಂಡದ ಶ್ರಮ, ಕಲೆ ಮತ್ತು ಕನ್ನಡದ ಸಂಸ್ಕೃತಿಯ ಮೌಲ್ಯಗಳು ತೆಲುಗು ಸೇರಿದಂತೆ ಎಲ್ಲಾ ಪ್ರೇಕ್ಷಕರ ಹೃದಯ ಗೆದ್ದಿವೆ. ‘ಕಾಂತಾರ: ಚಾಪ್ಟರ್ 1’ ಚಿತ್ರವು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನೆಮಾವಾಗಿವಾಗಿ ಹೊರ ಹೊಮ್ಮಿದೆ.