ದಿನದಿಂದ ದಿನಕ್ಕೆ ದಪ್ಪ ಆಗುತ್ತಿರುವ ಅಂಬಾನಿ ಮಗ; ಮಗನ ಕಷ್ಟ ನೋಡಲಾಗದೆ ಅಪ್ಪನ ಕ.ಣ್ಣೀರು

 | 
Yy

ಭಾರತದ ಖ್ಯಾತ ಉದ್ಯಮಿ, ಏಷ್ಯಾದ ನಂಬರ್ 1 ಶ್ರೀಮಂತ ಮುಖೇಶ್ ಅಂಬಾನಿ ಮನೆಯಲ್ಲೀಗ ಮದುವೆ ಸಂಭ್ರಮ ಜೋರಾಗಿದೆ. ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಶುರುವಾಗಿವೆ. ಮಾರ್ಚ್‌ 1 ರಿಂದ 3ರವರೆಗೆ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಗಳು ನಡೆದಿದ್ದು, ಈ ಸಂದರ್ಭದಲ್ಲಿ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಪುತ್ರನ ಮಾತುಗಳನ್ನು ಕೇಳಿ ಭಾವುಕರಾಗಿದ್ದಾರೆ.

 ಸದ್ಯ ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್​ ಆಗಿದೆ.ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಗಳ ಎರಡನೇ ದಿನವಾದ ಇಂದು ಅನಂತ್ ಅಂಬಾನಿ ಈ ಸುಂದರ ಕ್ಷಣವನ್ನು ತನ್ನ ಹೆತ್ತವರಿಗೆ ಧನ್ಯವಾದ ಹೇಳಲು ಬಯಸಿದರು. ಬಾಲ್ಯದಿಂದಲೂ ಅವರು ಅನುಭವಿಸುತ್ತಿರುವ ಆರೋಗ್ಯ ಸವಾಲುಗಳ ಬಗ್ಗೆ ಮತ್ತು ಅವರ ಪೋಷಕರು ಹೇಗೆ ಅದನ್ನು ನಿಭಾಯಿಸಿದರು ಎಂಬುದರ ಕುರಿತು ಮಾತನಾಡಿದ್ದಾರೆ.

ನನ್ನ ಜೀವನವು ಸಂಪೂರ್ಣ ಗುಲಾಬಿ ಹೂವುಗಳಿಂದ ತುಂಬಿರಲಿಲ್ಲ. ಮುಳ್ಳಿನ ನೋವು ಅನುಭವಿಸಿದ್ದೇನೆ.ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇನೆ, ಆದರೆ ನನ್ನ ತಂದೆ ಮತ್ತು ತಾಯಿ ನಾನು ಆ ನೋವು ಅನುಭವಿಸಲು ಬಿಟ್ಟಿಲ್ಲ. ಅವರು ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅನಂತ್ ಅಂಬಾನಿ ಭಾವುಕ ನುಡಿಗಳನ್ನಾಡಿದ್ದಾರೆ. ದೂರದಲ್ಲಿ ಪುತ್ರನ ಮಾತುಗಳನ್ನು ಕೇಳುತ್ತಿದ್ದ ಮುಕೇಶ್ ಅಂಬಾನಿಯವರು ಕೂಡ ಒಂದು ಕ್ಷಣ ಭಾವುಕರಾಗಿದ್ದಾರೆ.

3 ದಿನಗಳ ಕಾಲ ನಡೆಯಲಿರುವ ಈ ಅದ್ದೂರಿ ಕಾರ್ಯಕ್ರಮಕ್ಕೆ ದೇಶ-ವಿದೇಶಗಳ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಮಾರ್ಕ್‌ ಜುಕರ್‌ಬರ್ಗ್‌, ಸುಂದರ್‌ ಪಿಚೈ, ಬಿಲ್‌ಗೇಟ್ಸ್‌. ಸಚಿನ್‌ ತೆಂಡ್ಕೂಲರ್‌, ಎಂಎಸ್‌ ಧೋನಿ, ಸಲ್ಮಾನ್‌ ಖಾನ್‌ ಸೇರಿದಂತೆ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ರಂಗದ ಗಣ್ಯರು ಭಾಗವಹಿಸಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.