ಅಂಬರೀಶ್ ಪತ್ನಿಗೆ ವಯಸ್ಸೇ ಆಗುತ್ತಿಲ್ಲ; 50 ವರ್ಷ ದಾಟಿದರೂ ಗೊಂಬೆಯಂತಿರುವ ಸುಮಲತಾ

 | 
He

50 ವರ್ಷಗಳಾದರೂ ಈಗಲು ಚಿರ ಯೌವನಯಂತೆ ಕಾಣುವ ನಟಿ ಸುಮಲತಾ ರಾಜಕೀಯ ರಂಗದಲ್ಲಿ ಕೂಡಾ ಗುರುತಿಸಿ ಕೊಂಡಿದ್ದಾರೆ. ಹೌದು ಇವರು 1963ರ ಆಗಸ್ಟ್ 27ರಂದು  ಚೆನ್ನೈನಲ್ಲಿ ಜನಿಸಿದರು. ಮುಂಬೈನಲ್ಲಿಯೇ ಹೆಚ್ಚು ವರ್ಷ ನೆಲೆಸಿದ್ದರಿಂದ ಅಲ್ಲಿಯೇ ಹೆಚ್ಚು ಕಾಲ ಕಳೆದಿದ್ದಾರೆ. ಇದಲ್ಲದೇ  ಆಂಧ್ರಪ್ರದೇಶದಲ್ಲಿಯೂ ಬಹು ವರ್ಷ ನೆಲೆಸಿದ್ದಾರೆ. 

ಕೆಲವೇ ಜನರಿಗೆ ತಿಳಿದಿರುವಂತೆ ಸುಮಲತಾ ಅವರು  ತಮ್ಮ 15ನೇ ವಯಸ್ಸಿನಲ್ಲಿಯೇ ಆಂಧ್ರಪ್ರದೇಶ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದವರು. ಇದಾದ ಬಳಿಕ ಅವರಿಗೆ ಚಿತ್ರರಂಗದಲ್ಲಿ ಅವಕಾಶ ಹುಡುಕಿ ಬಂದವು.  ತಮಿಳು ಮತ್ತು ತೆಲುಗು ಚಿತ್ರರಂಗಗಳಿಗೆ ಪದಾರ್ಪಣೆ ಮಾಡಿದರು.  ಸ್ಯಾಂಡಲ್​ವುಡ್​​ ನಟಿಯಾಗಿ ಗುರುತಿಸಿಕೊಂಡದ್ದು  ಡಾ.ರಾಜ್‌ಕುಮಾರ್ ಅಭಿನಯದ ರವಿಚಂದ್ರ ಚಿತ್ರದ ಮೂಲಕ.

ಇದಾದ ಬಳಿಕ  ಆಹುತಿ, ಅವತಾರ ಪುರುಷ, ತಾಯಿ ಕನಸು, ಕರ್ಣ, ಕಥಾನಾಯಕ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.  1991ರ ಡಿಸೆಂಬರ್ 8ರಂದು ಅಂಬರೀಶ್ ಜೊತೆ ಇವರ ವಿವಾಹವಾಯಿತು. ಎಲ್ಲರಿಗೂ ತಿಳಿದಿರುವಂತೆ 2018ರ ನವೆಂಬರ್ 24ರಂದು ಅಂಬರೀಶ್​ ಅವರು ನಿಧನರಾದರು. ಇದಾದ ಬಳಿಕ ಅಂಬರೀಶ್​ ಅವರ ಫ್ಯಾನ್ಸ್​  ಒತ್ತಾಯದ ಮೇರೆಗೆ ಸುಮಲತಾ 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು. 

ಇವರು ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರ ಒಟ್ಟಾರೆ ಜೀವನದ ಸಾಧನೆಗೆ ಇದೀಗ ಗೌರವ ಡಾಕ್ಟರೇಟ್​ ಪುರಸ್ಕಾರ ದೊರೆತಿದೆ. ಅಷ್ಟೇ ಅಲ್ಲದೆ ಹಲವಾರು ಸಮಾಜ ಸೇವೆ ಕಾರ್ಯಗಳನ್ನು ಕೂಡಾ ಇವರು ಮಾಡಿದ್ದಾರೆ. ಉತ್ತಮ ನಟಿ ಎಂದೇ ಗುರುತಿಸಿಕೊಂಡಿದ್ದ ಇವರು ರಾಜಕೀಯದಿಂದಾಗಿ ಸಿನೆಮಾ ಕ್ಷೇತ್ರದಿಂದ ಕೊಂಚ ಹಿಂದೆ ಸರಿದಿರುವುದು ಆಭಿಮಾನಿಗಳಿಗೆ ಕೊಂಚ ಬೇಸರ ತಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.