ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಹೃದ,ಯಾಘಾತ, ಆಸ್ಪತ್ರೆಗೆ ಓಡೋಡಿ ಬಂದ ಸೊಸೆ ಐಶ್ವರ್ಯಾ
ಕೆಲವೇ ಗಂಟೆಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅಮಿತಾಭ್ ಬಚ್ಚನ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ನಿನ್ನೆ ನಟ ಅಮಿತಾಭ್ ಬಚ್ಚನ್ ಅಡ್ಮಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ನಟ ಅಮಿತಾಭ್ ಬಚ್ಚನ್ ಅವರಿಗೆ ಈಗ 81 ವರ್ಷ ವಯಸ್ಸು.
ವರದಿಗಳ ಪ್ರಕಾರ, ನಟ ಅಮಿತಾಭ್ ಬಚ್ಚನ್ ಅವರ ಕಾಲಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆ. ಕಾಲಿನಲ್ಲಿ ಕ್ಲಾಟ್ ಆಗಿದ್ರಿಂದ ಆಂಜಿಯೋಪ್ಲ್ಯಾಸ್ಟಿ ನೆರವೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ನಟ ಅಮಿತಾಭ್ ಬಚ್ಚನ್ ಕುಟುಂಬಸ್ಥರಿಂದಾಗಲಿ, ಆಸ್ಪತ್ರೆ ಕಡೆಯಿಂದಾಗಲಿ ಅಧಿಕೃತ ಮಾಹಿತಿ ಲಭಿಸಿಲ್ಲ.
ಕೆಲವೇ ಗಂಟೆಗಳ ಹಿಂದೆಯಷ್ಟೇ.. ಅಂದ್ರೆ ಮಧ್ಯಾಹ್ನ 12:02ರ ಸುಮಾರಿಗೆ ಸೋಷಿಯಲ್ ಮೀಡಿಯಾದಲ್ಲಿ ನಟ ಅಮಿತಾಭ್ ಬಚ್ಚನ್, ‘’ಕೃತಜ್ಞತೆಯಿಂದ ಎಂದೆಂದಿಗೂ’’ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಜೊತೆಗೆ ಐಎಸ್‌ಪಿಎಲ್‌ನ ಮುಂಬೈ ತಂಡಕ್ಕೂ ಶುಭಕೋರಿ ನಟ ಅಮಿತಾಭ್ ಬಚ್ಚನ್ ಪೋಸ್ಟ್ ಹಾಕಿದ್ದರು. ಇದಾದ ಬಳಿಕ ನಟ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ.
ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ಗೆ ವಯೋಸಹಜ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಈ ವರ್ಷದ ಆರಂಭದಲ್ಲಿ ಅಮಿತಾಭ್ ಬಚ್ಚನ್ ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2020ರಲ್ಲಿ ಕೋವಿಡ್-19 ವಿರುದ್ಧ ಹೋರಾಡಿ ಸುಮಾರು ಒಂದು ತಿಂಗಳ ಕಾಲ ನಟ ಅಮಿತಾಭ್ ಬಚ್ಚನ್ ಆಸ್ಪತ್ರೆಯಲ್ಲಿದ್ದರು. 2022ರಲ್ಲಿ ಮತ್ತೆ ನಟ ಅಮಿತಾಭ್ ಬಚ್ಚನ್‌ಗೆ ಕೋವಿಡ್ ಸೋಂಕು ತಗುಲಿತ್ತು. ಅದರಿಂದ ಅವರು ಇನ್ನಷ್ಟು ಅನಾರೋಗ್ಯ ಅನುಭವಿಸಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.