ಸಿನಿಮಾ‌ ಶೂಟಿಂಗ್ ಇದ್ರೂ ಕೂಡ ಕೇವಲ ಎರಡು ಗಂಟೆ ನಿದ್ದೆ ಮಾಡಿ ಅವಳಿ ಜವಳಿ ಮಗುವಿಗೆ ಜನ್ಮ ಕೊಟ್ಟ ಅಮೂಲ್ಯ

 | 
Hh

ಸ್ಯಾಂಡಲ್‌ವುಡ್‌ ಗೋಲ್ಡನ್‌ ಕ್ವೀನ್‌ ಅಮೂಲ್ಯ ಸುಮಾರು ಏಳು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ನಟಿ ಅಮೂಲ್ಯ ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ 'ಕರಾವಳಿ' ಸಿನಿಮಾ ಮೂಲಕ ಅಮೂಲ್ಯ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಮೂಲ್ಯ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್ ದೇವರಾಜ್ ಬಹುನಿರೀಕ್ಷಿತ ಕಂಬಳ ಹಿನ್ನೆಲೆಯುಳ್ಳ ಕಥೆ ಕರಾವಳಿ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಗೋಲ್ಡನ್‌ ಕ್ವೀನ್‌ ಕರಾವಳಿ ಸಿನಿಮಾದಲ್ಲಿ ನಟಿಸುವುದಕ್ಕೆ ಅಮೂಲ್ಯ ಗ್ರೀನ್ ಸಿಗ್ನಲ್ ಕಟ್ಟಿದ್ದು, ಅಧಿಕೃತ ಮಾಹಿತಿ ಅಷ್ಟೇ ಹೊರಬೀಳಬೇಕಿದೆ ಎಂದು ವರದಿಯಾಗಿದೆ.  ಅಮೂಲ್ಯ ಸುಮಾರು 13 ಚಿತ್ರಗಳಲ್ಲಿ ನಟಿಸಿದ್ದವರು, ಇದೀಗ ವಿಭಿನ್ನ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ತುಳುನಾಡಿನ ಕಂಬಳ ಹಿನ್ನೆಲೆಯುಳ್ಳ ಈ ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಬಗ್ಗೆ ಕಥೆ ಹೆಣೆಯಲಾಗಿದೆ. ನಟಿ ಅಮೂಲ್ಯ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಂತರ ನಾಯಕಿಯಾಗಿ ಗೋಲ್ಡನ್ ಸ್ಟಾರ್ ನಟನೆಯ ಚೆಲುವಿನ ಚಿತ್ತಾರ ಮೂಲಕ ಎಂಟ್ರಿ ಕೊಟ್ಟಿದ್ದರು.

ಗೋಲ್ಡನ್‌ ಬೆಡಗಿ ಅಮೂಲ್ಯ 2017ರಲ್ಲಿ ಯೋಗರಾಜ್‌ ಭಟ್ ನಿರ್ದೇಶಿಸಿದ 'ಮುಗುಳು ನಗೆ' ಸಿನಿಮಾದಲ್ಲಿ ಗಣೇಶ್ ಜೊತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದು ಅವರ ಕೊನೆಯ ಸಿನಿಮಾವಾಗಿತ್ತು. ಅಮೂಲ್ಯ 2017ರಲ್ಲಿಯೇ ಜಗದೀಶ್ ಜೊತೆ ಅದ್ದೂರಿಯಾಗಿ ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಮದುವೆ, ಸಾಂಸಾರಿಕ ಜೀವನ, ಮಕ್ಕಳು ಅಂತಲೇ ಬ್ಯುಸಿಯಾಗಿಬಿಟ್ಟರು. 

ಇಷ್ಟು ದಿನ ತಾಯಿತನವನ್ನು ಎಂಜಾಯ್ ಮಾಡುತ್ತಿರುವೆ, ಪದಗಳಲ್ಲಿ ವರ್ಣಿಸಲು ಆಗದು. ಎಕ್ಸೈಟ್‌ ಮತ್ತು ಎಕ್ಸಾಸ್ಟ್‌ ಆಗಿರುವೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ತಕ್ಷಣವೇ ಮತ್ತೊಂದು ಆಪರೇಷನ್ ಅಯ್ತು. ಆ ಸಮಯದಲ್ಲಿ ನನಗೆ ಎರಡು ಗಂಟೆ ಅಷ್ಟೇ ನಿದ್ರೆ ಬರುತ್ತಿತ್ತು. ತಾಯಿತನದಲ್ಲಿ ಒತ್ತಡ ಜಾಸ್ತಿ ಇರುತ್ತದೆ, ಮಕ್ಕಳ ನಗು ತೊದಲು ಮಾತು ಮತ್ತು ತುಂಟಾಟ ನೋಡಿದರೆ ಎಲ್ಲವೂ ಮರೆಯುತ್ತೀವಿ. ಇದೊಂದು ವಂಡರ್‌ಫುಲ್‌ ಫೀಲಿಂಗ್ ಎಂದಿದ್ದಾರೆ ಅಮೂಲ್ಯ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.