ಆ ನಟ ಜೈ ಲಿಗೆ ಹೋಗುತ್ತಿದ್ದಂತೆ ಐಶಾರಾಮಿ ಕಾರಿನಲ್ಲಿ ಹೊರಬಂದ ಅಮೂಲ್ಯ ಜಗದೀಶ್

 | 
Yu

ಖಾಸಗಿ ಜೀವನಕ್ಕೆ ಸಮಯ ಕೊಟ್ಟಿರುವ ನಟಿ ಅಮೂಲ್ಯ ಸಿನಿಮಾ ರಂಗದಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ವಿಚಾರಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.

ಬಾಲ್ಯದಲ್ಲೇ ಕಿರುತೆರೆಯಲ್ಲಿ ಬಣ್ಣ ಹಚ್ಚುವ ಮೂಲಕ ನಟನೆಗೆ ಪ್ರವೇಶಿಸಿದ ಅಮೂಲ್ಯ 2001ರಲ್ಲಿ ಪರ್ವ ಸಿನಿಮಾದಲ್ಲಿ ಮೊದಲ ಬಾರಿಗೆ ಅಧೀಕೃತವಾಗಿ ಚಿತ್ರರಂಗ ಪ್ರವೇಶಿಸಿದರು. ಬಳಿಕ ಲಾಲಿಹಾಡು, ಮಂಡ್ಯ, ಸಜಿನಿ, ಸುಂಟರಗಾಳಿ, ಮಹಾರಾಜ, ನಮ್ಮ ಬಸವ, ಚಂದು ಮೊದಲಾದ ಚಿತ್ರಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿರುವ ನಟಿ ಅಮೂಲ್ಯ ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಮಕ್ಕಳಿಗೆ ನಾಮಕರಣ ಮಾಡಿದ್ದರು.7 ವರ್ಷಗಳ ಹಿಂದೆ ಮುಗುಳು ನಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೂಲ್ಯ ಇದೀಗ ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಜಗದೀಶ್ ಎಂಬುವವರನ್ನು ವಿವಾಹವಾದ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ರು. ಬಳಿಕ ನಟಿ ಮಕ್ಕಳ ಆರೈಕೆಯಲ್ಲೇ ಬ್ಯುಸಿ ಆಗಿದ್ರು.

ಮತ್ತೆ ಕ್ಯಾಮರಾ ಮುಂದೆ ಬರಲು ಅಮೂಲ್ಯ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಮೂಲ್ಯ ರೀ ಎಂಟ್ರಿ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ. ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಮೂಲ್ಯ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 

ಪ್ರಜ್ವಲ್ ದೇವರಾಜ್ ಮತ್ತು ಗುರುದತ್ತ ಗಾಣಿಗ ಅವರ ಬಹು ನಿರೀಕ್ಷಿತ ಸಿನಿಮಾ ಕರಾವಳಿ ಮೂಲಕ ಅಮೂಲ್ಯ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗ್ತಿದೆ. ಪ್ರಜ್ವಲ್ ದೇವರಾಜ್ ಗೆ ಜೋಡಿಯಾಗಿ ಅಮೂಲ್ಯ ಕಾಣಿಸಿಕೊಳ್ಳಲಿದ್ದಾರೆ. ಇದೀಗ ರಾಜರಾಜೇಶ್ವರಿ ನಗರದಲ್ಲಿ ಅಮೂಲ್ಯ ಜೀಪ್ ಓಡಿಸಿ ಗಮನ ಸೆಳೆದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.