ಮಾಚ್೯ 17ಕ್ಕೆ ಆ್ಯಂಕರ್ ಅನುಶ್ರೀ ಮದ್ವೆ ಫಿಕ್ಸ್, ಹುಡುಗ ಯಾರು ಗೊತ್ತಾ

 | 
ಕಕ

 ಕನ್ನಡದ  ಫೇಮಸ್ ನಟಿ ಹಾಗೂ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಯೂಟ್ಯೂಬ್‌ಗಳಲ್ಲಂತೂ ಅನುಶ್ರೀ ಅಂತಾ ಸರ್ಚ್ ಕೊಟ್ಟರೆ, ಕೊನೆಗೂ ಅನುಶ್ರೀ ಮದುವೆ ಫಿಕ್ಷ್‌, ಆ್ಯಂಕರ್‌ ಅನುಶ್ರೀ ಮದುವೆ ವಿಡಿಯೋ ನೋಡಿ, ಇವರೇ ನೋಡಿ ಆ್ಯಂಕರ್‌ ಅನುಶ್ರೀ ಪತಿ ಎಂದೆಲ್ಲಾ ನೂರಾರು ವಿಡಿಯೋಗಳನ್ನು ನೋಡಬಹುದು. 

ನೋಡಲು ತಮಾಷೆಯಾಗಿರುವ ಈ ವಿಡಿಯೋಗಳ ಬಗ್ಗೆ ಅನುಶ್ರೀ ಕೂಡ ಆಗಾಗ ಮಾತನಾಡುತ್ತಾರೆ.ಆದರೆ ಕನ್ನಡದ ಮನೆಮಗಳಾಗಿರುವ ನಿರೂಪಕಿ ಅನುಶ್ರೀ ಅವರ ಮದುವೆ ಮಾತುಕತೆಯಂತೂ ಸದಾ ಸುದ್ದಿಯಲ್ಲಿರುತ್ತದೆ. ಹಿಂದೆಲ್ಲಾ ಮದುವೆ, ಸಂಸಾರದ ಬಗ್ಗೆ ನಿರಾಸಕ್ತಿ ಹೊಂದಿದ್ದ ಅನುಶ್ರೀ ಇತ್ತೀಚಿನ ದಿನಗಳಲ್ಲಿ ಅನುಶ್ರೀ ಮದುವೆಯಾಗಲು ಗ್ರೀನ್‌ ಸಿಗ್ನಲ್‌ ನೀಡುತ್ತಿದ್ದು, ದಾಂಪತ್ಯ ಜೀವನದತ್ತ ಒಲವು ತೋರುತ್ತಿದ್ದಾರೆ. 

ಈ ಬಗ್ಗೆ ಇತ್ತೀಚಿನ ಕೆಲವು ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಇದೀಗ ಮುಂದಿನ ವರ್ಷ ನಿರೂಪಕಿ ಅನುಶ್ರೀ ಮದುವೆಯಾಗುವುದು ಖಚಿತವಾಗಿದ್ದು, ದಿನಾಂಕ ಕೂಡ ಬಹುತೇಕ ನಿಗದಿಯಾಗಿದೆ.ಇದು ಅನುಶ್ರೀ ಮದುವೆ ಬಗ್ಗೆ ಯಾರೋ ಏನೋ ನೀಡಿರುವ ಹೇಳಿಕೆಯಲ್ಲ ಸ್ವತಃ ಅನುಶ್ರೀಯೇ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಒಂದು ಸಿಕ್ರೇಟ್‌ಅನ್ನು ಬಹಿರಂಗ ಪಡಿಸಿದ್ದಾರೆ.

ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನ, ಸೂರಜ್, ಜಗ್ಗಪ್ಪ ಹಾಗೂ ಗಿಲ್ಲಿ ಅವರನ್ನು ಅನುಶ್ರೀ ತಮ್ಮ ಯೂಟ್ಯೂಬ್‌ ಚಾನೆಲ್‌ಗೆ ಅತಿಥಿಗಳನ್ನಾಗಿ ಕರೆದು ಚಿಟ್‌ ಚಾಟ್‌ ನಡೆಸಿದ್ದರು. ಈ ವೇಳೆ ಅನುಶ್ರೀ ಚೆನ್ನಾಗಿ ಕೂತಿದ್ದೀರಾ ಕಂಡ್ರೋ ಮದುವೆ ಆಗಿರುವವರು ಒಂದೆಡೆ, ಮದುವೆ ಆಗದೆ ಇರೋರು ಮತ್ತೊಂದೆಡೆ ಎಂದು ಕಾಲೆಳೆದರು.


ಮದುವೆ ಬಗ್ಗೆ ಮಾತಾಡಿದಕ್ಕೆ ಉತ್ತರಿಸಿದ ನಟ ಗಿಲ್ಲಿ, ನಾವು ಬೇರೆ ಬೇರೆ ಕುಳಿದಿದ್ದೇವೆ. ಮಧ್ಯದಲ್ಲಿ ಕುಳಿತ ನೀವೂ ಮದುವೆಗೆ ರೆಡಿ ಆಗಿದ್ದೀರಾ ಅನು ಅಕ್ಕ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅನುಶ್ರೀ ಫಿಕ್ಸ್ ಆಗ್ತಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ವರ್ಷ ಮದುವೆ ಊಟ ಹಾಕಿಸುವುದು ಗ್ಯಾರಂಟಿ ಎನ್ನುವ ಸುಳಿವು ನೀಡಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.