ಮ್ಯಾಟ್ರಿಮೋನಿಯ ಮೂಲಕ ಕಾಲೇಜು ಯುವತಿಯರನ್ನು ಬಲೆಗೆ ಬೀಳಿಸಿಕೊಂಡು ಆ ಕೆಲಸ ಮಾ.ಡುತ್ತಿದ್ದ ಆಂಕಲ್; 259 ಹೆಣ್ಣುಮಕ್ಕಳಿಗೆ ಮೋಸ

 | 
Yy

ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿಕೊಂಡು ಮೂವರು ಮಹಿಳೆಯರಿಗೆ ವಂಚಿಸಿ, 259 ಮಹಿಳೆಯರಿಗೆ ವಂಚಿಸಲು ಬಲೆ ಬೀಸಿದ್ದ ಬಟ್ಟೆ ವ್ಯಾಪಾರಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ನರೇಶ್ಪುರಿ ಗೋಸ್ವಾಮಿ ಎನ್ನುವವವನೆ ಆ ಆಸಾಮಿ.

ರಾಜಸ್ಥಾನ ಮೂಲದ ನರೇಶ್ ಉರುಫ್ ಪವನ್ ಅಗರ್ವಾಲ್ ಕಾಟನ್ಪೇಟೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಗಳಿಸುವ ಸಲುವಾಗಿ ಕಸ್ಟಮ್ಸ್ ಅಧಿಕಾರಿ, ಸಾಫ್ಟ್ವೇರ್ ಎಂಜಿನಿಯರ್ ಸೋಗಿನಲ್ಲಿ ಪ್ರೊಫೈಲ್ ಸೃಷ್ಟಿಸಿ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿಅಪ್ಲೋಡ್ ಮಾಡಿದ್ದ. ಜತೆಗೆ, ವೈವಾಹಿಕ ಸಂಬಂಧಕ್ಕೆ ಸಂಬಂಧಿಸಿದ ಅಗರ್ಸೇನ್ಜಿ ವೈವಾಹಿಕ ಮಂಚ್ ವಾಟ್ಸ್ಯಾಪ್ ಗ್ರೂಪ್ಗೆ ಸೇರಿಕೊಂಡಿದ್ದ. 

ವಿಚ್ಛೇದಿತ ಹಾಗೂ ವಿಧವೆಯರನ್ನು ಮದುವೆಯಾಗುವುದಾಗಿ ನಂಬಿಸಿ ಅವರ ಜತೆ ಸಲುಗೆ ಬೆಳೆಸಿದ್ದ. ಬೆಂಗಳೂರಿನ ಓರ್ವ ಮಹಿಳೆ ಸೇರಿ ಮೂವರಿಂದ ಮದುವೆ ಆಮಿಷವೊಡ್ಡಿ ಹಣ ಪಡೆದು ವಂಚಿಸಿದ್ದ. ಜತೆಗೆ, ಬೇರೆ ಬೇರೆ ರಾಜ್ಯಗಳ 259 ಮಹಿಳೆಯರ ಜತೆ ಚಾಟಿಂಗ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ ತಿಂಗಳಲ್ಲಿಕೊಯಮತ್ತೂರಿನ 35 ವರ್ಷದ ವಿಚ್ಛೇದಿತ ಮಹಿಳೆಯೊಬ್ಬರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ನರೇಶ್‌, ತನ್ನ ಹೆಸರನ್ನು ಪವನ್‌ ಅಗರ್ವಾಲ್‌ ಎಂದು ಹೇಳಿಕೊಂಡಿದ್ದ. ತಾನು ಕಸ್ಟಮ್ಸ್‌ ಅಧಿಕಾರಿಯಾಗಿದ್ದು, ಎರಡನೇ ಮದುವೆಯಾಧಿಗಲು ಸಿದ್ಧನಿರುವುದಾಗಿ ತಿಳಿಸಿದ್ದ. ಹೀಗಾಗಿ, ಮಹಿಳೆ ಪೋಷಕರು ಮದುವೆ ಕುರಿತು ಮಾತನಾಡಲು ಬೆಂಗಳೂರಿಗೆ ಬರುವುದಾಗಿ ತಿಳಿಸಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಫೋನ್‌ ಮಾಡಿದ್ದ ಪವನ್‌, ತುರ್ತಾಗಿ ಕೆಲಸವಿದ್ದು, ನನ್ನ ಬದಲಿಗೆ ಚಿಕ್ಕಪ್ಪ ಬಂದು ಮದುವೆ ಕುರಿತು ಮಾತನಾಡುತ್ತಾರೆ ಎಂದಿದ್ದ.

ಇದಾದ ಕೆಲ ಸಮಯದ ಬಳಿಕ ಅವರ ಬಳಿ ಹೋಗಿದ್ದ ವ್ಯಕ್ತಿಯೊಬ್ಬ ತಾನು ಪವನ್‌ ಚಿಕ್ಕಪ್ಪ ದೀಪಕ್‌ ಎಂದು ಪರಿಚಯಿಸಿಕೊಂಡಿದ್ದ. ಮಾತುಕತೆ ಬಳಿಕ ಪರ್ಸ್‌ ಮನೆಯಲ್ಲಿಟ್ಟು ಬಂದಿದ್ದು, ತುರ್ತಾಗಿ ಟಿಕೆಟ್‌ ಬುಕ್‌ ಮಾಡಲು 10 ಸಾವಿರ ರೂ. ಕೊಡಿ, ಮನೆಗೆ ಹೋದ ಬಳಿಕ ವಾಪಸ್‌ ನೀಡುತ್ತೇನೆ ಎಂದಿದ್ದ. ಅವನ ಮಾತನ್ನು ನಂಬಿದ ಮಹಿಳೆ ಪೋಷಕರು ಹಣ ಕೊಟ್ಟಿದ್ದರು. ಹಣ ಪಡೆದ ಬಳಿಕ ದೀಪಕ್‌ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದ.

ಈ ಘಟನೆ ಬಳಿಕ ಪವನ್‌ ದೂರವಾಣಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಅನುಮಾನಗೊಂಡ ಮಹಿಳೆ ಪೋಷಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮೊಬೈಲ್‌ ಕರೆಗಳ ಆಧಾರದಲ್ಲಿ ಕಾಟನ್‌ಪೇಟೆಯಲ್ಲಿದ್ದ ನರೇಶ್‌ ಪುರಿಯನ್ನು ಬಂಧಿಸಿದಾಗ ಈತನ ವಂಚನೆಯ ವೃತ್ತಾಂತ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.